This is the title of the web page
This is the title of the web page

Please assign a menu to the primary menu location under menu

State

ಗಾಂಧಿ ಜಯಂತಿ : ಮಕ್ಕಳ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗೆ ಹೆಸರು ನೋಂದಾಯಿಸಿ


ಕೊಪ್ಪಳ, ಅ. ೧೩ : ಗಾಂಧಿ ಜಯಂತಿ-೨೦೨೨ರ ಅಂಗವಾಗಿ ಮಕ್ಕಳಿಗೆ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಭಾಗವಹಿಸುವರು ಹೆಸರು ನೋಂದಾಯಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಬೆಂಗಳೂರಿನ ಬಾಲಭವನ ಸೊಸೈಟಿ ವತಿಯಿಂದ ಗಾಂಧಿ ಜಯಂತಿ ದಿನಾಚರಣೆ-೨೦೨೨ರ ಅಂಗವಾಗಿ ಮಕ್ಕಳಿಗೆ ಜಿಲ್ಲಾ ಮಟ್ಟದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ೫ ರಿಂದ ೧೬ ವರ್ಷದ ಒಳಗಿನ ಆಸಕ್ತಿಯುಳ್ಳ ಸರಕಾರಿ ಶಾಲೆಗಳ ಸೌಲಭ್ಯ ವಂಚಿತರಾದ ಮತ್ತು ಗ್ರಾಮೀಣ ಮಕ್ಕಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಅಕ್ಟೋಬರ್ ೧೮ ರಂದು ಸಂಜೆ ೫-೩೦ ಗಂಟೆಯೊಳಗಾಗಿ ಕೊಪ್ಪಳ ಜಿಲ್ಲಾ ಆಡಳಿತ ಭವನದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಛೇರಿಯಲ್ಲಿ ಹೆಸರನ್ನು ನೋಂದಾಯಿಸಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಚಿತ್ರಕಲೆ ಸ್ಪರ್ಧೆ ೫ ರಿಂದ ೧೬ ವರ್ಷ ಮಕ್ಕಳಿಗೆ ಮಾತ್ರವಾಗಿದ್ದು, ಚಿತ್ರಕಲೆ ಸ್ಪರ್ಧೇಯು ೫ ರಿಂದ ೮ ವರ್ಷ, ೯ ರಿಂದ ೧೨ ವರ್ಷ, ೧೩ ರಿಂದ ೧೬ ವರ್ಷದ ಮಕ್ಕಳು ಎಂಬ ಮೂರು ವಿಭಾಗಗಳನ್ನು ಹೊಂದಿದೆ. ಪ್ರಬಂಧ ಸ್ಪರ್ಧೆಯಲ್ಲಿ ೧೦ ರಿಂದ ೧೨ ವರ್ಷ ಮತ್ತು ೧೩ ರಿಂದ ೧೬ ವರ್ಷದ ಮಕ್ಕಳು ಎಂಬ ಎರಡು ವಿಭಾಗಗಳನ್ನು ಹೊಂದಿದ್ದು, ಈ ಎಲ್ಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ನಗದು ಬಹುಮಾನ ನೀಡಲಾಗುವುದು ಮತ್ತು ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಮಾಣ ಪತ್ರ ನೀಡಲಾಗುವುದು. ಸ್ಪರ್ಧೆಯಲ್ಲಿ ತೀರ್ಪುಗಾರರ ಆಯ್ಕೆಯೇ ಅಂತಿಮವಾಗಿರುತ್ತದೆ.
ಸ್ಪರ್ಧೆಗ¼ಲ್ಲಿ ಭಾಗವಹಿಸುವ ಮಕ್ಕಳಿಗೆ ಹಾಗೂ ಸಿಬ್ಬಂದಿಗಳಿಗೆ ಯಾವುದೇ ರೀತಿಯ ದಿನ ಭತ್ಯೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಛೇರಿಯನ್ನು ಅಥವಾ ದೂ.ಸ: ೦೮೫೩೯-೨೨೨೭೦೩, ಮೊ:೯೯೭೨೯೪೪೪೬೭ ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply