ಬೆಳಗಾವಿ ೬- ಶಿಕ್ಷಕ ದಿನಾಚರಣೆಯ ನೆನಪಲ್ಲಿ ನಗರದ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಇದೇ ದಿ. ೯ ಶನಿವಾರದಂದು ಸಾ. ೪-೩೦ “ಗುರುಶಿಷ್ಯರ ವಿನೋದ ಪ್ರಸಂಗಗಳು” ಎಂಬ ವಿನೂತನ ಕಾರ್ಯಕ್ರಮವನ್ನು ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದಾರೆ.
ಅಧ್ಯಕ್ಷತೆಯನ್ನು ನಿವೃತ್ತ ಪ್ರಾಚಾರ್ಯ ಪ್ರೊ. ಎಂ. ಎಸ್ ಇಂಚಲ ವಹಿಸಲಿದ್ದಾರೆ. ಸಪ್ತಸ್ವರ ಸಂಗೀತ ವಿದ್ಯಾಲಯದ ಪ್ರಾಚಾರ್ಯೆ ನಿರ್ಮಲಾ ಪ್ರಕಾಶ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರೊ. ಜಿ. ಕೆ. ಕುಲಕರ್ಣಿ ಆಗಮಿಸಲಿದ್ದಾರೆ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಬಸವರಾಜ ಧಾರವಾಡ, ನಾದಸುಧಾ ಸಂಗೀತ ವಿದ್ಯಾಲಯದ ಸ್ಥಾಪಕರಾದ ಕೆ ಸತ್ಯನಾರಾಯಣ, ನಿವೃತ್ತ ಶಿಕ್ಷಕ ಜಿ. ಎಸ್ ಸೋನಾರ, ಪ್ರಧಾನ ಅಂಚೆ ಕಚೇರಿ ಮುಖ್ಯಸ್ಥರೆಂದು ನಿವೃತ್ತರಾದ ವಿ. ಆರ್ ಕುಲಕರ್ಣಿ ಇವರು ಗುರು ಶಿಷ್ಯರ ಅನುಭವಗಳನ್ನು ಹಂಚಿಕೊಳ್ಳಲಿದ್ದು ಆನಂದ ಪುರಾಣಿಕ ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ.
Gadi Kannadiga > Local News > ಗುರುಶಿಷ್ಯರ ವಿನೋದ ಪ್ರಸಂಗಗಳು
ಗುರುಶಿಷ್ಯರ ವಿನೋದ ಪ್ರಸಂಗಗಳು
Suresh07/09/2023
posted on
More important news
ಬೆಳಗಾವಿ ನಗರಕ್ಕೆ ವಿಶ್ವ ಬ್ಯಾಂಕ್ ತಂಡ ಭೇಟಿ
25/09/2023
ಪೌರ ಕಾರ್ಮಿಕರ ದಿನಾಚರಣೆ
23/09/2023
ಬೆಳಗಾವಿ ನಗರಕ್ಕೆ ವಿಶ್ವ ಬ್ಯಾಂಕ್ ತಂಡದ ಭೇಟಿ
22/09/2023