ಮೂಡಲಗಿ: ‘ಶಿಕ್ಷಕರು ಶೈಕ್ಷಣಿಕ ಬದಲಾವಣೆಗಳನ್ನು ತಿಳಿದುಕೊಂಡು ಮಕ್ಕಳ ಭವಿಷ್ಯ ರೂಪಿಸಲು ಪ್ರಾಮಾಣಿಕವಾಗಿ ಕೆಲಸಮಾಡಬೇಕು’ ಎಂದು ಧಾರವಾಡದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರ ಕಚೇರಿಯ ಸಹ ನಿರ್ದೇಶಕ ಗಜಾನನ ಮನ್ನಿಕೇರಿ ಹೇಳಿದರು.ತಾಲ್ಲೂಕಿನ ಕಲ್ಲೋಳಿಯ ಸಿಆರ್‌ಸಿ ಕಚೇರಿಗೆ ಭೇಟ್ಟಿ ನೀಡಿ ಶಿಕ್ಷಕರನ್ನು ಉದ್ಧೇಶಿಸಿ ಮಾತನಾಡಿದ ಅವರು ಶಿಕ್ಷಣದಲ್ಲಿ ಗುಣಮಟ್ಟ ಅಳವಡಿಸುವುದು ಮಹತ್ವದಾಗಿದ್ದು, ಕಲ್ಲೋಳಿಯ ಸಿಆರ್‌ಸಿಯು ಮಾದರಿಯಾಗಿದೆ. ಶಿಕ್ಷಕರಿಗೆ ಎಲ್ಲ ಮಾಹಿತಿಯನ್ನು ನೀಡುವ ಕೇಂದ್ರವಾಗಿದ್ದು ಸಿಆರ್‌ಪಿ ಗಣಪತಿ ಉಪ್ಪಾರ ಅವರ ಕಾರ್ಯವು ಶ್ಲಾಘನೀಯವಾಗಿದೆ ಎಂದು ಪ್ರಾಸಂಸಿದರು.
ಈ ಸಂದರ್ಭದಲ್ಲಿ ಸಂಪನ್ಮೂಲವ್ಯಕ್ತ ಜಿ.ಕೆ. ಉಪ್ಪಾರ, ಹಿರಿಯ ಮುಖ್ಯ ಶಿಕ್ಷಕ ಎಸ್.ಬಿ. ಗಿಡಗೌಡ್ರ, ಹಿರಿಯ ಶಿಕ್ಷಕ ಎಸ್.ಬಿ. ಗೋಸಬಾಳ, ಆರ್.ವೈ. ಹತ್ತಿಕಟಗಿ ಇದ್ದರು.
Gadi Kannadiga > Local News > ಕಲ್ಲೋಳಿಯ ಸಿಆರ್‌ಸಿ ಕಚೇರಿಗೆ ಗಜಾನನ ಮನ್ನೀಕೇರಿ ಭೇಟಿ
ಕಲ್ಲೋಳಿಯ ಸಿಆರ್‌ಸಿ ಕಚೇರಿಗೆ ಗಜಾನನ ಮನ್ನೀಕೇರಿ ಭೇಟಿ
Suresh08/04/2023
posted on
