This is the title of the web page
This is the title of the web page

Please assign a menu to the primary menu location under menu

State

ಸಮೂಹ ಅಪಘಾತ ಸುರಕ್ಷಾ ಪಾಲಿಸಿ


ಗದಗ ಅಕ್ಟೋಬರ್ ೧೪: ಭಾರತೀಯ ಅಂಚೆ ಇಲಾಖೆಯು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನ ಮೂಲಕ ಖಿಂಖಿಂ / ಂIಉ ಅಥವಾ ಸಮೂಹ ಅಪಘಾತ ಸುರಕ್ಷಾ ಪಾಲಿಸಿಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಬಿಡುಗಡೆ ಮಾಡಿರುತ್ತದೆ.
ಸಮೂಹ ಅಪಘಾತ ಸುರಕ್ಷಾ ಪಾಲಿಸಿ : ಸಮೂಹ ಅಪಘಾತ ಸುರಕ್ಷಾ ಪಾಲಿಸಿ ಅಡಿಯಲ್ಲಿ ಪ್ರತಿಯೊಬ್ಬರು ತಮ್ಮ ಹಾಗೂ ತಮ್ಮ ಕುಟುಂಬದ ಎಲ್ಲಾ ಸದಸ್ಯರಿಗೆ, ಅನಿರೀಕ್ಷಿತ ಆಘಾತಗಳಿಂದಾಗುವ ದೈಹಿಕ ಹಾಗೂ ಹಣಕಾಸಿನ ತೊಂದರೆಗಳನ್ನು ಸರಳವಾಗಿ ನಿಭಾಯಿಸಬಹುದು.
ಸಾಮಾನ್ಯ ಲಕ್ಷಣಗಳು:
ಕೇವಲ೩೯೯/- ಹಾಗೂ ೨೯೯/- ರೂಪಾಯಿಗಳ(ತೆರಿಗೆ ಬಳಿಕದ) ಕಂತಿನಲ್ಲಿ ಶಾಶ್ವತ ಸಂಪೂರ್ಣ ವೈಕಲ್ಯ, ಅಪಘಾತದಲ್ಲಿ ಸಾವು,ಅಪಘಾತದಿಂದ ಅಂಗಾಂಗಛೇದನಗಳಂತಹ ಅಪಘಾತಗಳಲ್ಲಿ, ೧೦ ಲಕ್ಷ ರೂಪಾಯಿಗಳ ಕವರೇಜ್ ನ್ನು ಪಡೆಯಬಹುದು. ಕೇವಲ೩೯೯/- ಹಾಗೂ ೨೯೯/- ರೂಪಾಯಿಗಳ ಕಂತಿನಲ್ಲಿ ಅಪಘಾತದ ವೈದ್ಯಕೀಯ ವೆಚ್ಚಗಳು ಹೊರರೋಗಿ ವಿಭಾಗದಲ್ಲಿ ೩೦,೦೦೦ ರೂಪಾಯಿಗಳ ಕವರೇಜ್, ಆಸ್ಪತ್ರೆಯಲ್ಲಿ ದಾಖಲಾದಾಗ ದೈನಂದಿನ ೧೦೦೦ ರಂತೆ ೧೦ ದಿನಗಳ ವರೆಗೆ, ಕುಟುಂಬದವರಿಗೆ ಸಾರಿಗೆಪ್ರಯೋಜನಗಳು (೨೫೦೦೦/- ವರೆಗೆ), ಅಂತಿಮ ಸಂಸ್ಕಾರಕ್ಕೆ ೫೦೦೦/- ರೂಪಾಯಿಗಳನ್ನು ಪಡೆಯಬಹುದು. ವಿಮೆ ಮೊತ್ತದ ೧೦% ಅಥವಾ ನೈಜ ಮೊತ್ತ, ಇವುಗಳಲ್ಲಿ ಯಾವುದು ಕಡಿಮೆಯೊ ಆ ಮೊತ್ತದ ಶೈಕ್ಷಣಿಕ ಪ್ರಯೋಜನವನ್ನು ಗರಿಷ್ಠ ೨ ಅರ್ಹ ಮಕ್ಕಳಿಗೆ ಪಡೆಯಬಹುದು. ಈ ವಿಮೆಯನ್ನು ತೆಗೆದುಕೊಳ್ಳಲು ೧೮ ರಿಂದ ೬೫ ವರ್ಷದ ವಯೋಮಿತಿಯವರಾಗಿರಬೇಕು.
ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.


Gadi Kannadiga

Leave a Reply