This is the title of the web page
This is the title of the web page

Please assign a menu to the primary menu location under menu

State

ಗ್ರಾವi ಒನ್ ಕೇಂದ್ರಗಳು ಹೆಚ್ಚು ಕ್ರಿಯಾಶೀಲವಾಗಿ ಸೇವೆ ಒದಗಿಸಲಿ ಸರ್ಕಾರದ ಸೌಲಭ್ಯ ಸಾರ್ವಜನಿಕರಿಗೆ ತ್ವರಿತ ದೊರಕಿಸಲು ಶ್ರಮಿಸಿ


ಗದಗ ಅಕ್ಟೋಬರ್ ೨೦: ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಜನರು ಸಮಯ ಹಾಗೂ ಹಣ ವ್ಯಯಿಸುವುದನ್ನು ತಪ್ಪಿಸಲು ಜನರ ಬಳಿಯೇ ಸೇವೆಗಳನ್ನು ತಲುಪಿಸುವ ಧ್ಯೇಯದೊಂದಿಗೆ ಗ್ರಾಮ್ ಒನ್ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಗ್ರಾಮ್ ಒನ್ ಕೇಂದ್ರಗಳು ಹೆಚ್ಚು ಕ್ರಿಯಾಶೀಲವಾಗಿ ಸೇವೆ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎನ್. ಸೂಚಿಸಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ದಲ್ಲಿ ಗುರುವಾರದಂದು ಗ್ರಾಮ್ ಒನ್ ಹಾಗೂ ಪಡಿತರ ಕೇಂದ್ರಗಳ ಮಾಲೀಕರೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಡಿತರ ನ್ಯಾಯಬೆಲೆ ಅಂಗಡಿ ಹಾಗೂ ಗ್ರಾಮ ಒನ್ ಕೇಂದ್ರಗಳ ಸೇವಾ ಕರ್ತರುಗಳು ಒಟ್ಟಾಗಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಚುನಾವಣಾ ಗುರುತಿನ ಚೀಟಿಗೆ ಆಧಾರ್ ಕಾರ್ಡ ಜೋಡಣೆ ಕಾರ್ಯವನ್ನು ಲಿಂಕ್ ಮಾಡುವ ಕಾರ್ಯ ತೀವ್ರಗತಿಯಲ್ಲಿ ಜರುಗಬೇಕು. ಪಿ.ಎಂ.ಕಿಸಾನ್ ಸೌಲಭ್ಯ ಪಡೆಯಲು ರೈತರ ದಾಖಲೆಗಳನ್ನು ಇ ಕೆ ವೈಸಿ ಮಾಡುವುದು. ಆರೋಗ್ಯ ಇಲಾಖೆಯ ಆಭಾ ಕಾರ್ಡ , ಆಯುಷ್ಮಾನ್ ಆರೋಗ್ಯ ಕರ್ನಾಟಕ ಕಾರ್ಡ ತ್ವರಿತಗತಿಯಲ್ಲಿ ಅಪ್‌ಡೇಟ್ ಮಾಡುವುದು. ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಗೆ ಇ- ಕೆವೈಸಿ ಮಾಡುವ ಕಾರ್ಯವನ್ನು ಗ್ರಾಮ ಒನ್ ಹಾಗೂ ಪಡಿತರ ನ್ಯಾಯಬೆಲೆ ಅಂಗಡಿ ಕಾರರು ತ್ವರಿತವಾಗಿ ಮಾಡಬೇಕು. ಈ ಮೂಲಕ ಸರ್ಕಾರದ ಸೌಲಭ್ಯಗಳು ಜನಸಾಮಾನ್ಯರಿಗೆ ಸುಲಭವಾಗಿ ತಲುಪಿಸಲು ಸಾಧ್ಯವಾಗಲಿದೆ ಎಂದರು.
ಆಭಾ ಕಾರ್ಡ ಮತ್ತು ಆಧಾರ್ ಕಾರ್ಡ ಹಾಗೂ ಮೊಬೈಲ್ ಸಂಖ್ಯೆ ಲಿಂಕ್ ಮಾಡುವ ಕಾರ್ಯವನ್ನು ಪ್ರತಿ ದಿನಕ್ಕೆ ಜಿಲ್ಲೆಯಲ್ಲಿ ೧೦,೦೦೦ ಗುರಿ ಸಾಧನೆಯಾಗಬೇಕು. ಜಿಲ್ಲೆಯ ಶಾಲಾ, ಕಾಲೇಜು ಹಾಗೂ ಆರ್.ಡಿ.ಪಿ.