ಘಟಪ್ರಭಾ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಸಮೀಪದ ಅರಭಾಂವಿ ಪಟ್ಟಣದಲ್ಲಿ ಸೋಮವಾರದಂದು ಹಸಿರು ಶಾಲು ದೀಕ್ಷಾ ಕಾರ್ಯಕ್ರಮದಲ್ಲಿ ನೂರಾರು ರೈತರು ಶಾಲು ದೀಕ್ಷೆಯನ್ನು ಸ್ವೀಕರಿಸುವ ಮೂಲಕ ರೈತ ಸಂಘವನ್ನು ಸೇರ್ಪಡೆಯಾದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರಾಜ್ಯ ಪ್ರಧಾನ ಕಾರ್ಯದರ್ಶಿ ಭೀಮಶಿ ಗದಾಡಿ ಮಾತನಾಡಿ, ರೈತರು ತಮ್ಮ ಹಕ್ಕುಗಳನ್ನು ಪಡೆಯುವುದಕ್ಕಾಗಿ ಹೋರಾಟ ಮಾಡುವುದು ಇಂದಿನ ಅನಿವಾರ್ಯತೆಗಳಲ್ಲಿ ಒಂದಾಗಿದೆ. ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ಬೃಷ್ಟಾಚಾರ ತಾಂಡವಾಡುತ್ತಿದ್ದು ಅದನ್ನು ಹತ್ತಿಕ್ಕಲು ರೈತರು ಸಂಘಟಿತರಾಗಬೇಕು. ಇಡೀ ಜಗತ್ತಿಗೆ ಆಹಾರವನ್ನು ನೀಡುವ ರೈತರು ಇಂದು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ಯೋಗ್ಯವಾದ ಬೆಲೆ ಸಿಗುತ್ತಿಲ್ಲ. ಬೆಳೆಗಳನ್ನು ಬೆಳೆಯಲು ಅವಶ್ಯಕ ಸಾಮಗ್ರಿಗಳಾದ ಬೀಜ, ಗೊಬ್ಬರ, ವಿದ್ಯುತ್, ನೀರು ಸರಿಯಾದ ಸಮಯದಲ್ಲಿ ಸಿಗದೇ ಇರುವುದರಿಂದ ಮತ್ತಷ್ಟು ಸಮಸ್ಯೆಗಳಿಗೆ ಏಡೆ ಮಾಡಿಕೊಟ್ಟಂತಾಗಿದೆ. ನಾವು ನಮ್ಮ ಹಕ್ಕು ಹಾಗೂ ಬೃಷ್ಠಾಚಾರವನ್ನು ಹೊಡೆದೂಡಿಸಲು ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಶಂಕರ ಮದಿಹಳ್ಳಿ, ತಾಲೂಕಾಧ್ಯಕ್ಷ ರಮೇಶ ಗೂದಿಗೊಪ್ಪ, ಮುಖಂಡರಾದ ಮುತ್ತೇಪ್ಪ ಝಲ್ಲಿ, ಮಹಾದೇವ ಗುಡಿತೋಟ, ರಮೇಶ ಸಂಪಗಾಂವಿ, ಭೀಮಶಿ ಮಾಳೇದಾರ, ಮುದಕಪ್ಪ ಗೌಡಪ್ಪನವರ, ಅವಿನಾಶ ಖಾನಪ್ಪನ್ನವರ, ಮುತ್ತೇಪ್ಪ ಹುಲಕುಂದ, ಮಲ್ಲಪ್ಪ ಬಂಡಿ, ನಾಗರಾಜ ಗಂಗಪ್ಪಗೋಳ, ಸಿದ್ದಪ್ಪ ಮರ್ದಿ, ಲಕ್ಷö್ಮಣ ದಾಸನ್ನವರ, ಹಣಮಂತ ಅಳಗೋಡಿ, ಲಗಮಣ್ಣ ಪೂಜೇರಿ, ಮುತ್ತೇಪ್ಪ ಹಳ್ಳೂರ, ಗಿರೇಪ್ಪ ಮರೆವ್ವಗೋಳ, ಲಕ್ಷö್ಮಣ ಹೂಲಿಕಟ್ಟಿ, ಧರೆಪ್ಪ ಹಣಮನ್ನವರ, ಮಾರುತಿ ಸನ್ನಿಪನ್ನಿ, ಹಣಮಂತ ಮಸಗುಪ್ಪಿ ಸೇರಿದಂತೆ ಅನೇಕರು ಇದ್ದರು.
Gadi Kannadiga > Local News > ಹಸಿರು ಶಾಲು ದೀಕ್ಷಾ ಕಾರ್ಯಕ್ರಮ
ಹಸಿರು ಶಾಲು ದೀಕ್ಷಾ ಕಾರ್ಯಕ್ರಮ
Suresh17/07/2023
posted on
