ಕೊಪ್ಪಳ ಏಪ್ರಿಲ್ ೨೦ : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-೨೦೨೩ರ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಗೆ ಸಾಮಾನ್ಯ ವೀಕ್ಷಕರು, ಚುನಾವಣಾ ವೆಚ್ಚ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರು ಆಗಮಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ತಿಳಿಸಿದ್ದಾರೆ.
ಸಾಮಾನ್ಯ ವೀಕ್ಷಕರಾಗಿ ಯಲಬುರ್ಗಾ ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರಗಳಿಗೆ ವಿ.ಸಂಪತ್ ಐಎಎಸ್ ಮೊ.ಸಂ: ೯೩೮೦೨೫೧೬೩೮, ಕುಷ್ಟಗಿ ಮತ್ತು ಕನಕಗಿರಿ ವಿಧಾನಸಭಾ ಕ್ಷೇತ್ರಗಳಿಗೆ ಸ್ವಪ್ನಿಲ್ ಎಂ ನಾಯಕ ಐಎಎಸ್ ಮೊ.ಸಂ: ೯೩೮೦೨೯೪೨೭೫ ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಭಾನಾ ಪ್ರಕಾಶ ಯಾತರಾ ಐಎಎಸ್ ಮೊ.ಸಂ: ೯೩೮೦೨೮೬೦೦೭ ಇವರು ಆಗಮಿಸಿದ್ದಾರೆ.
ಚುನಾವಣಾ ವೆಚ್ಚದ ವೀಕ್ಷಕರಾಗಿ ಕುಷ್ಟಗಿ ಮತ್ತು ಕನಕಗಿರಿ ವಿಧಾನಸಭಾ ಕ್ಷೇತ್ರಗಳಿಗೆ ಜಿ.ವಿವೇಕಾನಂದ ಐಆರ್‌ಎಸ್ ಮೊ.ಸಂ: ೯೧೧೩೦೨೬೩೮೦, ಯಲಬುರ್ಗಾ ಮತ್ತು ಕೊಪ್ಪಳ ವಿಧಾನಸಭಾ ಕ್ಷೇತ್ರಗಳಿಗೆ ಎಸ್.ಆರ್.ನೆಡುಮಾರನ್ ಐಆರ್‌ಎಸ್ ಮೊ.ಸಂ: ೯೧೧೩೦೨೨೬೮೯ ಹಾಗೂ ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಡಾ ಎ.ವೆಂಕಟೇಶ ಬಾಬಾ ಐಆರ್‌ಎಸ್ ಮೊ.ಸಂ: ೯೧೧೩೦೦೫೨೧೦ ಆಗಮಿಸಿದ್ದಾರೆ.ಅದೇ ರೀತಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮನೋಜ್ ತಿವಾರಿ ಐಪಿಎಸ್ ಅವರು ಪೊಲೀಸ್ ವೀಕ್ಷಕರಾಗಿ ಆಗಮಿಸಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ದೂರುಗಳಿದ್ದಲ್ಲಿ ಸಾರ್ವಜನಿಕರು ಇವರಿಗೆ ದೂರವಾಣಿ ಮೂಲಕ ಕರೆ ಮಾಡಿ ತಿಳಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Gadi Kannadiga > State > ಕೊಪ್ಪಳ ಜಿಲ್ಲೆಗೆ ಸಾಮಾನ್ಯ, ವೆಚ್ಚ, ಪೊಲೀಸ್ ವೀಕ್ಷಕರ ಆಗಮನ
ಕೊಪ್ಪಳ ಜಿಲ್ಲೆಗೆ ಸಾಮಾನ್ಯ, ವೆಚ್ಚ, ಪೊಲೀಸ್ ವೀಕ್ಷಕರ ಆಗಮನ
Suresh20/04/2023
posted on
More important news
ಯಮನಪ್ಪ ಧರನಾಯಕ್ ನಿಧನ
02/06/2023
ವ್ಯಕ್ತಿ ಮೃತ: ವಾರಸುದಾರರ ಪತ್ತೆಗಾಗಿ ಮನವಿ
31/05/2023
ಮಹಿಳೆ ಮೃತ: ವಾರಸುದಾರರ ಪತ್ತೆಗಾಗಿ ಮನವಿ
31/05/2023
ವ್ಯಕ್ತಿ ಮೃತ: ವಾರಸುದಾರರ ಪತ್ತೆಗಾಗಿ ಮನವಿ
31/05/2023
ಮಹಿಳೆ ಮೃತ: ವಾರಸುದಾರರ ಪತ್ತೆಗಾಗಿ ಮನವಿ
31/05/2023
ಮಂಗಳೂರು: ಐಟಿಐ ಪ್ರವೇಶಕ್ಕೆ ಅರ್ಜಿ ಆಹ್ವಾನ
31/05/2023