ಗಡಿಕನ್ನಡಿಗ ಸುದ್ದಿ
ಖಾನಾಪುರ: ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲು ಖಾನಾಪುರ ಪೊಲೀಸರು ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿದರು. ಇನ್ಸ್ಪೆಕ್ಟರ್ ಎಲ್ ಎಚ್ ಗೌಂಡಿ ಅವರು ಶಾಂತಿಯುತವಾಗಿ ಹಬ್ಬ ಆಚರಿಸಲು ಮತ್ತು ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ಸಾರ್ವಜನಿಕರಿಗೆ ಮನವಿ ಮಾಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಚತುರ್ಥಿಯನ್ನು ಆಚರಿಸುವವರು ಎಲ್ಲಾ ಕಾರ್ಯಕ್ರಮಗಳನ್ನು, ಮೆರವಣಿಗೆಗಳನ್ನು ಶಾಂತಿಯುತವಾಗಿ ನಡೆಸಬೇಕು, ಸಾರ್ವಜನಿಕರ ಹಿತದೃಷ್ಟಿ, ಸುರಕ್ಷತೆಯನ್ನು ಮನಗಂಡು ಎಲ್ಲಾ ವ್ಯವಸ್ಥೆಗಳನ್ನು ಕ್ರಮಬದ್ದವಾಗಿ ನಿರ್ವಹಿಸುವುದು ಸಂಘಟಕರ ಜವಾಬ್ದಾರಿಯಾಗಿರುವುದರಿಂದ ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.
ಗಣೇಶ ಚತುರ್ಥಿ ಮತ್ತು ಈದ್-ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ಸಾರ್ವಜನಿಕರು ಶಾಂತಿ ಮತ್ತು ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸಲು ಅನುಕೂಲವಾಗುವಂತೆ ಪೊಲೀಸ್ ಇಲಾಖೆಯು ಸಜ್ಜಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಖಾನಾಪುರ,ದೇವಲತ್ತಿ ಹಾಗೂ ಪಾರಿಶ್ವಾಡ ಪ್ರಮುಖ ಬೀದಿ ಮತ್ತು ರಸ್ತೆಗಳಲ್ಲಿ ಪಿಎಸಾಯ್ ಬಿರಾದಾರ(ಕಾ.ಸೂ),ನಿರಂಜನಸ್ವಾಮಿ,ಹಣಮಂತ(ಪ್ರೊಬೇಶನರಿ) ನೇತೃತ್ವದಲ್ಲಿ ಪೊಲೀಸರಿಂದ ಪಥಸಂಚಲನ ನಡೆಸಲಾಯಿತು.