This is the title of the web page
This is the title of the web page

Please assign a menu to the primary menu location under menu

Local News

ಜಿ.ಸಿ.ಟಿ.ಸಿ (ಬಿ.ಇಡಿ) ಕಾಲೇಜು: ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಗುರುವಂದನಾ ಕಾರ್ಯಕ್ರಮ ಯುವ ಪೀಳಿಗೆಗೆ ಸ್ಪೂರ್ತಿದಾಯಕವಾಗಲಿ: ಡಾ. ಬಸವರಾಜ ಜಗಜಂಪಿ


ಬೆಳಗಾವಿ:  ಪ್ರತಿಯೊಬ್ಬ ಗುರುವೂ, ತನ್ನ ಶಿಷ್ಯ ತನಗಿಂತ ಪಾಂಡಿತ್ಯಪೂರ್ಣ ವಿದ್ವಾಂಸರಾಗಬೇಕೆಂದು ಬಯಸುತ್ತಾರೆ. ಇಂತಹ ಗುರು-ಶಿಷ್ಯರ ಸಂಬಂಧವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಈ ಗುರುವಂದನಾ ಕಾರ್ಯಕ್ರಮ ಅತ್ಯಂತ ಔಚಿತ್ಯಪೂರ್ಣವಾಗಿದೆ. ಗುರು-ಶಿಷ್ಯರ ಸಂಬಂಧವನ್ನು ಗಟ್ಟಿಗೊಳಿಸುವ ಈ ಕಾರ್ಯಕ್ರಮ ಯುವ ಪೀಳಿಗೆಗೂ ಸ್ಪೂರ್ತಿದಾಯಕವಾಗಲಿ ಎಂದು ಬೆಳಗಾವಿ ಲಿಂಗರಾಜ ಮಹಾವಿದ್ಯಾಲಯ ವಿಶ್ರಾಂತ ಪ್ರಾಚಾರ್ಯರಾದ ಡಾ. ಬಸವರಾಜ ಜಗಜಂಪಿ ಹೇಳಿದರು.

ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ) ಹಾಗೂ 2003-0 4ನೇ ಹಳೆಯ ಸಾಲಿನ ವಿದ್ಯಾರ್ಥಿಗಳ ಸಹಯೋಗದಲ್ಲಿ ಶನಿವಾರ (ಸೆ.09) ನಗರದ ಚನ್ನಮ್ಮ ವೃತ್ತದ ಹತ್ತಿರ, ಜಿ.ಸಿ.ಟಿ.ಸಿ  (ಬಿ.ಇಡಿ) ಕಾಲೇಜು ಸಭಾಂಗಣದಲ್ಲಿ ಗುರುವಂದನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ವಿಚಾರ ದೊಡ್ಡದಾದರೆ ಮಾತ್ರ ವ್ಯಕ್ತಿಗಳು ದೊಡ್ಡವರಾಗುತ್ತಾರೆ. ದೊಡ್ಡ ಮಟ್ಟದ ಆಲೋಚನೆಗಳಿಂದ ದೊಡ್ಡ ಕಾರ್ಯಗಳು ಸಾಧ್ಯ. ಮಾತೃ ಸಂಸ್ಥೆಗೆ ಕೊಡುಗೆ ನೀಡುವ ನಿಮ್ಮ ಚಿಂತನೆ ಬಹಳ ದೊಡ್ಡದು. ರಾಷ್ಟ್ರವನ್ನು ಕಟ್ಟುವ ಕೆಲಸ ಶಿಕ್ಷಕರ ಮೇಲಿದೆ. ಒಳ್ಳೆಯ ಆಲೋಚನೆಯಿಂದ ಒಳ್ಳೆಯ ಕಾರ್ಯ ಸಾಧ್ಯ ಎಂದು ಹೇಳಿದರು.

20 ವರ್ಷಗಳ ಹಿಂದಿನ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಸಂತಸ ತಂದಿದೆ. ಎಲ್ಲರನ್ನೂ ಒಗ್ಗೂಡಿಸಿ ಈ ಕನಸು ನನಸಾಗಿದೆ. ಡಾ. ಅಬ್ದುಲ್ ಕಲಾಂ ಅವರು ಹೇಳಿದಂತೆ ಕಂಡ ಕನಸು ನನಸು ಮಾಡಿ, ಸಹಕಾರಗೊಳಿಸಿದಿರಿ. ಈಗಾಗಲೇ ನೀವು ಶಿಕ್ಷಣ ಪಡೆದು, ಎಲ್ಲರೂ ಉನ್ನತ ಸ್ಥಾನಗಳಲ್ಲಿ ಇದ್ದೀರಿ. ನಿಮ್ಮ ಸಹಕಾರ ಮನೋಭಾವನೆಯಿಂದ ಈ ಮಟ್ಟದ ದೊಡ್ಡ ಕಾರ್ಯಕ್ರಮ ಆಯೋಜನೆಗೆ ಸಾಧ್ಯವಾಗಿದೆ.

ಓದಿಗಿಂತ ಜ್ಞಾನ ಸಂಪಾದನೆ ಮುಖ್ಯ:

ಕನ್ನಡ ಮಾದ್ಯಮದಲ್ಲಿ ಓದಿ, ಉನ್ನತ ಹುದ್ದೆ ಅಲಂಕರಿಸಿದ ಸಾಕಷ್ಟು ಉದಾಹರಣೆಗಳಿವೆ. ಈಗಾಗಲೇ ಕನ್ನಡ ಮಾಧ್ಯಮದಲ್ಲಿ ಓದಿ ರಾಜ್ಯದ ಎಲ್ಲಾ ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಒಳ್ಳೆಯ ವಿಚಾರಗಳು ನಮ್ಮಲ್ಲಿ ಮೈಗೂಡಿಸಿಕೊಳ್ಳಬೇಕು.
ಎಲ್ಲಾ ಸಾಹಿತಿಗಳು, ಸಾಧಕರು, ತಮ್ಮ ಮಾತೃ ಮಾಧ್ಯಮದಲ್ಲಿ ಓದಿ ಸಾಧಕರಗಿದ್ದಾರೆ. ಯಾವ ಮಾಧ್ಯಮದಲ್ಲಿ ಓದಿದ್ದೇವೆ ಎಂಬುದು ಮುಖ್ಯವಲ್ಲ, ಎಷ್ಟು ಜ್ಞಾನ ಸಂಪಾದಿಸಿದ್ದೇವೆ ಎಂಬುದು ಮುಖ್ಯ ಎಂದು  ಹೇಳಿದರು.

ಮನಃ ಮೆಚ್ಚುವ ಶಿಕ್ಷಕರಾಗಿ:

ಪುಸ್ತಕ ಮನುಷ್ಯನ ಗೆಳೆಯಾ, ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಓದಿನಿಂದ ಶಿಕ್ಷಣ ವೃದ್ಧಿಯಾಗುತ್ತದೆ.
ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿ ಲಭಿಸಿವೆ. ಜಗತ್ತಿನ ಅತ್ಯಂತ ಶ್ರೀಮಂತ ಭಾಷೆ ಕನ್ನಡ ಭಾಷೆಯಾಗಿದೆ.
ಸ್ವ-ಸಂತೋಷದಿಂದ ಶಿಕ್ಷಣ ನೀಡಬೇಕು ಪದವಿ, ಬಿರುದು ಸನ್ಮಾನಕ್ಕಲ್ಲ. ಶಿಕ್ಷಕರಿಗೆ ಸಮಯ ಪ್ರಜ್ಞೆ, ಭಾಷಾ ಪ್ರೌಢಿಮೆ ಇರಬೇಕು. ಸಮಾಜಕ್ಕೆ ಜನ ಮೆಚ್ಚುವ ಶಿಕ್ಷಕರಾಗದೆ ನಿಮ್ಮ ಮನಃ ಮೆಚ್ಚುವ ಶಿಕ್ಷಕರಾಬೇಕು ಎಂದು ಲಿಂಗರಾಜ ಮಹಾವಿದ್ಯಾಲಯ ಪ್ರಾಚಾರ್ಯರಾದ ಡಾ. ಬಸವರಾಜ ಜಗಜಂಪಿ ಅವರು ತಿಳಿಸಿದರು.

ಈ ವೇಳೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಳಗಾವಿ ಸರ್ಕಾರಿ ಶಿಕ್ಷಕರ ಶಿಕ್ಷಣ (ಬಿ.ಇಡಿ) ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಸಹ ನಿರ್ದೇಶಕರಾದ ಎಮ್.ಎಮ್. ಸಿಂಧೂರ ಅವರು ತಂದೆ, ತಾಯಿ, ದೇಶ, ಭಾಷೆ, ಶಿಕ್ಷಕರು, ಶಿಕ್ಷಣ ಸಂಸ್ಥೆ ಸೇರಿದಂತೆ ನಮ್ಮ ಏಳಿಗೆಯಲ್ಲಿ ಬಂದು ಹೋಗಿರುವ ಎಲ್ಲದಕ್ಕೂ ನಾವು ಧನ್ಯವಾದಗಳು ಅರ್ಪಿಸಬೇಕು. ಜೀವನದಲ್ಲಿ ಸಮಸ್ಯೆಗಳು ಸಹಜ, ಸಮಸ್ಯೆ ಎದುರಿಸಿ ನಿಂತಾಗ ಮಾತ್ರ ಯಶಸ್ಸು ಸಾಧ್ಯ. ಹಳೆಯ ವಿದ್ಯಾರ್ಥಿಗಳ ಯಶಸ್ಸು ಕಂಡು ಬಹಳ ಸಂತೋಷವೆನಿಸಿದೆ.

