This is the title of the web page
This is the title of the web page

Please assign a menu to the primary menu location under menu

State

ಬೂದಗುಂಪಾ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ   ಕಸವನ್ನು ಎಲ್ಲೆಂದರಲ್ಲಿ ಬಿಸಾಡಬೇಡಿ : ಜಿ.ಪಂ ಉಪಕಾರ್ಯದರ್ಶಿ ಸಮೀರ್ ಮುಲ್ಲಾ ಸಲಹೆ


 

ಕೊಪ್ಪಳ: ಪ್ರತಿಯೊಬ್ಬರೂ ಕಡ್ಡಾಯವಾಗಿ ಶೌಚಾಲಯನ್ನು ಬಳಸಬೇಕು ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ ಸಮೀರ್ ಮುಲ್ಲಾ ಅವರು ಹೇಳಿದರು.

ತಾಲೂಕಿನ ಬೂದುಗುಂಪಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತ ಕೊಪ್ಪಳ ಮತ್ತು ತಾಲೂಕ ಪಂಚಾಯತ ಕೊಪ್ಪಳ ಹಾಗೂ ಗ್ರಾಮ ಪಂಚಾಯತ್ ಬೂದುಗುಂಪಾ ಇವರ ಸಂಯುಕ್ತಾಶ್ರಯದಲ್ಲಿ ಚಿಲುಮೆ ಭಾಗ-2 ಅಭಿಯಾನದಡಿ ಹಮ್ಮಿಕೊಂಡಿದ್ದ ಸ್ವಚ್ಛ ಶುಕ್ರವಾರ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಶಾಲಾ ಮಕ್ಕಳು ತಮ್ಮ ಮನೆಯ ಸುತ್ತಲಿನ ಪರಿಸರವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಬಯಲು ಶೌಚಮುಕ್ತ ಗ್ರಾಮವನ್ನಾಗಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ. ಆ ತರ ಶೌಚಾಲಯಗಳ ಬಳಕೆಯ ಕುರಿತು ಮಕ್ಕಳು ತಮ್ಮ ಪೋಷಕರಿಗೆ ಮಾಹಿತಿ ನೀಡಲು ತಿಳಿಸಿದರು.

ಜೊತೆಗೆ ಎಲ್ಲೆಂದರಲ್ಲಿ ಕಸವನ್ನು ಬಿಸಾಡದೇ, ಗ್ರಾಮ ಪಂಚಾಯಿತಿಯ ಕಸ ವಿಲೇವಾರಿ ಮಾಡುವ ಸ್ವಚ್ಛತಾ ವಾಹನಕ್ಕೆ, ಒಣ ಮತ್ತು ಹಸಿ ಕಸವನ್ನು ಮನೆ ಹಂತದಲ್ಲೇ ವಿಂಗಡಿಸಿ ಕೊಡಬೇಕು. ಇದರಿಂದ ಗ್ರಾಮದಲ್ಲಿ ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳು ಹರಡುವುದಿಲ್ಲ. ಗ್ರಾಮದ ಸ್ವಚ್ಛತೆಗೆ ಮೊದಲ ಪ್ರಾತಿನಿಧ್ಯವನ್ನು ಪ್ರತಿಯೊಬ್ಬರು ನೀಡುವುದು ತಮ್ಮ ಕರ್ತವ್ಯವು ಆಗಿದೆ. ಪ್ರತಿ ಶುಕ್ರವಾರ ಇದೇ ರೀತಿ ಗ್ರಾಮದ ಒಂದೊಂದು ಸ್ಥಳಗಳನ್ನು ಸ್ವಚ್ಛಗೊಳಿಸಿದರೇ, ನಿಮ್ಮ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಬಹುದು ಎಂದು ಹೇಳಿದರು.

ನಂತರ ಶಾಲಾ ಆವರಣದಲ್ಲಿ ಮಕ್ಕಳಿಗೆ, ಸಾರ್ವಜನಿಕರಿಗೆ ಸ್ವಚ್ಛತೆಯ ಕುರಿತು ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಬಳಿಕ ಸರಳ ಮತ್ತು ವೆಚ್ಚರಹಿತ ಕಾಂಪೋಸ್ಟ್ ಹಾಗೂ ಪೈಪ್ ಕಾಂಪೋಸ್ಟ್ ಗೊಬ್ಬರ ತಯಾರಿಕೆಯ ಎರಡು ವಿಧಾನಗಳ ಕುರಿತು ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು. ಈ ವೇಳೆ ಗ್ರಾಮಸ್ಥರು ಕೂಡ ತಮ್ಮ ಮನೆಯ ಮುಂದೆ  ಸರಳ ವಿಧಾನದ ಕಾಂಪೋಸ್ಟ್ ಗೊಬ್ಬರ ತಯಾರಿಕೆ ಮಾಡಲು ಆಸಕ್ತಿ ತೋರಿದರು.

ಈ ಸಂದರ್ಭದಲ್ಲಿ ಕೊಪ್ಪಳ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಸಹಾಯಕ ನಿರ್ದೇಶಕರಾದ ಮಹೇಶ ಹಡಪದ, ಸೌಮ್ಯ ಕೆ, ಜಿಲ್ಲಾ ಸಮಾಲೋಚಕರಾದ ಬಸಮ್ಮ ಹುಡೇದ್, ಐಇಸಿ ಸಂಯೋಜಕ ಶಿವಕುಮಾರ್ ಕೆ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ದ್ರಾಕ್ಷಣಮ್ಮ ಬಸವರಾಜ್ ಪೆದ್ಲರ್, ಪಿಡಿಓ ಅನಿತಾ, ತಾಂತ್ರಿಕ ಸಹಾಯಕ ಕೋಟ್ರೇಶ್ ಜವಳಿ ಹಾಗೂ ಗ್ರಾ.ಪಂ ಸರ್ವಸದಸ್ಯರು, ಗ್ರಾ.ಪಂ.ಸಿಬ್ಬಂದಿಗಳು, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.


Gadi Kannadiga

Leave a Reply