ಆರ್. ಯುನಿವರ್ಸಿಟಿಗೆ ತೆರಳಿ ಅಲ್ಲಿ ಆರೋಗ್ಯ ಇಲಾಖೆಯ ಅಭಾ ಕಾರ್ಡಗಳನ್ನು ಅರ್ಹ ಫಲಾನುಭವಿಗಳಿಗೆ ಪೂರೈಸಬೇಕು. ಈ ಪ್ರಕ್ರಿಯೆ ತ್ವರಿತವಾಗಿ ಕೈಗೊಳ್ಳುವ ಮೂಲಕ ಶೇ ೧೦೦ ರಷ್ಟು ಗುರಿ ಸಾಧನೆಗೆ ವಿವಿಧ ಇಲಾಖಾಧಿಕಾರಿಗಳು ಮುಂದಾಗಬೇಕೆಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಗದೀಶ ನುಚ್ಚಿನ್ ಮಾತನಾಡಿ ಜನಸಾಮಾನ್ಯರೆಲ್ಲರೂ ಆಭಾ ಹಾಗೂ ಆಯುಷ್ಮಾನ್ ಆರೋಗ್ಯ ಕರ್ನಾಟಕ ಕಾರ್ಡನ್ನು ಮಾಡಿಸಿಕೊಳ್ಳಬೇಕು. ಬಿಪಿಲ್ ಚೀಟಿದಾರರು ಈ ಆರೋಗ್ಯ ಕಾರ್ಡ ಪಡೆಯುವ ಮೂಲಕ ಉಚಿತವಾಗಿ ಆರೋಗ್ಯ ವಿಮೆ ಸೌಲಭ್ಯಕ್ಕೆ ಒಳಪಡಲಿದ್ದಾರೆ.ಹಾಗೂ ಕುಟುಂಬದ ಸದಸ್ಯರ ಆರೋಗ್ಯ ಚಿಕಿತ್ಸೆಗಾಗಿ ೫ ಲಕ್ಷದವರೆಗೆ ಆರ್ಥಿಕ ಸೌಲಭ್ಯಗಳನ್ನು ಹೊಂದಬಹುದಾಗಿದೆ. ಆಯುಷ್ಮಾನ್ ಆರೋಗ್ಯ ಕರ್ನಾಟಕ ಕಾರ್ಡನಿಂದ ದೇಶದ ೧೦ ಲಕ್ಷ ಬಿಪಿಎಲ್ ಕುಟುಂಬಗಳು ಸೌಲಭ್ಯಕ್ಕೆ ಅರ್ಹರಾಗಿದ್ದಾರೆ.
ಆಭಾ ಹಾಗೂ ಆಯುಷ್ಮಾನ್ ಕಾರ್ಡ ಇರುವವರು ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಚಿಕಿತ್ಸೆಯ ಸಂಪೂರ್ಣ ವಿವರವನ್ನು ಡಿಜಟಲೀಕರಣ ಮಾಡಬಹುದಾಗಿದೆ. ಆಯುಷ್ಮಾನ್ ಕಾರ್ಡ ಸಂಖ್ಯೆಯನ್ನು ನೊಂದಾಯಿಸುವ ಮೂಲಕ ಆಸ್ಪತ್ರೆಯಲ್ಲಿ ಈ ಹಿಂದೆ ಪಡೆದ ಚಿಕಿತ್ಸೆಯ ವಿವರವನ್ನು ತಕ್ಷಣ ನೋಡಿ ರೋಗಿಗೆ ಸೂಕ್ತ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ ಎಂದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಎಂ.ಗಂಗಪ್ಪ ಮಾತನಾಡಿ ಪಡಿತರ ಚೀಟಿದಾರರು ಪಡಿತರ ಪಡೆಯಲು ಅಂಗಡಿಗೆ ಬಂದಾಗ ಆಧಾರ್ ಕಾರ್ಡ ಜೋಡಣೆ ಆಗಿರುವ ಕುರಿತು ಖಚಿತಪಡಿಸಿಕೊಳ್ಳಬೇಕು. ಜೊತೆಗೆ ಚುನಾವಣಾ ಗುರುತಿನ ಚೀಟಿಯೊಂದಿಗೆ ಆಧಾರ ಕಾರ್ಡ ಲಿಂಕ್ ಮಾಡುವ ಬಗ್ಗೆ ಗ್ರಾಮ್ ಒನ್ ಕೇಂದ್ರಗಳಿಗೆ ಅಗತ್ಯ ದಾಖಲೆಗಳೊಂದಿಗೆ ಕಳುಹಿಸಿ ಲಿಂಕ್ ಪ್ರಕ್ರಿಯೆ ಪೂರ್ಣಗೊಳಿಸಲು ಸಹಕರಿಸಬೇಕು. ಜೊತೆಗೆ ಪಿಎಂ ಕಿಸಾನ್ ಸೌಲಭ್ಯ ಪಡೆಯಲು ರೈತರುಗಳು ಈ ಕೆವೈಸಿ ಕಡ್ಡಾಯವಾಗಿದ್ದು ಈ ಕಾರ್ಯವನ್ನು ಗ್ರಾಮ ಒನ್ ಕೇಂದ್ರಗಳು ಕ್ರಿಯಾಶೀಲವಾಗಿ ನಿರ್ವಹಿಸಲು ನ್ಯಾಯಬೆಲೆ ಅಂಗಡಿಕಾರರು ಅದಕ್ಕೆ ಸಹಕಾರ ನೀಡುವಂತೆ ಕೋರಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಶ್ರೀಮತಿ ಅನ್ನಫೂರ್ಣ ಎಂ, ಕಾರ್ಯಕ್ರಮ ಅನುಷ್ಟಾನಾಧಿಕಾರಿ ಡಾ. ರಾಜೇಂದ್ರ ಬಸರಿಗಿಡದ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವಲಿಂಗಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕಾಂಬ್ಳೆ, ಗ್ರಾಮ ಒನ್ ಕೇಂದ್ರಗಳ ಆಪರೇಟರುಗಳು, ಮುಖ್ಯಸ್ಥರು, ಪಿಡಿಓಗಳು ವಿವಿಧ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

 


Gadi Kannadiga

Leave a Reply