This is the title of the web page
This is the title of the web page

Please assign a menu to the primary menu location under menu

Local News

ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿರಿ: ಡಾ. ಅಮಿತ ಪಿಂಗಟ್


ಬೆಳಗಾವಿ: ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿರಿ ಇದು ನಿಮ್ಮ ಆರೋಗ್ಯಕರ ಜೀವನಕ್ಕೆ ಭದ್ರ ಬುನಾದಿಯಾಗಿದೆ ಎಂದು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ಹೆಸರಾಂತ ಎಲುಬು ಕೀಲು ವೈದ್ಯ ಡಾ. ಅಮಿತ ಪಿಂಗಟ ಮಾತನಾಡುತ್ತಿದ್ದರು ಅವರು ಇಂದು ಬೆಳಗಾವಿ ನಗರದ ವಡಗಾವಿಯ ನೇಕಾರ ಕಾಲನಿ ಧಾಮನೆ ರಸ್ತೆಯ ಶ್ರೀ ಸಾಯಿ ಸೇವಾ ಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ “ಉಚಿತ ಆರೋಗ್ಯ ತಪಾಸಣಾ ಶಿಬಿರ” ವನ್ನು ಉದ್ಘಾಟಿಸುತ್ತ ಮಾತನಾಡುತ್ತಿದ್ದರು. ರೋಗ ಬಂದಮೇಲೆ ಪರದಾಡುವದಕ್ಕಿಂತ ರೋಗ ಬಾರದಂತೆ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿರಿ, ನೀರುನ್ನು ಕುದಿಸಿ ಆರಿಸಿ ಕುಡಿಯಿರಿ, ಶೌಚಕ್ಕೆ ಹೋಗಿ ಬಂದನಂತರ ಸಾಬೂನಿನಿಂದ ಕೈತೊಳೆಯುವದು ಮುಂತಾದ ಆರೋಗ್ಯಕರ ಹವ್ಯಾಸಗಳನ್ನು ರೂಡಿಗೊಳಿಸಿಕೊಳ್ಳಿರಿ. ಕಾಲಕಾಲಕ್ಕೆ ವೈದ್ಯರನ್ನು ಕಂಡು ತಪಾಸನೆಗೊಳಪಡುವದು ಅತ್ಯವಶ್ಯಕವಾಗಿದೆ ಎಂದು ತಿಳುವಳಿಕೆ ನೀಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ವಡಗಾವಿಯ ವಾರ್ಡ ನಂ ೪೬ ರ ನಗರಸೇವಕ ಶ್ರೀ ಸಂತೋಷ ಟೊಪಗಿ ಅವರು ಮಾತನಾಡುತ್ತ ಇಂದಿನ ಹಾವಾಮಾನ ವೈಪರೀತ್ಯಗಳಿಂದ ನಾಗರಿಕರಲ್ಲಿ ಡೆಂಗ್ಯು, ವಿಷಮಶೀತ ಜ್ವರ ಹೀಗೆ ಮುಂತಾದ ಸೋಂಕುಗಳು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿವೆ. ಇವುಗಳಿಂದ ದೂರವಿರಲು ವೈದ್ಯರ ಸೂಚನೆಗಳನ್ನು ಪಾಲಿಸಿ ಆರೋಗ್ಯಕರ ಹವ್ಯಾಸಗಳನ್ನು ರೂಡಿಗೊಳಿಸಿಕೊಂಡು ನೆಮ್ಮದಿಯ ಜೀವನ ನಡೆಸಬಹುದಾಗಿದೆ ಎಂದರು.
ಶಿಬಿರದಲ್ಲಿ ಸುಮಾರು ೨೫೦ಕ್ಕೂ ಅಧಿಕ ನಾಗರಿಕರನ್ನು ತಪಾಶಿಸಿ ಔಷಧಿಗಳನ್ನು ವಿತರಿಸಲಾಯಿತು. ಅದರಲ್ಲಿ ನೂರಕ್ಕೂ ಅಧಿಕ ಜನರಿಗೆ ಮಧುಮೇಹ ತಪಾಸಣೆ ಮಾಡಲಾಗಿ ಅವರಲ್ಲಿ ೧೫ ಜನರಿಗೆ ಮಧುಮೇಹ ಹಾಗೂ ೧೫ ಜನರಲ್ಲಿ ರಕ್ತದೊತ್ತಡದ ಸಮಸ್ಯೆ ಇರುವದು ತಿಳಿದು ಬಂದಿದೆ. ೬೧ ಜನರು ಎಲುಬು ಕೀಲು ತಪಾಸಣೆಗೊಳಗಾಗಿ ಅವರಲ್ಲಿ ೧೩ ಜನರಲ್ಲಿ ಸಂಧಿವಾತ ಮೂಳೆ ಸವೆತ ಮುಂತಾದ ಖಾಯಿಲೆಗಳು ಕಂಡುಬಂದಿವೆ. ೭೫ ಮಕ್ಕಳಿಗೆ ಹೆಸರಾಂತ ತಜ್ಞರು ತಪಾಸಣೆ ಮಾಡಲಾಗಿ ಅವರಲ್ಲಿ ೧೫ ಮಕ್ಕಳಲ್ಲಿ ಅಪೌಷ್ಟಿಕತೆ, ಅಶಕ್ತತೆ ಮುಂತಾದವುಗಳು ಕಂಡುಬಂದವು. ಅವರಿಗೆ ಪೌಷ್ಟಿಕ ಆಹಾರದ ಬಗ್ಗೆ ತಿಳುವಳಿಕೆ ಹೇಳಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯ ಸೇವೆಯನ್ನು ಉಪಯೋಗಿಸಿಕೊಳ್ಳಲು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶPರಾದÀ ಡಾ. ಎಸ್ ಸಿ ಧಾರವಾಡ ಸೂಚಿಸಿದ್ದಾರೆ.
ಶಿಬಿರದಲ್ಲ್ಲಿ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಹೆಸರಾಂತ ವೈದ್ಯ ಡಾ. ವೀರೆಂದ್ರ ಅಷ್ಟಗಿ, ಎಲುಬುಕೀಲು ತಜ್ಞ ವೈದ್ಯರಾದ ಡಾ. ಅಮಿತ ಪಿಂಗÀಟ್ , ಚಿಕ್ಕಮಕ್ಕಳ ತಜ್ಞ ಡಾ.ಯೋಗೆಶ ರಾವಳÀ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಸಂತೋಷ ಇತಾಪೆ ಇದ್ದರು. ಸಾಮಾಜಿಕ ಕಾರ್ಯಕರ್ತ ಶ್ರೀ ರಮೇಶ ದೇಸೂರಕರ, ಶ್ರೀ ಸಾಯಿ ಸೇವಾ ಸಂಘದ ಅದ್ಯಕ್ಷ ಡಾ. ಅಶೋಕ ಹೊಸಮನಿ, ಶ್ರೀ ರಂಗನಾತ ತಗ್ಗಿ ಮತ್ತು ಇತರೆ ಪಧಾಧಿಕಾರಿಗಳು ಮತ್ತು ವಡಗಾವಿಯ ನೇಕಾÀರ ಕಾಲನಿಯ ನಾಗರಿಕರು ತಪಾಸಣೆಗೊಳಪಟ್ಟರು. ಶಿಬಿರದಲ್ಲಿ ನಾಗರಿಕರನ್ನು ಉಚಿತವಾಗಿ ತಪಾಶಿಸಿ ಉಚಿತವಾಗಿ ಔಷಧಿಗಳನ್ನು ವಿತರಿಸಲಾಯಿತು.


Gadi Kannadiga

Leave a Reply