ಗದಗ ಅಕ್ಟೋಬರ್ ೨೧: ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯತಿ ಸಾರ್ವತ್ರಿಕ ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸುವ ಕುರಿತು ವೇಳಾಪಟ್ಟಿಯನ್ನು ಪ್ರಕಟಪಡಿಸಿದ್ದು ಚುನಾವಣಾ ನೀತಿಸಂಹಿತೆಯು ಅಕ್ಟೋಬರ್೩೧ ರವರೆಗೆ ಜಾರಿಯಲ್ಲಿರುತ್ತದೆ. ಚುನಾವಣೆ ಪ್ರಕ್ರಿಯೆಗಳು ಪೂರ್ಣಗೊಳ್ಳುವವರೆಗೆ ಶಾಂತಿ ಸುವ್ಯಸ್ಥೆ ಕಾಪಾಡುವ ಹಿತದೃಷ್ಟಿಯಿಂದ ವಿವಿಧ ನಮೂನೆಯ ವಿವಿಧ ಉದ್ದೇಶದ ಸಲುವಾಗಿ ಧಾರಣ ಮಾಡಿದ ಯಾವುದೇ ಬಗೆಯ ಆಯುಧಗಳನ್ನು ಯಾವುದೇ ಪರವಾನಿಗೆದಾರರಾಗಲೀ ಅಥವಾ ಅವರ ರಿಟೇನರ್ ಆಗಲೀ ತಮ್ಮ ಸಂಗಡ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಆಯುಧದಾರಕರು ತಮ್ಮ ಆಯುಧಗಳನ್ನು ಅಕ್ಟೋಬರ್ ೨೫ ರೊಳಗಾಗಿ ತಮ್ಮ ಸಮೀಪದ ಆರಕ್ಷಕ ಠಾಣೆಯಲ್ಲಿ ಠೇವಣಿ ಮಾಡಿ ರಸೀದಿ ಪಡೆಯತಕ್ಕದ್ದು. ಚುನಾವಣೆ ಪ್ರಕ್ರಿಯೆ ಮುಗಿದ ಕೂಡಲೇ ಠೇವಣೆ ಮಾಡಲಾದ ಆಯುಧಗಳನ್ನು ಆವುಗಳ ಮಾಲೀಕರಿಗೆ/ ಅವರ ವಾರಸುದಾರರಿಗೆ ಯಾವುದೇ ನಿರ್ದೇಶನಗಳಿಗೆ ಕಾಯದೇ ಪರತ್ ಮಾಡತಕ್ಕದ್ದು. ಈ ಆದೇಶವು ನಗರ ಸ್ಥಳೀಯ ಸಂಸ್ಥೆಗಳ ಪ್ರದೇಶಗಳಿಗೆ ಹಾಗೂ ವಿವಿಧ ಹಣಕಾಸು ಸಂಸ್ಥೆ ( ಬ್ಯಾಂಕು) ಗಳ ಭದ್ರತಾ ಪಡೆಯ ಸಿಬ್ಬಂದಿಗಳಿಗೆ ಅನ್ವಯಿಸುವುದಿಲ್ಲ.
ಈ ಆದೇಶವು ಜಿಲ್ಲೆಯ ಗದಗ ತಾಲೂಕ ಬಳಗಾನೂರ, ಬೆಳಹೋಡ, ಹುಯಿಲಗೋಳ, ಶಿರೋಳ ಗ್ರಾಮ ಪಂಚಾಯತ್ ಹಾಗೂ ಮುಂಡರಗಿ ತಾಲೂಕು ಹಿರೇವಡ್ಡಟ್ಟಿ ಗ್ರಾಮ ಪಂಚಾಯತ್ ಹಾಗೂ ಲಕ್ಷ್ಮೇಶ್ವರ ತಾಲೂಕ ಕುಂದ್ರಳ್ಳಿ ತಾಂಡಾ ಗ್ರಾಮ ಪಂಚಾಯತಿಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ಗ್ರಾ.ಪಂ.ಸಾರ್ವತ್ರಿಕ ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಚುನಾವಣೆ : ಶಾಂತಿ ಸುವ್ಯವಸ್ಥೆ ಕಾಪಾಡಲು ಆಯುಧ ಠೇವಣಿ
ಗ್ರಾ.ಪಂ.ಸಾರ್ವತ್ರಿಕ ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಚುನಾವಣೆ : ಶಾಂತಿ ಸುವ್ಯವಸ್ಥೆ ಕಾಪಾಡಲು ಆಯುಧ ಠೇವಣಿ
Suresh21/10/2022
posted on