ಗುಮಗೇರಾ ಟೆಂಗುಂಟಿ ರಸ್ತೆ ಕಾಮಗಾರಿ ಚಾಲನೆ ನೀಡಿದ ಶಾಸಕರು

Murugesh Shivapuji
ಗುಮಗೇರಾ ಟೆಂಗುಂಟಿ ರಸ್ತೆ ಕಾಮಗಾರಿ ಚಾಲನೆ ನೀಡಿದ ಶಾಸಕರು
WhatsApp Group Join Now

ಕುಷ್ಟಗಿ:-ಅಕ್ಟೋಬರ್ -14 ತಾಲೂಕಿನ ಗುಮಗೇರಾ ಗ್ರಾಮದಿಂದ ಟೆಂಗುಂಟಿ ರಸ್ತೆಯ ಭೂಮಿ ಪೂಜೆ ಮಾಡಿ ಕಾಮಗಾರಿಗೆ ಚಾಲನೆ ನೀಡಿದರು.

2023-2024 ನೇ ಸಾಲಿನ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ರಸ್ತೆ ನಿರ್ಮಾಣಕ್ಕೆ ಒಟ್ಟು 135.92 ಲಕ್ಷ ಅನುದಾನದಲ್ಲಿ 300ಮೀ ಸಿ ಸಿ ರಸ್ತೆ ಹಾಗೂ 1.8 ಕಿಮೀ ಡಾಂಬರೀಕರಣ ಸೇರಿ ಒಟ್ಟು 2.10 ಕೀ ಮೀಟರ್ ಉದ್ದದ ರಸ್ತೆ ಕಾಮಗಾರಿ ಪ್ರಾರಂಭವಾಯಿತು.

ಈ ಭಾಗದ ಬಹಳ ದಿನಗಳ ಬೇಡಿಕೆ ಯಾಗಿದ್ದ ಗುಮಗೇರಾ ದಿಂದ ಟೆಂಗುಂಟಿ ಗ್ರಾಮಗಳ ಕನಸು ನನಸಾಗಿದೆ. ಸರ್ಕಾರದ ಈ ಅನುದಾನವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಿ, ಎಂದು ಗ್ರಾಮಸ್ಥರಿಗೆ ಶಾಸಕರು ಹಾಗೂ ವಿಧಾನ ಸಭೆಯ ಮುಖ್ಯಸಚೇತಕರಾದ ದೊಡ್ಡನಗೌಡ ಎಚ್ ಪಾಟೀಲ್ ರವರು ಗ್ರಾಮಸ್ಥರಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪರಸಪ್ಪ ಗಂಗನಾಳ,ಉಪಾಧ್ಯಕ್ಷೆಯಾದ ಲಕ್ಷ್ಮವ್ವ ಚಿಪ್ರಿ ,ಗ್ರಾಮ ಪಂಚಾಯತಿ ಸದಸ್ಯರಾದ ದೇವರಾಜ ಗೌಡ ಪೋಲಿಸ್ ಪಾಟೀಲ್, ಸುಮಂಗಲಾ ಬಸವರಾಜ ಚೌಡ್ಕಿ ಮಾರುತಿ ಬಜಂತ್ರಿ ,ಅಕ್ಕಮಹಾದೇವಿ ಶರಣಪ್ಪ ಗುರಿಕಾರ,ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಪರಸಪ್ಪ ತರಲಕಟ್ಟಿ, ಗ್ರಾಮಸ್ಥರಾದ ಬೇವೂರಪ್ಪ ಹೊಟ್ಟೇರ್,ಹೊನ್ನಪ್ಪ ಗಂಗನಾಳ,ಯಲ್ಲಪ್ಪ ಲೈನದ್ ,ಯಂಕಪ್ಪ ಚೌಡ್ಕಿ, ಶೇಖಪ್ಪ ಸಂಗನಾಳ,ಬಸವರಾಜ ಗುಂಟಮಡುವು, ಗ್ಯಾನಪ್ಪ ಬ್ಯಾಲಿಹಾಳ,ಪಿಡಿಒ ಬಸಣ್ಣ ಮಾಟರಂಗಿ,ಹಾಗೂ ಗುತ್ತಿಗೆದಾರರಾದ ತಾವರಗೇರಿಯ ಯುವ ಮುಖಂಡರರಾದ ಶಿವರಾಜಗೌಡ ಪಾಟೀಲ್ ಎಇಇ ಧರಣೇಂದ್ರ,ಎಇ,ರಾಜಶೇಖರಗೌಡ,ಸೇರಿದಂತೆ ಗ್ರಾಮದ ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article
error: Content is protected !!