ಕೃತಜ್ಞತಾ ಗುಣ ಬೆಳೆಸಿಕೊಳ್ಳಿ :

ನಾವು ಇಂದು ಏನಾದರೂ ಗಳಿಸಿದ್ದರೆ ಅದೆಲ್ಲವೂ ಈ ಸಮಾಜದಿಂದ ಗಳಿಸಿದ್ದೆ. ಹಾಗಾಗಿ ಈ ಸಮಾಜದಿಂದ ಪಡೆದ ಒಂದಷ್ಟನ್ನಾದರೂ ನಾವು ಮತ್ತೆ ಸಮಾಜಕ್ಕೆ ವಾಪಸ್ ಮಾಡಬೇಕಾಗುತ್ತದೆ. ಆ ಮೂಲಕ ಅಕ್ಷರ ಕಲಿಸಿದ ಗುರುಗಳು, ಜನ್ಮ ಕೊಟ್ಟ ಹೆತ್ತವರು, ಆಡಿ ಬೆಳೆದ ಭೂಮಿಯ ಋಣವನ್ನು ತೀರಿಸಲು ಸಾಧ್ಯವಾಗುತ್ತದೆ ಎಂದರು.

ಸ್ಪೂರ್ತಿದಾಯಕ ಕಾರ್ಯಕ್ರಮಗಳ ಅಗತ್ಯವಿದೆ:

ಉದ್ಯೋಗ ಇನ್ನಿತರೆ ಕಾರಣಗಳಿಗಾಗಿ ಹುಟ್ಟಿದ ಊರು ಬಿಟ್ಟು ಬೇರೆಲ್ಲೋ ನೆಲೆಸಿದವರು ತಮ್ಮ ದಿನನಿತ್ಯದ ಒತ್ತಡ ಜೀವನದಲ್ಲಿ ಹುಟ್ಟಿದ ಊರು, ಹೆತ್ತವರು, ಅಕ್ಷರ ಕಲಿಸಿದ ಗುರುಗಳನ್ನು ನೆನೆಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಿರಿಯ ವಿದ್ಯಾರ್ಥಿಗಳೆಲ್ಲರನ್ನೂ ಒಟ್ಟುಗೂಡಿಸುವ, ತಮ್ಮ ಹಳೆಯ ದಿನಗಳನ್ನು ಮೆಲಕು ಹಾಕುವಂತಹ ಸುಂದರ ಕ್ಷಣಗಳಿಗೆ ಸಾಕ್ಷಿಯಾದ ಇಂತಹ ಕಾರ್ಯಕ್ರಮಗಳ  ಅಗತ್ಯವಿದೆ.

ವಿದ್ಯಾರ್ಥಿಗಳ ಭದ್ರ ಭವಿಷ್ಯಕ್ಕೆ ಸುಭದ್ರ ಬುನಾದಿ ಹಾಕುವಲ್ಲಿ ಶಿಕ್ಷಕರ ಪಾತ್ರ ಅತಿಮುಖ್ಯವಾಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಹಂತದಲ್ಲಿ ಬರುವ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಶಿಕ್ಷಕರ ಪಾತ್ರ ಅನನ್ಯವಾಗಿದೆ. ಭವಿಷ್ಯ ರೂಪಿಸುವ ಶಿಕ್ಷಕರನ್ನು ನೆನಪಿಸಿಕೊಂಡು ಗೌರವಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಆದ್ಯ ಕರ್ತವ್ಯವಾಗಿದೆ ಎಂದು ಪ್ರಾಚಾರ್ಯ ಎಂ.ಎಂ ಸಿಂಧೂರ ಅವರು ಹೇಳಿದರು.

