This is the title of the web page
This is the title of the web page

Please assign a menu to the primary menu location under menu

Local News

ರಾಷ್ಟ್ರ ಮಟ್ಟದ ಆವಿಷ್ಕಾರ ೨ಕೆ೨೨ ಪ್ರೊಜೆಕ್ಸ್ ಎಕ್ಸಿಬಿಷನ್ ನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ ಉತ್ತಮ ಸಾಧನೆ


ಬೆಳಗಾವಿ,ಆ.೧೭ : ೨೦೨೧-೨೨ನೇ ಸಾಲಿನ ರಾಷ್ಟ್ರ ಮಟ್ಟದ ಆವಿಷ್ಕಾರ ೨ಕೆ೨೨ ಪ್ರೊಜೆಕ್ಟ್ ಎಕ್ಸಿಬಿಷನ್ ಬೆಳಗಾವಿಯ ಅಂಗಡಿ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ ಮೆಂಟ್ ನಲ್ಲಿ ಆಗಷ್ಟ್ ೧೧ ರಂದು ನಡೆದಿದ್ದು, ಬೆಳಗಾವಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಧಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ದೂರ ಸಂಪರ್ಕ ವಿಭಾಗದ ಅಂತಿಮ ವರ್ಷದ ಡಿಪ್ಲೋಮಾ ವಿದ್ಯಾರ್ಥಿಗಳಾದ ದಿನೇಶ್ ಎಸ್., ಸಚಿನ್ ಬಿ., ಗಾಯತ್ರಿ ಪಿ. ಹಾಗೂ ಉದಯ ಎಂ. ಅವರು ಸ್ಮಾರ್ಟಹೋಂ ಅಟೋಮೆಷನ್ ಎಂಬ ಪ್ರೊಜೆಕ್ಟ್ ನ್ನು ಕಾಲೇಜಿನ ವಿಭಾಗಾಧಿಕಾರಿಗಳಾದ ಮೇಘಾರಾಣಿ ಬಿ.ಎಂ ಅವರ ಮಾರ್ಗದರ್ಶನದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಆಟೋಮೊಬೈಲ್ ವಿಭಾಗದ ದ್ವೀತಿಯ ವರ್ಷದ ಡಿಪ್ಲೋಮಾ ವಿದ್ಯಾರ್ಥಿಗಳಾದ ಜಿಯಾ ಡಿ., ಕಮ್ರಾನ್ ಜೆ. ಅವರು ಅಡ್ವಾಸೆಡ್ ಏರಬ್ಯಾಗ್ ಸಿಸ್ಟಂ ಎಂಬ ವಿಷಯದ ಮೇಲೆ ವಿಭಾಗಾಧಿಕಾರಿಗಳಾದ ಜೆ.ಎಂ.ಮುಲ್ಲಾ ಹಾಗೂ ಜಿ.ಆರ್.ದೇಶಪಾಂಡೆ ಅವರ ಮಾರ್ಗದರ್ಶನದಲ್ಲಿ PಂPಇಖ PಖಇSಇಓಖಿಂಖಿIಔಓ ನಲ್ಲಿ ಪಾಲ್ಗೊಂಡು ದ್ವೀತಿಯ ಸ್ಥಾನ ಪಡೆದಿದ್ದಾರೆ.
ಆಟೋಮೊಬೈಲ್ ವಿಭಾಗದ ಅಂತಿಮ ವರ್ಷದ ಡಿಪ್ಲೋಮಾ ವಿದ್ಯಾರ್ಥಿಗಳು ರೋಹಿತ ಎ., ಅಭಿಶೇಕ ಡಿ., ಪ್ರಜ್ವಲ್ ಕೆ. ಹಾಗೂ ಕಿರಣ ಕೆ ಅವರು ಕಾಮನ್ ರೇಲ್ ಡೈರೆಕ್ಟ್ ಇಂಜಕ್ಷನ್ ಸಿಸ್ಟಂ ವರ್ಕಿಂಗ್ ಮಾಡೇಲ್ ಎಂಬ ಪ್ರೊಜೆಕ್ಟ್ ನ್ನು ವಿಭಾಗಾಧಿಕಾರಿಗಳಾದ ಜೆ.ಎಂ.ಮುಲ್ಲಾ ಹಾಗೂ ಜಿ.ಆರ್.ದೇಶಪಾಂಡೆ ಅವರ ಮಾರ್ಗದರ್ಶನದಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನ ಪಡೆದಿದ್ದಾರೆ.
ಇಂತಹ ಸಾಧನೆ ಮಾಡಿದ್ದು ನಮ್ಮ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಪ್ರಿನ್ಸಿಪಾಲರು, ವಿಭಾಗಾಧಿಕಾರಿಗಳು ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.


Gadi Kannadiga

Leave a Reply