ಗಡಿ ಕನ್ನಡಿಗ
ಖಾನಾಪುರ: ತಾಲೂಕಿನ ತೀರ್ಥಕುಂಡೆ ಗ್ರಾಮದಲ್ಲಿ ಕಲ್ಲಿನ ಕ್ರಷರ್ ಮಿಷನ್ ಗಳು ಇಲಾಖೆ ನಿಯಮ ಮೀರಿ ಕಾರ್ಯನಿರ್ವಹಿಸುತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮಾತ್ರ ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳದಿರುವದನ್ನ ನೋಡಿದರೆ ಗಣಿಧನಿಗಳ ರಕ್ಷಣೆಗೆ ಅಧಿಕಾರಿಗಳೇ ನಿಂತಿದ್ದಾರೆ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಿದೆ.
ತೀರ್ಥಕುಂಡೆ ಹೊರವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಷಿನಗಳಿಂದ ಹಾರುತ್ತಿರುವ ಧೂಳಿನಿಂದ ಅಕ್ಕಪಕ್ಕದ ರೈತ ಬೆಳೆಗಳು ಸಂಪೂರ್ಣವಾಗಿ ಹಾಳಾಗುತ್ತಿದ್ದು ರೈತ ವರ್ಷಪೂರ್ತಿ ಕಷ್ಟ ಪಟ್ಟ ಬೆಳೆದ ಬೆಳೆ ಮಣ್ಣು ಪಾಲಾಗುತ್ತಿದ್ದು ಇದಕ್ಕೆಲ್ಲ ಅಧಿಕಾರಿಗಳ ಬೇಜವಾಬ್ದಾರಿತನವೇ ಕಾರಣ ಎಂದು ಸಾಮಾಜಿಕ ಹೋರಾಟಗಾರ ಜಾವೇದ ಮೊಖಾಶಿ ಆಕ್ರೋಶ ಹೊರಹಾಕಿದ್ದು.
ಕ್ರಶರ್ ಮಷಿನಗು ಕಾರ್ಯನಿರ್ವಹಿಸುತಗತಿರುವ ಕ್ವಾರಿಯ ಸುತ್ತ ತಗಡಿನ ಶೀಟ್ ಅಳವಡಿಸಬೇಕು ಮತ್ತು ದೂಳು ಹೊರಹೋಗದಂತೆ ನೀರು ಸಿಂಪಡಿಸಬೇಕು ಎಂಬ ಕಾಯ್ದೆಯಿದ್ದರೂ ಇದನ್ನೆಲ್ಲ ಮೀರಿ ಕ್ರಷರ್ ಮಾಲೀಕರು ಮೊಂಡಾಟ ನಡೆಸಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ಮೇಲೆ ಶೀರ್ಘ ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸುವದಾಗಿ ಅವರು ತಿಳಿಸಿದ್ದಾರೆ.