ಗದಗ ಜನೇವರಿ ೪ : ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಸವಿನೆನಪಿಗಾಗಿ ಯೋಗಾಸನದಲ್ಲಿ ಗಿನ್ನೆಸ್ ರಿಕಾರ್ಡ ಮಾಡುವ ಉದ್ದೆಶದೊಂದಿಗೆ ಹಮ್ಮಿಕೊಳ್ಳಲಾಗುವ ಯೋಗಾಥಾನ್-೨೦೨೩ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಯೋಗಾಥಾನ-೨೦೨೩ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜನೇವರಿ ೧೫ ರಂದು ಬೆಟಗೆರಿಯಲ್ಲಿರುವ ಎ.ಎಸ್.ಎಸ್. ಕಾಲೇಜು ಆವರಣದಲ್ಲಿ ಯೋಗಾಥಾನ ಕಾರ್ಯಕ್ರಮವನ್ನು ಆಯೋಜಿಸಲು ಅಗತ್ಯದ ಸಿದ್ದತೆಗಳನ್ನು ಕೈಗೊಳ್ಳುವಂತೆ ಅವರು ತಿಳಿಸಿದರು. ಗಿನ್ನೆಸ ರಿಕಾರ್ಡ ಮಾಡುವ ಉದ್ದೇಶದೊಂದಿಗೆ ಆಯೋಜಿಸಲಾಗುತ್ತಿರುವ ಯೋಗಾಥಾನ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಅಂದಾಜು ೬೦೦೦ ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಯೋಗಾಸಕ್ತರಿಗೆ ಪೂರ್ವಭಾವಿಯಾಗಿ ಜ. ೧೩ ಹಾಗೂ ೧೪ ರಂದು ತರಬೇತಿ ನೀಡಲು ಕೂಡಲೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ವಿಶ್ವ ದಾಖಲೆಯ ಪ್ರಯತ್ನದ ಸಮಯದಲ್ಲಿ ಸಂಪೂರ್ಣ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳ ಬೇಕಾಗಿರುವದು ಮೇಲ್ವಿಚಾರಕರ ಕರ್ತವ್ಯವಾಗಿದೆ. ಪ್ರತಿಯೊಬ್ಬ ಮೇಲ್ವಿಚಾರಕನಿಗೆ ಸ್ಪರ್ಧಿಗಳ ಒಂದು ನಿರ್ದಿಷ್ಟ ಗುಂಪನ್ನು ನಿಯೋಜಿಸಿ ಸ್ಪರ್ಧಿಗಳಿರುವ ತಮ್ಮ ಗುಂಪನ್ನು ಮೇಲ್ವಿಚಾರಣೆ ಮಾಡಬೇಕು. ಅಲ್ಲದೆ, ನಿಯೋಜನೆ ಮಾಡಲಾದ ನಿರ್ದಿಷ್ಟ ಪ್ರದೇಶದಲ್ಲಿಯೇ ಇರುವಂತೆ ನೋಡಿಕೊಳ್ಳುವದರ ಮೂಲಕ ಯೋಗಾಸನ ಪ್ರದರ್ಶನದಲ್ಲಿ ಎಲ್ಲಿಯೂ ವ್ಯತ್ಯಾಸವಾಗದಂತೆ ಕ್ರಮ ಕೈಗೊಳ್ಳಬೇಕು.
ಯೋಗಾಥಾನ್ ಕಾರ್ಯಕ್ರಮದಲ್ಲಿ ಶಿಸ್ತು ಅತೀ ಮುಖ್ಯವಾಗಿದೆ. ಬೋಧಕರು ಹಾಗೂ ಯೋಗಾಸಕ್ತರು ಒಂದೇ ಮಾದರಿಯ ಆಸನಗಳು ಮಾಡುವದು ಮುಖ್ಯವಾಗಿದ್ದು ಈ ಕುರಿತು ಬೋಧಕರು ಹಾಗೂ ಯೋಗಾಸಕ್ತರಿಗೆ ಸೂಕ್ತ ತಿಳುವಳಿಕೆ ನೀಡಬೇಕು. ಕಾರ್ಯಕ್ರಮದ ವೇದಿಕೆ ನಿರ್ಮಾಣ, ಸಾರಿಗೆ, ಉಪಹಾರ, ಕುಡಿಯುವ ನೀರು ಹಾಗೂ ಅಗತ್ಯದ ವೈದ್ಯಕೀಯ ತಂಡಗಳನ್ನು ನಿಯೋಜಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಾರ್ಯಕ್ರಮದ ಸ್ಥಳದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆಧ್ಯತೇ ನೀಡುವದರ ಮೂಲಕ ಕಾರ್ಯಕ್ರಮದಲ್ಲಿ ಯಾವುದೇ ಲೋಪಗಳಿಗೆ ಆಸ್ಪದ ನೀಡದಂತೆ ನಿಗಾವಹಿಸಲು ಸೂಚನೆ ನೀಡಿದ ಅವರು ಒಟ್ಟಾರೆಯಾಗಿ ಎಲ್ಲ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವದರ ಮೂಲಕ ಯೋಗಾಥಾನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸುಶೀಲಾ ಬಿ ಮಾತನಾಡಿ ಜನೇವರಿ ೧೫ ರಂದು ಜರುಗಲಿರುವ ಯೋಗಾಥಾನ ಕಾರ್ಯಕ್ರಮಕ್ಕೆ ಎಲ್ಲ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವಂತೆ ತಿಳಿಸಿದರು. ಕಾರ್ಯಕ್ರಮದ ದಿನದಂದು ಪ್ರದರ್ಶಿಸಬೇಕಾದ ಆಸನಗಳ ಕುರಿತು ಬೋಧಕರು ಹಾಗೂ ವಿಧ್ಯಾರ್ಥಿಗಳಿಗೆ ಈಗಿನಿಂದಲೇ ತರಬೇತಿ ನೀಡಲು ಕ್ರಮ ಕೈಗೊಳ್ಳಬೇಕು. ಅಲ್ಲದೇ ಕಾರ್ಯಕ್ರಮದ ದಿನದಂದು ಆಗಮಿಸುವ ಶಾಲಾ ಕಾಲೇಜು ವಿಧ್ಯಾರ್ಥಿಗಳನ್ನು ನಿಗದಿತ ಸಮಯಕ್ಕೆ ಹಾಜರಾಗುವಂತೆ ನೋಡಿಕೊಳ್ಳುವದು ಸಂಬಂಧಿಸಿದ ಇಲಾಖೆ ಹಾಗೂ ಶಾಲಾ ಕಾಲೇಜುಗಳ ಜವಾಬ್ದಾರಿಯಾಗಿದ್ದು ಅಗತ್ಯದ ಸಾರಿಗೆ ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಿದರು.
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ ಮಾತನಾಡಿ ಜನೇವರಿ ೧೫ ರಂದು ಜರುಗಲಿರುವ ಯೋಗಾಥಾನ-೨೦೨೩ ರ ಕಾರ್ಯಕ್ರಮಕ್ಕೆ ಅಗತ್ಯದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು. ಕಾರ್ಯಕ್ರಮಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಎಸ್.ಎಸ್.ಎಸ್., ಎನ್.ಸಿ.ಸಿ ಎ.ಎಸ್.ಎಸ್. ಕಾಲೇಜು ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿ ಅಂದಾಜು ೬೦೦೦ ಜನ ಭಾಗವಹಿಸುವರು ಎಂದರು. ಸದರಿ ಕಾರ್ಯಕ್ರಮದಲ್ಲಿ ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಉಷ್ಟ್ರಾಸನ, ಶಶಾಂಕಸನ, ಉತ್ಥಾನ ಮಂಡೂಕಾಸನ,ಭುಜಂಗಾಸನ, ಶಲಭಾಸನ ಮುಂತಾದ ಆಸನಗಳನ್ನು ಪ್ರದರ್ಶಿಸಲಾಗುವದು ಎಂದು ತಿಳಿಸಿದರು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಗಂಗಪ್ಪ, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮಾರುತಿ, ಪೌರಾಯುಕ್ತ ರಮೇಶ ಸುಣಗಾರ, ಸಾರ್ವಜನಿಕರ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವಲಿಂಗಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಯೋಗ ಕೇಂದ್ರ ಶಿಕ್ಷಕರು ಹಾಜರಿದ್ದರು.
Gadi Kannadiga > State > ಜನೇವರಿ ೧೫ ರಂದು ಗಿನ್ನೆಸ ದಾಖಲೆ ಯೋಗಾಥಾನ ಜಿಲ್ಲೆಯಲ್ಲಿ ಯೋಗಾಥಾನ ಯಶಸ್ವಿಗೆ ಜಿಲ್ಲಾಧಿಕಾರಿಗಳ ಸೂಚನೆ
ಜನೇವರಿ ೧೫ ರಂದು ಗಿನ್ನೆಸ ದಾಖಲೆ ಯೋಗಾಥಾನ ಜಿಲ್ಲೆಯಲ್ಲಿ ಯೋಗಾಥಾನ ಯಶಸ್ವಿಗೆ ಜಿಲ್ಲಾಧಿಕಾರಿಗಳ ಸೂಚನೆ
Suresh04/01/2023
posted on

More important news
ವಿದ್ಯುತ್ ವ್ಯತ್ಯಯ
23/03/2023
ಚುನಾವಣೆಯಲ್ಲಿ ಮಕ್ಕಳ ಬಳಕೆ ಸಲ್ಲದು
23/03/2023
ಮಾರ್ಚ ೨೪ ರಂದು ನಗರಸಭೆಯಲ್ಲಿ ಸಾಮಾನ್ಯ ಸಭೆ
23/03/2023