ಬೆಳಗಾವಿ ; ಗೋಕಾಕ ಮತಕ್ಷೇತ್ರದಿಂದ ಪಕ್ಷ ಯಾವುದಾದರೂ ಸರಿ ರಮೇಶ ಜಾರಕಿಹೊಳಿ ವಿರುದ್ಧ ಸ್ಪರ್ಧೆ ನಡೆಸುತ್ತಿದ್ದ ಅಶೋಕ ಪೂಜಾರಿ ಈ ಬಾರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅಲ್ಲದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಸಮ್ಮುಖದಲ್ಲಿಯೇ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಅಶೋಕ ಪೂಜಾರಿ ಕಾಂಗ್ರೆಸ್ ಟಿಕೆಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಪಂಚಮಸಾಲಿ ಸಮಾಜದ ಸಮಾವೇಶ ನಡೆಸಿದ ಹಿನ್ನೆಲೆಯಲ್ಲಿ ಬದಲಾದ ರಾಜಕೀಯ ಸ£್ನವೇಶದಲ್ಲಿ ಮಹಾಂತೇಶ ಕಡಾಡಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸುವಲ್ಲಿ ಜಿಲ್ಲಾ ಪ್ರಭಾವಿ ನಾಯಕರು ಯಶಸ್ವಿಯಾಗಿದ್ದಾರೆ. ಇದರಿಂದ ಕೆರಳಿರುವ ಅಶೋಕ ಪೂಜಾರಿ ಜೆಡಿಎಸ್ ಪಕ್ಷ ಬಿಡಿಸಿ ಟಿಕೆಟ್ ಕೊಡುವುದಾಗಿ ಹೇಳಿ ಕಾಂಗ್ರೆಸ್‌ಗೆ ಕರೆದುಕೊಂಡು ಬಂದಿದ್ದ ಡಿಕೆ ಶಿವಕುಮಾರ್ ಅವರನ್ನು ನಂಬಿ ಕೆಟ್ಟರಾ ಎನ್ನುವ ಪ್ರಶ್ನೆ ಅವರ ಅಭಿಮಾ£ಗಳಲ್ಲಿ ಕಾಡುತ್ತಿದೆ.
ಏಕಾಏಕಿ ಮಹಾಂತೇಶ ಕಡಾಡಿ ಅವರಿಗೆ ಗೋಕಾನಲ್ಲಿ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದ ಹಿನ್ನೆಲೆ ಬಂಡಾಯದ ಬಾವುಟ ಹಾರಿಸಲು ಅಶೋಕ ಪೂಜಾರಿ ಸಜ್ಜಾಗಿದ್ದಾರೆ.
ಸವದತ್ತಿ ಮತಕ್ಷೇತ್ರದಲ್ಲಿಯೂ ಕಾಂಗ್ರೆಸ್‌ಗೆ ತಲೆ ಬಿಸಿಯಾಗಲಿದ್ದಾರೆ ಸೌರಭ್ ಚೋಪ್ರಾ ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತ ಕಾಂಗ್ರೆಸ್ ಟಿಕೆಟ್ ನನಗೆ ಸಿಗುತ್ತದೆ ಎಂದು ಅಬ್ಬರದ ಪ್ರಚಾರ ನಡೆಸಿದ್ದರು. ಈಗ ಟಿಕೆಟ್ ಕೈತಪ್ಪಿದ ಹಿನ್ನೆಲೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಸಿದ್ಧತೆ ನಡೆಸಿದ್ದಾರೆ.
ಕಳೆದ ಬಾರಿಯೂ ಸೌರಭ್ ಚೋಪ್ರಾ ತಂದೆ ಆನಂದ ಚೋಪ್ರಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಶ್ವಾಸ ವೈದ್ಯ ಸೋಲಿಗೆ ಕಾರಣರಾಗಿದ್ದರು. £ಪ್ಪಾಣಿ ಕ್ಷೇತ್ರದಲ್ಲಿ ಕೈಗೆ ತಲೆನೋವಾಗಲಿದ್ದಾರೆ ಉತ್ತಮ್ ಪಾಟೀಲ್ ಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗೆ ಚಿಂತನೆ ನಡೆಸಿದ್ದಾರೆ.
