ಕೊಪ್ಪಳ ಜುಲೈ-27 ಕೊಪ್ಪಳ ಜಿಲ್ಲಾ ಪಂಚಾಯತ ಜೆ.ಹಚ್.ಪಟೇಲ್ ಸಭಾಗಣದಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಕೊಪ್ಪಳ ರವರ ಅಧ್ಯಕ್ಷತೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಯೋಜನೆಯಡಿ ಬರುವ ಜಲ ಜೀವನ್ ಮಿಷನ್ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ರಚಿಸಲಾದ ಹೊಬಳಿಮಟ್ಟದ ತನಿಖಾಧಿಕಾರಿಗಳ ತಂಡದವರು ಬ್ಯಾಚ್-1, ಬ್ಯಾಚ್-2 ಕಾಮಗಾರಿಗಳಿಗೆ ಸಂಬಂದಿಸಿದಂತೆ ಒದಗಿಸಲಾದ ಚೆಕ್-ಲಿಸ್ಟ ಅನುಸಾರ ಕಾಮಗಾರಿಗಳನ್ನು ಪರಿಶೀಲನೆ ಮಾಡಲು ತಿಳಿಸಿದರು.
ಕ್ರಮವಹಿಸಲು ಸೂಚಿಸಿದ ವಿಷಯಗಳು:ಮುಂದಿನವಾರದಿಂದ ಪ್ರತಿ ವಿಧಾನಸಭಾ ಕ್ಷೇತ್ರವಾರು ಮಾನ್ಯ ಶಾಸಕರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆಗಳನ್ನು ಜರುಗಿಸಲು ಕ್ರಮವಹಿಸುವಂತೆ RWSನ EE, AEE ವಿಭಾಗ ಕೊಪ್ಪಳ ರವರಿಗೆ ತಿಳಿಸಿದರು.
ವಿಧಾನಸಭಾ ಕ್ಷೇತ್ರವಾರು ಜರುಗುವ ಸಭೆಗಳಲ್ಲಿ ನಿಗದಿತ ನಮೂನೆಯಲ್ಲಿ ವರದಿ ತಯಾರಿಸಿ ಸಭೆಯಲ್ಲಿ ಮಂಡಿಸಲು ತಿಳಿಸಿದರು.
ಗ್ರಾಮೀಣ ಭಾಗದ ಕುಡಿಯುವ ನೀರಿನ ಕಾಮಗಾರಿಗಳಿಗೆ ಪ್ರತಿವಿಧಾನಸಭೆಗೆ ರೂ. 50 ಲಕ್ಷಗಳ ಪ್ರಸ್ತಾವನೆ ಸಲ್ಲಿಸಲು EE & AEE ರವರಿಗೆ ತಿಳಿಸಿದರು.
ಪರಿಶೀಲನಾ ತಂಡದವರು ಪರಿಶೀಲನೆ ಮಾಡಿದ ಕಾಮಗಾರಿಗಳ ಛಾಯಾಚಿತ್ರಗಳನ್ನು ಸಂಗ್ರಹಿಸಲು ತಿಳಿಸಿದರು.
ಪ್ರತಿ ತಾಲೂಕಿನಿಂದ ಕಾಮಗಾರಿ ಪರಿಶೀಲನಾ ಭೇಟಿಯ ವಿವರದ ಬಗ್ಗೆ ಪ್ರತಿದಿನ ದಿನಪತ್ರಿಕೆಗಳಿಗೆ ವರದಿ ನೀಡಲು ಎಲ್ಲಾ AEEಗಳಿಗೆ ಸೂಚಿಸಿದರು
ಸದರಿ ಸಭೆಯಲ್ಲಿ ಗ್ರಾ.ಕು.ನೀ & ನೈ ಇಲಾಖೆ ಕೊಪ್ಪಳ ವಿಭಾಗದ EE ಹಾಗೂ ಜಿಲ್ಲೆ ಎಲ್ಲಾ AEE ಮತ್ತು ಹೊಬಳಿಮಟ್ಟದ ಅಧಿಕಾರಿಗಳು ಸಿಬ್ಬಂದಿಗಳು ಹಾಜರಿದ್ದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