ಜಿ.ಸಿ.ಟಿ.ಸಿ (ಬಿ.ಇಡಿ) ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಕೆ.ಎಲ್.ಅಶೋಕ ಕುಮಾರ ಅವರು ಮಾತನಾಡಿ 2003-2004ನೇ ಸಾಲಿನ ಬಿಎಡ್ ವಿದ್ಯಾರ್ಥಿಗಳ ಈ ವಂದನಾ ಕಾರ್ಯಕ್ರಮ ಅಚ್ಚರಿ ಮೂಡಿಸಿದೆ. ಯಾಕೆಂದರೆ ಹಳೆಯ ವಿದ್ಯಾರ್ಥಿಗಳನ್ನು 20 ವರ್ಷಗಳ ನಂತರ ಒಟ್ಟಿಗೆ ಸೇರಿಸುವುದು ಸಾಮಾನ್ಯ ಕಾರ್ಯವಲ್ಲ. ಅವರ ಈ ಕೆಲಸಕ್ಕೆ ಧನ್ಯವಾದಗಳು ಎಂದು ತಿಳಿಸಿದರು.

ಬೆಳಗಾವಿ ನಾಡು ಅತಿ ಸುಂದರ, ಆತ್ಮೀಯ ಒಡನಾಟದ ಜನ, ಇಂತಹ ವಿಶೇಷ ಕಾರ್ಯಕ್ರಮ ನಾನು ಕಂಡಿದ್ದು, ಅಪರೂಪದ ಸಂಗತಿ. ಗುರು ಕಾಣಿಕೆ ಸಮರ್ಪಣೆ ಮಾಡಬೇಕು ಎಂಬ ನಿಮ್ಮ ಮನೋಭಾವನೆ ಮೆಚ್ಚುವಂತಹದ್ದು. ಅಂದಿನ ಬಿಎಡ್ ಶಿಕ್ಷಣ ಇವತ್ತಿನ ನಿಮ್ಮ ಬೆಳವಣಿಗೆಗೆ ಕಾರಣವಾಗಿದೆ ಎಂದು ತಿಳಿಸಿದರು.

ತಾಯಿ ಋಣ, ಗುರು ಋಣ ತೀರಿಸಲು ಸಾಧ್ಯವಿಲ್ಲ, ನೀವು ಕಾರ್ಯಕ್ರಮ ಆಯೋಜಿದ್ದು, ನಿಮ್ಮ ಗುಣ, ಶಿಕ್ಷಣ, ಸೇವಾ ಮನೋಭಾವನೆ ತೋರಿಸುತ್ತದೆ.  ಜೀವನದಲ್ಲಿ ಸಮಯ ತುಂಬಾ ಮುಖ್ಯ. ಸಮಯಕ್ಕೆ ಎಲ್ಲರೂ ಬೆಲೆ ಕೊಡಬೇಕು. ಮುಂದಿನ ದಿನಗಳಲ್ಲಿ ನಿಮ್ಮ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ ಎಂದು ನಿವೃತ್ತ ಪ್ರಾಚಾರ್ಯರಾದ ಕೆ.ಎಲ್ ಅಶೋಕ ಕುಮಾರ ಅವರು ತಿಳಿಸಿದರು.

ಸನ್ಮಾನ ಕಾರ್ಯಕ್ರಮ:

ಇದಕ್ಕೆ ಮುಂಚೆ ಹಳೆಯ ವಿದ್ಯಾರ್ಥಿಗಳಿಂದ ಕಾರ್ಯಕ್ರಮದಲ್ಲಿ ಭಾಗಿಯಾದ ಹಿರಿಯ ಶಿಕ್ಷಕರಿಗೆ ಸನ್ಮಾನಿಸಿ, ಗೌರವಿಸಲಾಯಿತು. ಬಳಿಕ ವಿಧ್ಯಾರ್ಥಿಗಳು ತಮ್ಮ ಕಾಲೇಜು ದಿನಗಳ ಅನುಭವ ಹಾಗೂ ಅನಿಸಿಕೆಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಜಿ.ಸಿ.ಟಿ.ಸಿ (ಬಿ.ಇಡಿ) ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಗಳು, ಉಪಸ್ಥಿರಿದ್ದರು. ಹಳೆಯ ವಿದ್ಯಾರ್ಥಿಗಳಾದ ಅಪ್ಪಣ್ಣ ಜಂಬಗಿ ಸ್ವಾಗತ ಕೋರಿದರು, ಗೀತಾ ದೇಸೂರ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಸಂಸ್ಕರಣಾ ನುಡಿ ಮಾಹಂತೇಶ ಕುರಬೇಟ, ಕಿರಣ ಗಣಾಚಾರಿ ನಿರೂಪಿಸಿ, ವಂದಿಸಿದರು.


Leave a Reply