ಗಡಿ ಕನ್ನಡಿಗ
ಖಾನಾಪುರ:ತಾಲೂಕಿನ ದೇವಲತ್ತಿ ಗ್ರಾಮ ಪಂಚಾಯತಿ ಸಿಬ್ಬಂದಿ ಘಂಟೆ ಹನ್ನೊಂದಾದರೂ ಕಚೇರಿಗೆ ಬಾರದೆ ಸಾರ್ವಜನಿಕರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು ಅಧಿಕಾರಿಗಳ ನಡೆಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಸರಕಾರಗಳಿಂದ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸಾಕಷ್ಟು ಕಾನೂನುಗಳನ್ನ ಜಾರಿಗೆ ತಂದರೂ ಅಧಿಕಾರಿಗಳು ಮಾತ್ರ ಯಾವುದಕ್ಕೂ ಕ್ಯಾರೆ ಎನ್ನದೇ ನಾವು ನಡೆದದ್ದೇ ಹಾದಿ ಎನ್ನುವಂತೆ ನಡೆದುಕೊಳ್ಳುತ್ತಿರುವದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು ತಕ್ಷಣ ಇಂತಹ ಬೇಜವಾಬ್ದಾರಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಗಡಿ ಕನ್ನಡಿಗ ಪತ್ರಿಕೆ ಜೊತೆ ಮಾತನಾಡಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಮೇತ್ರಿ ಈಗಾಗಲೇ ಎಲ್ಲ ಗ್ರಾಪಂ ಸಿಬ್ಬಂದಿಗಳಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಿದ್ದು ಶೇ80%ರಷ್ಟು ಹಾಜರಾತಿ ಇದ್ದರೆ ಮಾತ್ರ ವೇತನಕ್ಕೆ ಅನುಮೋದನೆ ನೀಡಲಾಗತ್ತೆ ಅದರ ಜೊತೆಗೆ ಸರಿಯಾದ ಸಮಯಕ್ಕೆ ಪಂಚಾಯತಿಗೆ ಬಂದು ಜಿಪಿಎಸ್ ಪೋಟೊ ತೆಗೆದು ಕಳಿಸುವಂತೆ ಆದೇಶ ಮಾಡಿದ್ದೇನೆ ಮತ್ತು ದೇವಲತ್ತ ಪಿಡಿಓಗ ಮರಡಿಯವರಿಗೆ ಮೌಕಿಕ ಎಚ್ಚರಿಕೆ ನೀಡಿದ್ದು ಇನ್ನೊಂದು ಬಾರಿ ಈ ತಪ್ಪು ಮರುಕಳಿಸದಂತೆ ನೋಡಿಕೊಳ್ಳುವಂತೆ ಸೂಚಿಸಿದ್ದೇನೆ.