This is the title of the web page
This is the title of the web page

Please assign a menu to the primary menu location under menu

State

ಗದಗ ಮೃಗಾಲಯದ ಸುವರ್ಣ ಮಹೋತ್ಸವ


ಗದಗ ಡಿಸೆಂಬರ್ ೬: ಗದಗ ಮೃಗಾಲಯವು ೧೯೭೨ ರಲ್ಲಿ ಪ್ರಾರಂಭವಾಗಿ ಪ್ರಸ್ತುತ ವರ್ಷ ಸುವರ್ಣ ಮಹೋತ್ಸವ ಆಚರಿಸಲಾಗುತ್ತಿದೆ. ಇದರ ಪ್ರಯುಕ್ತ ಕೇಂದ್ರೀಯ ಮೃಗಾಲಯ ಪ್ರಾಧಿಕಾರ, ನವದೆಹಲಿ ಇವರು ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಗದಗ ಮೃಗಾಲಯದಿಂದ ಕಪಿಲ( ಗಂಡು) ಮತ್ತು ಕಸ್ತೂರಿ ( ಹೆಣ್ಣು) ಎರಡು ತೋಳಗಳನ್ನು “ ಕಮಲಾ ನೆಹರು ಪ್ರಾಣಿ ಸಂಗ್ರಹಾಲಯ ಇಂಧೋರ ಮಧ್ಯಪ್ರದೇಶಗೆ ಹಸ್ತಾಂತರಿಸಿ, ಇಂದೋರ ಮೃಗಾಲಯದಿಂದ ಶಿವ ( ಗಂಡು) ಮತ್ತು ಗಂಗಾ ( ಹೆಣ್ಣು) ಎಂಬ ಹೆಸರಿನ ಎರಡು ಸಿಂಹಗಳನ್ನು ಪಡೆಯಲು ಅನುಮತಿ ನೀಡಿದೆ. ಈ ಸಿಂಹಗಳು ಡಿಸೆಂಬರ್ ೮ ರಂದು ಬೆಳಿಗ್ಗೆ ೧೦ ಗಂಟೆಗೆ ಗದಗ ಮೃಗಾಲಯಕ್ಕೆ ಆಗಮಿಸುತ್ತಿದ್ದು, ಗದಗ ಶಾಸಕ ಎಚ್.ಕೆ.ಪಾಟೀಲ ಸ್ವಾಗತಿಸುವರು. ನೂತನ ನರಿ ಪ್ರಾಣಿಮನೆ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ಆಯೋಜಿಸಲಾಗಿದೆ ಎಂದು ಗದಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply