This is the title of the web page
This is the title of the web page

Please assign a menu to the primary menu location under menu

Local News

ಆಜಾದ್ ಮಜದೂರ್ ಕಿಸಾನ್ ಪಕ್ಷದ ಸಂಜೀವ ಕಾಂಬಳೆ ಅವರಿಂದ ಭರ್ಜರಿ ಪ್ರಚಾರ


ಅಥಣಿ: ೨೦೨೩ರ ಕರ್ನಾಟಕ ಸಾರ್ವತ್ರಿಕ ವಿಧಾನ ಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿಯೇ ಹೈ ವೊಲ್ಟೇಜ್ ವಿಧಾನಸಭಾ ಮತಕ್ಷೇತ್ರ ಎಂದು ಖ್ಯಾತಿ ಪಡೆದಿರುವ ೩-ಅಥಣಿ ವಿಧಾನಸಭಾ ಮತಕ್ಷೇತ್ರದಲ್ಲಿ ಎಲ್ಲ ಅಭ್ಯರ್ಥಿಗಳಿಂದ ಭರ್ಜರಿ ಮತ ಪ್ರಚಾರ ನಡೆಯುತ್ತಿದೆ. ಅದರಲ್ಲೂ ರೈತರ ಪಕ್ಷವೆಂದು ಗುರುತಿಸಲ್ಪಟ್ಟ ಆಜಾದ್ ಮಜದೂರ್ ಕಿಸಾನ್ ಪಕ್ಷದಿಂದ ಅಭ್ಯರ್ಥಿಯಾಗಿರುವ ಸಂಜೀವ ಹರಿಶ್ಚಂದ್ರ ಕಾಂಬಳೆ ಅವರಿಂದ ಅಥಣಿ ಮತಕ್ಷೇತ್ರದಾದ್ಯಂತ ಭರ್ಜರಿ ಪ್ರಚಾರ ನಡೆದಿದೆ.
ಈ ಸಂದರ್ಭದಲ್ಲಿ ಅಭ್ಯರ್ಥಿ ಸಂಜೀವ ಹರಿಶ್ಚಂದ್ರ ಕಾಂಬಳೆ ಮಾತನಾಡಿ ಕ್ಷೇತ್ರದ ಸಮಸ್ಯೆಗಳ ನಿವಾರಣೆಗೆ ದುಡಿಯಲು ತಾವು ಸದಾ ಸಿದ್ಧ ಎಂದರು. ನಿಮ್ಮ ಸಮಸ್ಯೆಗಳನ್ನು ನನ್ನ ಬಳಿ ತನ್ನಿ ಅವುಗಳ ನಿವಾರಣೆಗೆ ಶಕ್ತಿ ಮೀರಿ ಯತ್ನಿಸುತ್ತೇನೆ ಎಂದು ಸಂಜೀವ ಹರಿಶ್ಚಂದ್ರ ಕಾಂಬಳೆ ಭರವಸೆ ನೀಡಿದರು. ತಮಗೆ ಬಹುಮತ ನೀಡಿ ಆಯ್ಕೆ ಮಾಡುವಂತೆ ಅವರು ಮನವಿ ಮಾಡಿದರು. ಕ್ಷೇತ್ರದ ಎಲ್ಲೆಡೆ ಜನತೆಯಿಂದ ತಮಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದ್ದು, ತಮಗೆ ಗೆಲುವು ನಿಶ್ಚಿತ ಎಂದು ಹೇಳಿದರು. ಹುಲಗಬಾಳಿ, ಆಕಳಕಲ್ಲು, ಹೊಸಟ್ಟಿ, ಸಂಕೋನಟ್ಟಿ, ಅಥಣಿಯ ವಿವಿಧ ಪ್ರದೇಶಗಲ್ಲಿ ಮತಯಾಚನೆ ಮಾಡಿ ಆಜಾದ್ ಮಜದೂರ್ ಕಿಸಾನ್ ಪಕ್ಷಕ್ಕೆ ಬೆಂಬಲಿಸಿ, ಆಶೀರ್ವದಿಸಲು ಕೋರಿದರು.
ಈ ಸಂದರ್ಭದಲ್ಲಿ ರವೀಂದ್ರ ಕಾಂಬಳೆ, ನಾಗರಾಜ ಕಾಂಬಳೆ, ರಾಜು ಕಾಂಬಳೆ, ಗಣಪತಿ ಕಾಂಬಳೆ, ವಿಠ್ಠಲ ಕಾಂಬಳೆ ಮತ್ತು ಅಭಿಮಾನಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

 


Leave a Reply