ಯರಗಟ್ಟಿ: ಹಬ್ಬಗಳನ್ನು ಒಂದಾಗಿ ಆಚರಿಸಿದರೆ ಶಾಂತಿ, ಸಹೋದರತ್ವ ಹಾಗೂ ಸೌಹಾರ್ದತೆ ಹೆಚ್ಚುತ್ತದೆ ಎಂದು ಮುರಗೋಡ ಸಿಪಿಐ ಐ.ಎಂ.ಮಠಪತಿ ಹೇಳಿದರು.
ಸಮೀಪದ ಬೆನಕಟ್ಟಿ ಗ್ರಾಮದ ದುರ್ಗಾದೇವಿ ದೇವಸ್ಥಾನದ ಸಭಾ ಭವನದಲ್ಲಿ ಗಣೇಶ ಚತುರ್ಥಿ ನಿಮಿತ್ಯ ಇತ್ತೀಚಗೆ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಾಡಲು ಪೋಲಿಸ ಇಲಾಖೆ, ಹೆಸ್ಕಾಂ ಅನುಮತಿ ಕಡ್ಡಾಯ ಪಡೆದುಕೊಳ್ಳಬೇಕು ಎಂದರು.
ಪಿಎಸ್‌ಐ ಐ.ಎಂ.ಹಿರೇಗೌಡರ ಮಾತನಾಡಿ, ಸಮಾಜದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಹಬ್ಬ ಆಚರಿಸಬೇಕು, ಗಣೇಶ ಮಂಟಪದಲ್ಲಿ ಅಕ್ರಮ ಚಟುವಟಿಕೆ ಕಂಡುಬಂದಲ್ಲಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದರು.ತಾಪಂ ಮಾಜಿ ಸದಸ್ಯ ರುದ್ರಪ್ಪ ರೇವಣ್ಣವರ, ಪಂಚಪ್ಪ ಮಾತಾರಿ, ಪ್ರಾಕಾಶ ಸಾವಳಗಿ, ಮಾಯಪ್ಪ ಚೂರಿ, ಭೀರಪ್ಪ ಕುರಿ, ಎ.ಐ.ಶಿರಸಂಗಿ, ಪ್ರಕಾಶ ಕಲ್ಲೆದ, ರಾಜು ಗಯ್ಯಾಳಿ, ಸುರೇಶ ಸಾವಳಗಿ, ಈರಯ್ಯ ಹಿರೇಮಠ, ಗಿರೀಶ ಜಕಬಾಳ, ಅಶೋಕ ಯರಝರ್ವಿ, ಮಹಾದೇವ ಹೂಲಿ, ಶ್ರೀಶೈಲ ಕುಸಲಿ, ಮರೆಪ್ಪ ಹೊರಟ್ಟಿ, ಮರೆಪ್ಪ ಸಾವಳಗಿ, ಸೇರಿದಂತೆ ಇತರರು ಇದ್ದರು.
Gadi Kannadiga > Local News > ಗಣೇಶ ಚತುರ್ಥಿ ನಿಮಿತ್ಯ ಶಾಂತಿ ಸ¨
ಗಣೇಶ ಚತುರ್ಥಿ ನಿಮಿತ್ಯ ಶಾಂತಿ ಸ¨
Suresh09/09/2023
posted on
