ಬೆಳಗಾವಿ : ವಿಜಯಪುರ ಜ್ಞಾನಯೋಗಾಶ್ರಮದ ಲಿಂಗೈಕ್ಯ ಸಿದ್ದೇಶ್ವರ ಮಹಾಸ್ವಾಮಿಗಳವರ ಗುರು ನಮನ ಕಾರ್ಯಕ್ರಮವು ಜನವರಿ 1 ಮತ್ತು 2 ರಂದು ನಡೆಯಲಿದೆ.
ಇದೇ ತಿಂಗಳ 25 ರಿಂದ ವಿಜಯಪುರದ ಜ್ಞಾನ ಯೋಗಾಶ್ರಮದಲ್ಲಿ ಪ್ರತಿ ದಿವಸ ಸಾಯಂಕಾಲ 5:00 ಗಂಟೆಗೆ ಸುಧಾರಿತ ಕೃಷಿ, ಜ್ಞಾನಾರಾಧನೆ, ಗ್ರಾಮ ಸಂಸ್ಕೃತಿ, ಯೋಗ ಜೀವನ, ಮಾತೃಭಕ್ತಿ , ಜಾಗತಿಕ ತಾತ್ವಿಕ ಚಿಂತನೆಗಳು, ಸೇವಾ ಭಾವ ಮತ್ತು ಗುರುದೇವರ ಬದುಕು ಮುಂತಾದ ವಿಷಯಗಳ ಕುರಿತು ವಿಶೇಷ ಗೋಷ್ಠಿಗಳು ನಡೆಯಲಿವೆ.
ಲಿಂಗೈಕ್ಯ ಸಿದ್ದೇಶ್ವರ ಮಹಾಸ್ವಾಮಿಗಳವರ ಪ್ರವಚನ ಆಧಾರಿತ ಕನ್ನಡ ಮತ್ತು ಹಿಂದಿ ಗ್ರಂಥಗಳ ಹಾಗೂ ಮರುಮುದ್ರಣಗೊಂಡ ಸಮಗ್ರ ಸಂಪುಟಗಳ ಬಿಡುಗಡೆ ನಡೆಯಲಿದೆ. ಶ್ರೀಗಳ ವಿಶೇಷ ಭಾವಚಿತ್ರ ಸಂಗ್ರಹಿಸಿದ ಫೋಟೋ ಗ್ಯಾಲರಿ ಪ್ರದರ್ಶನ ನಡೆಯಲಿದೆ .
ಜನವರಿ 1 ಮತ್ತು 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರು ನಮನ ಸಮರ್ಪಣೆ ಕಾರ್ಯಕ್ರಮ ನಡೆಯಲಿದ್ದು ಜನವರಿ ಒಂದರಂದು ಸಾಯಂಕಾಲ ಸಭೆಯಲ್ಲಿ ಉಪಸ್ಥಿತರಿರುವ ಪ್ರತಿಯೊಬ್ಬರು ದೀಪ ಬೆಳಗಿಸುವ ಮೂಲಕ ಗುರು ನಮನ ಸಲ್ಲಿಸುವುದು. ಜನವರಿ 2 ರಂದು ಬೆಳಿಗ್ಗೆ 6:00ಗೆ ಜಪಯೋಗ 7:00ಗೆ ಪ್ರವಚನ 8-00 ಗಂಟೆಗೆ ವೇದಾಂತ ಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಗದ್ದುಗೆ ಪೂಜೆ ಹಾಗೂ ಸಿದ್ದೇಶ್ವರ ಶ್ರೀಗಳಿಗೆ ಗೀತ ನಮನ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ .ಈ ಎಲ್ಲ ಕಾರ್ಯಕ್ರಮಗಳಲ್ಲಿ ನಾಡಿನ ಹಲವಾರು ಸ್ವಾಮಿಗಳು, ಮಠಾಧೀಶರುಗಳು, ರಾಜ್ಯಪಾಲರು, ಕೇಂದ್ರದ ಮತ್ತು ರಾಜ್ಯದ ಹಲವಾರು ಸಚಿವರುಗಳು, ಗಣ್ಯ ಮಾನ್ಯರು ಆಗಮಿಸಲಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.