This is the title of the web page
This is the title of the web page

Please assign a menu to the primary menu location under menu

Local News

ಸಮೂಹ ಮಟ್ಟದ ಪ್ರತಿಭಾ ಕಾರಂಜಿ


ಮೂಡಲಗಿ: ಕಲಿಕೆಯ ಜೊತೆ ಮಕ್ಕಳು ಸಹ ಪಠ್ಯ ಚಟುವಟಿಕೆಗಳ ಕಡೆಗೆ ಗಮನ ಹರಿಸಿದಾಗ ಸದೃಢ ಸ್ವಾಸ್ಥ್ಯ ಸಮಾಜ ನಿರ್ಮಿಸಬಹುದು. ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರಗೆಳೆದು ಪೋಷಿಸುವ ವಿಭಿನ್ನವಾದ ಈ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಸೂಕ್ತ ವೇದಿಕೆಯಾಗಿದೆ ಎಂದು ಗೋಕಾಕ ಲಕ್ಷ್ಮೀ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಅವರು ಸಮೀಪದ ಖಂಡ್ರಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಸುಣಧೋಳಿ ಸಮೂಹ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಭಿನ್ನ ಶೈಕ್ಷಣಿಕವಾಗಿ ಪೂರಕವಾಗುವ ಚಟುವಟಿಕೆಯಾಧಾರಿತ ಕೌಶಲಗಳಿಂದ ಮಕ್ಕಳಲ್ಲಿರುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದಂತಾಗುವದು. ಮಕ್ಕಳ ಪ್ರತಿಭೆ ಹೊರಹೊಮ್ಮುಲು ಸೂಕ್ತ ವೇದಿಕೆಯನ್ನು ಒದಗಿಸುವ ಜವಾಬ್ದಾರಿ ಶಿಕ್ಷಕರದಾಗಿದೆ. ಮೂಡಲಗಿ ಶೈಕ್ಷಣಿಕ ವಲಯವು ಶೈಕ್ಷಣಿಕವಾಗಿ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಪ್ರಮುಖವಾಗಿ ಅರಭಾವಿ ಕ್ಷೇತ್ರದ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಶೈಕ್ಷಣಿಕ ಕೊಡುಗೆಗಳಿಂದ ಭವಿಷ್ಯತ್ತಿನ ಪ್ರಜೆಗಳ ನಿರ್ಮಾಣ ಕಾರ್ಯದಲ್ಲಿ ಶಿಕ್ಷಕರ ಕಾರ್ಯವೈಖರಿ ಶ್ಲಾಘನೀಯವಾಗಿದೆ ಎಂದರು.
ಸುಣಧೋಳಿ ಸಮೂಹ ಸಂಪನ್ಮೂಲ ವ್ಯಕ್ತಿ ಎಚ್ ಎನ್ ಬೆಳಗಲಿ ಪ್ರಸ್ತಾವಿಕವಾಗಿ ಮಾತನಾಡಿ, ಸರ್ಕಾರದ ಪ್ರತಿಯೊಂದು ಕಾರ್ಯಕ್ರಮಗಳಿಗೆ ಸಮುದಾಯ ಕೈಜೋಡಿಸಿದಾಗ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗೆ ಸಹಾಯಕವಾಗುವದೆಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಎಸ್ ಎಂ ನದಾಫ್ ಅವರನ್ನು ಸತ್ಕರಿಸಿದರು. ಕಿರಿಯ ಮತ್ತು ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಹಂತದ ವಿವಿಧ ಸ್ಪರ್ಧೆಗಳಲ್ಲಿ ಜಯಶಾಲಿಗಳಿಗೆ ಬಹುಮಾನ ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಶಾಸಕರ ಆಪ್ತಸಹಾಯಕ ಅಬ್ದುಲ್ ಮಿರ್ಜಾನಾಯಕ, ಎಸ್‌ಡಿಎಂಸಿ ಅಧ್ಯಕ್ಷ ತುಕಾರಾಮ ವಾಲಿಕಾರ, ಗ್ರಾಪಂ ಸದಸ್ಯರಾದ ಲಕ್ಷ್ಮಣ ಬಿರಾಣಿ, ಬಸವರಾಜ ಕಪರಟ್ಟಿ, ಅಕ್ಕವ್ವ ಎತ್ತಿನಮನಿ, ಪ್ರಧಾನ ಗುರುಗಳಾದ ಕೆ.ಡಿ ಜಗ್ಗಿನವರ, ಪಿ.ವಾಯ್ ಕೌಜಲಗಿ, ಮುಖಂಡರಾದ ಗಣೇಶ ಚಪ್ಪಲಕಟ್ಟಿ, ವಸಂತ ಕಪರಟ್ಟಿ, ಬಾಳಪ್ಪ ಕಪರಟ್ಟಿ, ಯಲ್ಲಪ್ಪ ಸೂರನ್ನವರ, ಅರ್ಜುನ ಅಳಗೋಡಿ, ದೇವಪ್ಪ ಬಿರಾಣಿ, ರಾಯಪ್ಪ ಜಗ್ಗಿನವರ, ದುಂಡಪ್ಪ ದುರದುಂಡಿ, ನಾಗಪ್ಪ ಮೊಸಗೌಡರ, ಭೀಮಶಿ ಭಜಂತ್ರಿ, ರಂಗಪ್ಪ ಕಪರಟ್ಟಿ, ತಿಪ್ಪಣ್ಣ ಜಾಗನೂರ, ಭೀಮಶಿ ನಿಂಗನ್ನವರ ಹಾಗೂ ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು. ಕಾರ್ಯಕ್ರಮವನ್ನು ಹನುಮಂತ ದಡ್ಡಿಮನಿ ನಿರೂಪಿಸಿದರು. ಪ್ರತಿಭಾ ಎನ್ ಸ್ವಾಗತಿಸಿ, ಲಕ್ಕಣ್ಣ ಬಾನಿ ವಂದಿಸಿದರು.


Leave a Reply