ಕಿತ್ತೂರಿನಲ್ಲಿ ಇನಾಮದಾರ್ ಕುಟುಂಬಕ್ಕೆ ಕೈ ಕೊಟ್ಟ ಕಾಂಗ್ರೆಸ್ ನಾಯಕರು. ಡಿಬಿ ಇನಾಮದಾರ್ ಆರೋಗ್ಯ ನೆಪ ಹೇಳಿ ಅವರ ಅಳಿಯ ಬಾಬಾಸಾಹೇಬ್ ಪಾಟೀಲ್‌ಗೆ ಟಿಕೆಟ್ ಘೋಷಣೆ ಮಾಡಿದ್ದಾರೆ.ಟಿಕೆಟ್ ಕೈತಪ್ಪಿದ ಹಿನ್ನೆಲೆ ಇನಾಮದಾರ್ ಕುಟುಂಬಸ್ಥರಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಸಾಧ್ಯತೆ ದಟ್ಟವಾಗಿದೆ. ಇಂದು ಮನೆಯಲ್ಲಿ ಸಭೆ ಕರೆದು ಮುಂದಿನ ತೀರ್ಮಾನ ಘೋಷಣೆ ಮಾಡಲಿರುವ ಇನಾಮದಾರ್ ಸೊಸೆ ಲಕ್ಷಿ÷್ಮÃ ಇನಾಮದಾರ. ಮತ್ತೋರ್ವ ಟಿಕೆಟ್ ಆಕಾಂಕ್ಷಿ ಹಬೀಬ್ ಶಿಲ್ಲೇದಾರ್ ಕೂಡ ಬಂಡಾಯ ಅಭ್ಯರ್ಥಿಯಾಗಿ ಕಿತ್ತೂರು ಕ್ಷೇತ್ರದಿಂದ ಸ್ಪರ್ಧೆ ನಡೆಸುವ ಸಾಧ್ಯತೆ ಇದೆ.
ಒಟ್ಟಾರೆ ಟಿಕೆಟ್ ಆಕಾಂಕ್ಷಿಗಳು ಕಾಂಗ್ರೆಸ್ ಗೆ ಅರ್ಜಿ ಸಲ್ಲಿಸುವಾಗ ಜನರ ನಡುವೆ ಇರುವ ವ್ಯಕ್ತಿಗೆ ಮಣೆ ಹಾಕಲಾಗುವುದು ಎಂದು ಎರಡೂ ಲಕ್ಷ ರೂ. ದೇಣಿಗೆ ಪಡೆದಿದ್ದ ಕಾಂಗ್ರೆಸ್ ವರಿಷ್ಠರು ಟಿಕೆಟ್ ಘೋಷಣೆ ವೇಳೆ ನಮಗೆ ಪರಿಗಣನೆಗೆ ತೆಗೆದುಕೊಳ್ಳದೆ ಟಿಕೆಟ್ ಘೋಷಣೆ ಮಾಡಿದ್ದಾರೆ ಎನ್ನುವ ಮಾತುಗಳು ಟಿಕೆಟ್ ವಂಚಿತರಿಂದ ಕೇಳಿ ಬರುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ವಿರುದ್ಧ ಟಿಕೆಟ್ ವಂಚಿತರು ಕೆಂಡ ಕಾರುತ್ತಿದ್ದಾರೆ.
Gadi Kannadiga > Local News > ಗೋಕಾಕ್: ಅಶೋಕ ಪೂಜಾರಿ ಬಂಡಾಯ
ಗೋಕಾಕ್: ಅಶೋಕ ಪೂಜಾರಿ ಬಂಡಾಯ
Suresh06/04/2023
posted on