This is the title of the web page
This is the title of the web page

Please assign a menu to the primary menu location under menu

Local News

ಕಿವುಡು ಮಕ್ಕಳ ಸರ್ಕಾರಿ ಶಾಲೆ: ಅರ್ಹ ವಿದ್ಯಾರ್ಥಿನಿಯರಿಂದ ಅರ್ಜಿ ಅಹ್ವಾನ


ಬೆಳಗಾವಿ, ಮೇ.೨೩ : ಕರ್ನಾಟಕ ಸರ್ಕಾರದ, ವಿಕಲಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ, ಬೆಳಗಾವಿ ವಿದ್ಯಾಗಿರಿಯ ಕಿವುಡು ಮಕ್ಕಳ ಸರ್ಕಾರಿ ಶಾಲೆ ಆಜಮ್ ನಗರ | ನೇ ಕ್ರಾಸ್ ಇಲ್ಲಿ ೨೦೨೩-೨೪ ನೇ ಶೈಕ್ಷಣಿಕ ವರ್ಷಕ್ಕೆ ೧ ನೇ ತರಗತಿಯಿಂದ ೧೦ ನೇ ತರಗತಿಯವರೆಗೆ ಉಚಿತ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿನಿಯರಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಪ್ರವೇಶ ಪಡೆಯಲು ಇರಬೇಕಾದ ಅರ್ಹತೆಗಳು:
ಕಿವುಡು ಮತ್ತು ಮೂಗು ಬಾಲಕಿಯರಿಗೆ (ಹೆಣ್ಣು ಮಕ್ಕಳು) ಗೆ ಮಾತ್ರ ಪ್ರವೇಶ, ಸೂಕ್ತ ಪ್ರಾಧಿಕಾರ, ಮಂಡಳಿಯಿಂದ ಪಡೆದ ವೈದ್ಯಕೀಯ ಪ್ರಮಾಣ ಪತ್ರ ಹೊಂದಿರಬೇಕು.
ಜನ್ಮ ದಿನಾಂಕ ದೃಢೀಕರಣ ಪತ್ರ ಅಥವಾ ಬೇರೆ ಶಾಲೆಯಲ್ಲಿ ಓದುತ್ತಿದ್ದರೆ, ಶಾಲಾ ವರ್ಗಾವಣೆ ಪ್ರಮಾಣ ಪತ್ರ, ರಹವಾಸಿ/ ವಾಸಸ್ಥಳ ದೃಢೀಕರಣ ಪತ್ರ ಅಥವಾ ಆಧಾರ ಕಾರ್ಡ ಮತ್ತು ಜಾತಿ/ಆದಾಯ ಪ್ರಮಾಣ ಪತ್ರ ಮತ್ತು
ಬ್ಯಾಂಕ ಅಕೌಂಟ್ (ಮಕ್ಕಳ ಹೆಸರಿಗಿರುವ ಬ್ಯಾಂಕ್ ಖಾತೆ ವಿವರಗಳು) ಹಾಗೂ ಇತ್ತೀಚಿನ ೦೫ ಪಾಸ್‌ಪೋರ್ಟ ಅಳತೆಯ ಭಾವ ಚಿತ್ರಗಳು (ಫೋಟೋ) ಹೊಂದಿರಬೇಕು.
ಪ್ರವೇಶಕ್ಕಾಗಿ ಅರ್ಜಿಗಳನ್ನು ಜೂನ್ ೧೫ ೨೦೨೩ ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಧೀಕ್ಷಕರವರ ಕಚೇರಿ, ಕಿವುಡು ಮಕ್ಕಳ ಸರ್ಕಾರಿ ಶಾಲೆ, ಬೆಳಗಾವಿ-೧೦, ಅಥವಾ ದೂರವಾಣಿ ಸಂಖ್ಯೆ ೯೯೦೧೦೭೩೬೮೬, ೯೬೬೩೭೧೧೦೮೧ ಗೆ ಸಂಪರ್ಕಿಸಬಹುದು ಎಂದು ಕಿವುಡ ಮಕ್ಕಳ ಸರಕಾರಿ ಶಾಲೆಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply