ಬೆಳಗಾವಿ ೭- ವಾಣಿಜ್ಯ ತೆರಿಗೆ ಇಲಾಖೆಯ ಬೆಳಗಾವಿ ವಿಭಾಗದ ಬೆಳಗಾವಿ ಕಛೇರಿಯಲ್ಲಿ ಇಂದು ಸರಕು ಮತ್ತು ಸೇವಾ ತೆರಿಗೆ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಡಾ. ಎಮ್. ಜೆ. ರಮೇಶಬಾಬು ಅವರು ಮಾತನಾಡುತ್ತ ದೇಶದಲ್ಲಿ ಜಿ.ಎಸ್.ಟಿ ನಡೆದುಬಂದ ದಾರಿ ವಿವರಿಸುತ್ತ, ರಾಜ್ಯವು ಜಿ.ಎಸ್.ಟಿಯ ಅನುಷ್ಠಾನ ಮತ್ತು ತೆರಿಗೆ ಸಂಗ್ರಹಣೆಯಲ್ಲಿ ಮುಂಚೂಣಿಯಲ್ಲಿದ್ದು, ಮುಂದೆಯೂ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದೇ ರೀತಿ ಕಾರ್ಯ ನಿರ್ವಹಿಸಬೇಕೆಂದು ಕರೆಕೊಟ್ಟರು. ಸಮಾರಂಭದ ಅಧ್ಯಕ್ಷತೆಯನ್ನು ಬೆಳಗಾವಿ ವಿಭಾಗದ ಜಂಟಿ ಆಯುಕ್ತರಾದ ಶ್ರೀಮತಿ ಯಾಸ್ಮೀನಬೇಗಂ ಜಿ. ವಾಲೀಕರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಾರಿ ವಿಭಾಗದ ಜಂಟಿ ಆಯುಕ್ತರು ಶ್ರೀ ಡಾ. ಎಮ್. ಜೆ. ರಮೇಶಬಾಬು ವಹಿಸಿದ್ದರು. ಕೇಕ ಕತ್ತರಿಸುವ ಮೂಲಕ ಜಿ.ಎಸ್.ಟಿ. ದಿನಾಚರಣೆಯನ್ನು ಆಚರಿಸಲಾಯಿತು.
ಜಿ.ಎಸ್.ಟಿ. ದಿನಾಚರಣೆಯ ಅಂಗವಾಗಿ ಬೆಳಗಾವಿ ವಿಭಾಗದಲ್ಲಿ ಸನ್ ೨೦೨೨-೨೩ ನೇ ಸಾಲಿನಲ್ಲಿ ಅತ್ಯುತ್ತಮ ಸೇವೆಯನ್ನು ಸಲ್ಲಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ “ವಿಭಾಗೀಯ ಸೇವಾ ಪ್ರಶಸ್ತಿ” ಯ ಸೇವಾಫಲಕ ಹಾಗೂ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಯಿತು.
ವೇದಿಕೆಯ ಮೇಲೆ ಶ್ರೀಮತಿ ದಾಕ್ಷಾಯಿಣಿ ಚೌಶೆಟ್ಟಿ ಜಂಟಿ ಆಯುಕ್ತರು ಮತ್ತು ಶ್ರೀ ಎನ್. ಎಸ್. ಪಾಟೀಲ ನೌಕರರ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದರು. ಆರಂಭದಲ್ಲಿ ಶ್ರೀ ಏಕೇಶ ಸಿದ್ದಪ್ಪಗೌಡರ ಸ್ವಾಗತಿಸಿದರು. ಶ್ರೀ ಜಿ. ಆರ್. ಕಲ್ಲೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಸುರೇಶ ಕೋರಕೊಪ್ಪ ಪ್ರಶಸ್ತಿ ಪ್ರದಾನ ಮಾಡಿದರು. ಶ್ರೀ ವ್ಹಿ. ಬಿ. ಶೀಗಿಹಳ್ಳಿ ವಂದಿಸಿದರು. ಎಮ್. ಬಿ. ಹೊಸಳ್ಳಿ ನಿರೂಪಿಸಿದರು. ಸಭೆಯಲ್ಲಿ ಇಲಾಖೆಯ ಎಲ್ಲ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
Gadi Kannadiga > Local News > ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಜಿ.ಎಸ್.ಟಿ ದಿನಾಚರಣೆ
ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಜಿ.ಎಸ್.ಟಿ ದಿನಾಚರಣೆ
Suresh07/07/2023
posted on
