This is the title of the web page
This is the title of the web page

Please assign a menu to the primary menu location under menu

Local News

ಸಾಲು ಮರದ ತಿಮ್ಮಕ್ಕನವರಿಗೆ ಪರಿಸರ ರಾಯಬಾಗಿ ಹುಕ್ಕೇರಿ ಶ್ರೀಗಳಿಂದ ಅಭಿನಂದನೆ


ಬೆಳಗಾವಿ : ಸಾಲುಮರದ ತಿಮ್ಮಕ್ಕನವರು ಬಯಸಿದ್ದಲ್ಲಿ ಪ್ರಚಾರ ಕೈಕೊಳ್ಳಲು ರಾಜ್ಯ ಸಚಿವ ಸ್ಥಾನ ಮಾನ ನೀಡುವ ಜತೆಗೆ ಪರಿಸರದ ರಾಯಬಾರಿಯನ್ನಾಗಿ ಮಾಡಿದ ಕರ್ನಾಟಕ ಸರಕಾರಕ್ಕೆ ಹುಕ್ಕೇರಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಸಾಲುಮರದ ತಿಮ್ಮಕ್ಕ ನವರಿಗೆ ಎಲ್ಲಡೆ ಗೌರವ ಸಲ್ಲುತ್ತಿದೆ. ಹಳ್ಳಿಯಿಂದ ದಿಲ್ಲಿಯವರೆಗೆ ಹೋಗಿ ಬಂದ ಇವರಿಗೆ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳ ಪಟ್ಟಾಧಿಕಾರದ ರಜತ ಮಹೋತ್ಸವದಲ್ಲಿ ಮಹಾಮಾತಾ ಪ್ರಶಸ್ತಿಯನ್ನು ನೀಡಿದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲೇ ಬೇಕು.
ಹುಕ್ಕೇರಿ ಶ್ರೀಗಳ ಪರಿಸರದ ಪ್ರೇಮಕ್ಕೆ ಮನಸೋತ್ತಿದ್ದ ಸಾಲುಮರದ ತಿಮ್ಮಕ್ಕ ಅವರು ಹುಕ್ಕೇರಿಗೆ ಆಗಮಿಸಿ ಜಿಲ್ಲೆಯ ಜನರಿಗೆ ಮರಗಳನ್ನು ಬೆಳೆಸಿ ಪರಿಸರ ಕಾಪಾಡುವಂತೆ ಮನವಿ ಮಾಡಿದ್ದರು.

ಸಾಲುಮರದ ತಿಮ್ಮಕ್ಕ ಅವರಿಗೆ ಸರಕಾರ ಪರಿಸರದ ರಾಯಬಾರಿಯನ್ನಾಗಿ ಮಾಡಿ ಇವರಿಗೆ ರಾಜ್ಯ ಸಚಿವರ ಸ್ಥಾನಮಾನ ಕಲ್ಪಿಸಿರುವುದು ಅಭಿನಂದನೀಯ ಎಂದು ಶ್ರೀಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕಾರ್ಯವನ್ನು ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರನ್ನು ಅಭಿನಂಧಿಸಿ ಆಶೀರ್ವಾಧಿಸುತ್ತೇವೆ ಎಂದು ಶ್ರೀಗಳು ಸಂತಸ ವ್ಯಕ್ತಪಡಿಸಿದರು.

ಸಾಲುಮರದ ತಿಮ್ಮಕ್ಕ ನವರು ನಮಗೆಲ್ಲರಿಗೂ ಆದರ್ಶ. ಅವರ ಆದರ್ಶವನ್ನು ಎಲ್ಲರೂ ಅಳವಡಿಸಿಕೊಂಡು ಪರಿಸರ ಪ್ರೇಮವನ್ನು ಉಳಿಸಿ ಬೆಳೆಸಬೇಕೆಂದು ಶ್ರೀಗಳು ಕರೆ ನೀಡಿದ್ದಾರೆ.


Gadi Kannadiga

Leave a Reply