ಕೊಪ್ಪಳ ಮೇ ೧೧ ಕೊಪ್ಪಳ ಜಿಲ್ಲೆಯ ೫ ವಿಧಾನಸಭಾ ಕ್ಷೇತ್ರಗಳಲ್ಲಿ ಮೇ ೧೦ರಂದು ಬೆಳಗ್ಗೆ ೭ರಿಂದ ಆರಂಭಗೊಂಡು ಮತದಾನದ ಮುಕ್ತಾಯದವರೆಗೆ ಅಂತಿಮವಾಗಿ ಈ ಬಾರಿ ಶೇ.೭೭.೮೮ರಷ್ಟು ಮತದಾನದ ಪ್ರಮಾಣ ದಾಖಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ತಿಳಿಸಿದ್ದಾರೆ.
ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ೧,೧೭,೬೬೧ ಪುರುಷರು ಹಾಗೂ ೧,೧೫,೯೫೫ ಮಹಿಳೆಯರು ಹಾಗೂ ಇತರೆ ೯ ಜನರು ಸೇರಿ ಒಟ್ಟು ೨,೩೩,೬೨೫ ಮತದಾರರ ಪೈಕಿ ೯೩,೩೭೨ ಪುರುಷರು ಹಾಗೂ ೮೯,೩೭೧ ಮಹಿಳೆಯರು ಸೇರಿ ೧,೮೨,೭೪೩ ಜನರು ಮತ ಚಲಾಯಿಸಿದ್ದು ಶೇ.೭೮.೨೨ ರಷ್ಟು ಮತದಾನವಾಗಿದೆ. ಹಿಂದಿನ ಚುನಾವಣೆಯಲ್ಲಿ ಇದೆ ಕ್ಷೇತ್ರದಲ್ಲಿ ಶೇ.೭೩.೨೨ರಷ್ಟು ಮತದಾನವಾಗಿತ್ತು
ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ೧,೧೦,೫೮೭ ಪುರುಷರು ಹಾಗೂ ೧,೧೩,೪೪೬ ಮಹಿಳೆಯರ ಮತ್ತು ಇತರೆ ೯ ಜನರು ಸೇರಿ ಒಟ್ಟು ೨,೨೪,೦೪೨ ಮತದಾರರ ಪೈಕಿ ೮೮,೫೨೪ ಪುರುಷರು ಹಾಗೂ ೮೬,೯೭೬ ಮಹಿಳೆಯರು ಮತ್ತು ಇತರೆ ೪ ಜನರು ಸೇರಿ ಒಟ್ಟು ೧,೭೫,೫೦೪ ಜನರು ಮತ ಚಲಾಯಿಸಿದ್ದು ಶೇ.೭೮.೩೪ ರಷ್ಟು ಮತದಾನವಾಗಿದೆ. ಹಿಂದಿನ ಚುನಾವಣೆಯಲ್ಲಿ ಇದೆ ಕ್ಷೇತ್ರದಲ್ಲಿ ೭೮.೯೮ರಷ್ಟು ಮತದಾನವಾಗಿತ್ತು.
ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ೧,೦೦,೨೯೫ ಪುರುಷರು ಹಾಗೂ ೧,೦೧,೮೯೯ ಮಹಿಳೆಯರು ಮತ್ತು ಇತರೆ ೧೨ ಸೇರಿ ಒಟ್ಟು ೨,೦೨,೨೦೬ ಮತದಾರರ ಪೈಕಿ ೮೦,೬೨೭ ಪರುಷರು ಹಾಗೂ ೭೮,೨೫೯ ಮಹಿಳೆಯರು ಮತ್ತು ಇತರ ೪ ಜನರು ಸೇರಿ ೧,೫೮,೮೯೦ ಜನರು ತಮ್ಮ ಮತ ಹಕ್ಕನ್ನು ಚಲಾಯಿಸಿದ್ದು, ಶೇ.೭೮.೫೮ ರಷ್ಟು ಮತದಾನವಾಗಿದೆ. ಕಳೆದ ಚುನಾವಣೆಯಲ್ಲಿ ಇದೆ ಕ್ಷೇತ್ರದಲ್ಲಿ ಶೇ.೭೫.೪೨ರಷ್ಟು ಮತದಾನವಾಗಿತ್ತು.
ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ೧,೧೧,೮೮೪ ಪುರುಷರು ಹಾಗೂ ೧,೧೧,೧೪೪ ಮಹಿಳೆಯರು ಮತ್ತು ಇತರೆ ೮ ಜನರು ಸೇರಿ ಒಟ್ಟು ೨,೨೩,೦೩೬ ಮತದಾರರ ಪೈಕಿ ೮೯,೯೧೭ ಪುರುಷರು ಹಾಗೂ ೮೫,೭೧೮ ಮಹಿಳೆಯರು ಮತ್ತು ಇತರೆ ೨ ಸೇರಿ ೧,೭೫,೬೩೭ ಜನರು ತಮ್ಮ ಮತ ಹಕ್ಕನ್ನು ಚಲಾಯಿಸಿದ್ದು ಶೇ.೭೮.೭೫ರಷ್ಟು ಮತದಾನ ಪ್ರಮಾಣ ದಾಖಲಾಗಿದೆ. ಹಿಂದಿನ ಚುನಾವಣೆಯಲ್ಲಿ ಶೇ.೭೮.೦೮ರಷ್ಟು ಮತದಾನವಾಗಿತ್ತು.
ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ೧,೨೫,೯೫೪ ಪುರುಷರು ಹಾಗೂ ೧,೨೭,೯೬೩ ಮಹಿಳೆಯರು ಮತ್ತು ಇತರೆ ೧೨ ಜನರು ಸೇರಿ ಒಟ್ಟು ೨,೫೩,೯೨೯ ಮತದಾರರ ಪೈಕಿ ೯೮,೩೭೭ ಪುರುಷರು ಹಾಗೂ ೯೪,೧೭೩ ಮಹಿಳೆಯರು ಮತ್ತು ಇತರೆ ಒಬ್ಬರು ಸೇರಿ ಒಟ್ಟು ೧,೯೨,೫೫೧ ಜನರು ಮತ ಚಲಾಯಿಸಿದ್ದು, ಶೇ.೭೫.೮೩ರಷ್ಟು ಮತದಾನದ ಪ್ರಮಾಣ ದಾಖಲಾಗಿದೆ. ಇದೆ ಕ್ಷೇತ್ರದಲ್ಲಿ ಈ ಹಿಂದೆ ೭೪.೩೬ರಷ್ಟು ಮತದಾನದ ಪ್ರಮಾಣ ದಾಖಲಾಗಿತ್ತು.
ಐದು ವಿಧಾನಸಭಾ ಕ್ಷೇತ್ರಗಳಲ್ಲಿನ ಒಟ್ಟಾರೆ ೫,೬೬,೩೮೧ ಪುರುಷರು ಮತ್ತು ೫,೭೦,೪೦೭ ಮಹಿಳೆಯರು ಮತ್ತು ಇತರೆ ೫೦ ಜನರು ಸೇರಿ ೧೧,೩೬,೮೩೮ ಮತದಾರರ ಪೈಕಿ ೪,೫೦,೮೧೭ ಪುರುಷರು, ೪,೩೪,೪೯೭ ಮಹಿಳೆಯರು ಮತ್ತು ಇತರೆ ೧೧ ಜನ ಸೇರಿ ಒಟ್ಟಾರೆ ೮,೮೫,೩೨೫ ಜನರು ತಮ್ಮ ಮತ ಹಕ್ಕನ್ನು ಚಲಾಯಿಸಿ ಒಟ್ಟಾರೆ ಜಿಲ್ಲೆಯಾದ್ಯಂತ ಶೇ.೭೭.೮೮ ರಷ್ಟು ಮತದಾನದ ಪ್ರಮಾಣ ದಾಖಲಾಗಿದೆ. ಇದರಲ್ಲಿ ಶೇ.೭೯.೬೦ರಷ್ಟು ಪುರುಷರು ಹಾಗೂ ಶೇ.೭೬.೧೭ರಷ್ಟು ಮಹಿಳೆಯರು ಮತ್ತು ಶೇ.೨೨ರಷ್ಟು ಇತರೆ ಜನರು ಮತ ಚಲಾಯಿಸಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.೭೬.೧೬ರಷ್ಟು ಮತದಾನದ ಪ್ರಮಾಣ ದಾಖಲಾಗಿತ್ತು.
Gadi Kannadiga > State > ಕೊಪ್ಪಳ ಜಿಲ್ಲೆ: ಮತದಾನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ
ಕೊಪ್ಪಳ ಜಿಲ್ಲೆ: ಮತದಾನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ
Suresh11/05/2023
posted on
More important news
ಬೀಟ್ ಮೀಟಿಂಗ್
29/05/2023
ಸಚಿವ ಎಚ್.ಕೆ.ಪಾಟೀಲ ಅವರ ಜಿಲ್ಲಾ ಪ್ರವಾಸ
29/05/2023
ಶ್ರೀ ಯಾಜ್ಞವಲ್ಕö್ಯ ಗುರುಗಳ ಜಯಂತಿ
29/05/2023
ಅಧಿಕಾರ ಸ್ವೀಕಾರ
29/05/2023