ಕೊಪ್ಪಳ, ಅ. 08 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಜಿಲ್ಲಾ ವಾರ್ತಾಧಿಕಾರಿಯಾಗಿ ಗವಿಸಿದ್ದ ಬಿ.ಹೊಸಮನಿ ಅವರು ಇತ್ತೀಚೆಗೆ ಅಧಿಕಾರ ಸ್ವೀಕರಿಸಿದರು.
ಗವಿಸಿದ್ಧ ಬಿ.ಹೊಸಮನಿ ಅವರು ಈ ಹಿಂದೆ ಬೀದರ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಜಿಲ್ಲಾ ವಾರ್ತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಬಿ.ವಿ.ತುಕಾರಾಂರಾವ್ ಅವರು ಕೊಪ್ಪಳ ಜಿಲ್ಲೆಯಿಂದ ಚಿತ್ರದುರ್ಗ ಜಿಲ್ಲೆಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆಯ ಪ್ರಭಾರವನ್ನು ಗವಿಸಿದ್ಧ ಹೊಸಮನಿ ಅವರು ವಹಿಸಿಕೊಂಡರು. ಕಚೇರಿಯ ಸಿಬ್ಬಂದಿಯವರು ಗವಿಸಿದ್ಧ ಅವರಿಗೆ ಆತ್ಮೀಯವಾಗಿ ಸ್ವಾಗತ ಕೋರಿದರು.
Gadi Kannadiga > State > ಕೊಪ್ಪಳ ಜಿಲ್ಲಾ ವಾರ್ತಾಧಿಕಾರಿಯಾಗಿ ಗವಿಸಿದ್ಧ ಬಿ. ಹೊಸಮನಿ ಅಧಿಕಾರ ಸ್ವೀಕಾರ