This is the title of the web page
This is the title of the web page

Please assign a menu to the primary menu location under menu

Local News

ಗೋಕಾಕ ಪಟ್ಟಣಕ್ಕೆ ನುಗ್ಗಿದ ಪ್ರವಾಹ


ಬೆಳಗಾವಿ: ಸತತ 4ನೇ ವರ್ಷವೂ ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಮಳೆ ವ್ಯಾಪಕವಾಗಿ ಸುರಿಯುತ್ತಿರುವುದರಿಂದ ಘಟಪ್ರಭಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಜಿಲ್ಲೆಯ ಗೋಕಾಕ ಪಟ್ಟಣಕ್ಕೆ ನದಿ ನೀರು ನುಗ್ಗಿದೆ.

ಮಟನ್ ಮಾರ್ಕೆಟ್, ದನದ‌ ಮಾರ್ಕೆಟ್ ಮುಳುಗಡೆಯಾಗಿದ್ದು, 15ಕ್ಕೂ ಹೆಚ್ಚು ಅಂಗಡಿಗಳು ಜಲಾವೃತಗೊಂಡಿವೆ. 10ಕ್ಕೂ ಹೆಚ್ಚು ಮನೆಗಳಿಗೂ ನದಿ ನೀರು ನುಗ್ಗಿದೆ. ನೀರು ನುಗ್ಗುವ ಆತಂಕದಿಂದ ವ್ಯಾಪಾರಸ್ಥರು ತರಾತುರಿಯಲ್ಲಿ ಅಂಗಡಿಗಳನ್ನ ಖಾಲಿ ಮಾಡುತ್ತಿದ್ದಾರೆ.

ಇನ್ನು ತಾಲ್ಲೂಕಿನ ಸುಣಧೋಳಿ, ಮುನ್ಯಾಳ, ಅವರಾದಿ ಸೇರಿದಂತೆ ಹಲವು ಸೇತುವೆಗಳು ಜಲಾವೃತ ಗೊಂಡಿದ್ದು  ಜನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಸುಣಧೋಳಿ ಪ್ರಸಿದ್ದ ದೇವಸ್ಥಾನವಾದ ಜಡಿಸಿದ್ದೇಶ್ವರ ಮಠಕ್ಕೆ ನದಿಯ ನೀರು ನುಗ್ಗಿದ್ದು ಕಳೆದ ವರ್ಷದಂತೆ ಈ ವರ್ಷವು ಮನೆಗಳಿಗೆ ನೀರು ನುಗ್ಗೀತೋ ಎನ್ನುವ ಆತಂಕದಲ್ಲಿ ಮಹಿಳೆಯರು ಮನೆಗಳ ಎದುರು ಕಾಯುತ್ತಾ ಕುಳಿತಿದ್ದಾರೆ.  ಗೋಕಾಕ ಮತ್ತು ಮತ್ತು ಮೂಡಲಗಿ ತಾಲ್ಲೂಕಿನ ಜನರು 2019ರಿಂದ ಪ್ರತಿವರ್ಷ ಪ್ರವಾಹದ ಭೀತಿ ಎದುರಿಸುತ್ತಿದ್ದಾರೆ.

 


Gadi Kannadiga

Leave a Reply