This is the title of the web page
This is the title of the web page

Please assign a menu to the primary menu location under menu

State

ಹರೇಕೃಷ್ಣ ಫೌಂಡೇಶನ್ ವತಿಯಿಂದ ಗುರು ಪೂರ್ಣಿಮಾ


ಬೈಲಹೊಂಗಲ: ಪಟ್ಟಣದ ಹರೇಕೃಷ್ಣ ಫೌಂಡೇಶನ್ ವತಿಯಿಂದ ಗುರು ಪೂರ್ಣಿಮಾ ನಿಮಿತ್ತ ಗುರುವಂದನಾ ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲೂಕಾಧ್ಯಕ್ಷ ಎನ್.ಆರ್.ಠಕ್ಕಾಯಿ ಮಾತನಾಡಿ ಗುರುವಿನ ಕರುಣೆಯಿಂದ ಪ್ರತಿಯೊಬ್ಬರ ಬಾಳಲ್ಲಿ ಜ್ಞಾನದ ಬೆಳದಿಂಗಳು ಸದಾ ತುಂಬಿರುತ್ತದೆ ಎಂದರು . ಬದುಕು ರೂಪಿಸುವ ಅತ್ಯಂತ ಗುರುತರ ಜವಾಬ್ದಾರಿ ಗುರುವಿನ ಮೇಲಿದ್ದು ಗುರುಗಳ ಋಣ ಮರೆಯಲಾರದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ದಾರಿ ತೋರಿದ ವಿಶ್ರಾಂತ ಪ್ರೊ.ರಾಜಶೇಖರ ಹಾಲಯ್ಯನವರ, ನಿವೃತ್ತ ಶಿಕ್ಷಕರಾದ ಗುರುಪುತ್ರಪ್ಪ ತುರಮರಿ,ಎಂ.ವೈ. ಆನಿಕಿವಿ, ಎನ್.ಎಚ್. ಅಂಗಡಿ, ಎಸ್.ಬಿ.ಇಂಗಳಗಿ, ಜಿ.ಜಿ. ಸಾಲಿ ಅವರಿಗೆ ಸನಾತನ ಪದ್ಧತಿ ಪ್ರಕಾರ ಪಾದ ಪೂಜೆ ಹಾಗೂ ಪುಷ್ಪಾರ್ಚನೆ ಮಾಡುವುದರ ಮೂಲಕ ವಿಶಿಷ್ಟ ರೀತಿಯಲ್ಲಿ ಗೌರವಿಸಿ ಸನ್ಮಾನಿಸಿ ಗುರುವಂದನೆ ಸಲ್ಲಿಸಲಾಯಿತು.

ಪೂಜಾ ಕಾರ್ಯಕ್ರಮವನ್ನು ನಡೆಸಿಕೊಟ್ಟು ಮಾತನಾಡಿದ ಮುತಾಲಿಕ ಭಟ್ ಅವರು ಶಿಷ್ಯನಿಗೆ ಆತ್ಮಜ್ಞಾನ ನೀಡಿ ಅವನನ್ನು ಉದ್ದಾರ ಮಾಡುವ ಶ್ರೀಗುರು ತತ್ವಕ್ಕೆ ಅಭಿನಂದನೆ ಸಲ್ಲಿಸುವ ಶುಭದಿನವಾಗಿದೆ ಎಂದು ಹೇಳಿದರು.

ಗುರುವಂದನೆಯನ್ನು ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ, ಹಿರಿಯ ನಾಗರಿಕರಾದ ಗುರುಪುತ್ರಪ್ಪ ತುರಮರಿ ಮಾತನಾಡಿ ಇದು ನನ್ನ ಜೀವನದ ಸಾರ್ಥಕ ಕ್ಷಣ ಎಂದು ಸಂತಸ ವ್ಯಕ್ತಪಡಿಸಿದರು. ಪ್ರೊ.ರಾಜಶೇಖರ ಹಾಲಯ್ಯನವರ ಮಾತನಾಡಿ ಗುರು ತ್ಯಾಗ, ನಿಸ್ವಾರ್ಥ ಮನೋಭಾವದಿಂದ ವಿದ್ಯಾರ್ಥಿಗಳ ಬಾಳಿಗೆ ದಾರಿದೀಪವಾಗಬೇಕು ಎಂದರು. ನಿವೃತ್ತ ಶಿಕ್ಷಕರಾದ ಜಿ.ಜಿ. ಸಾಲಿ ಹಾಗೂ ಎಸ್.ಬಿ.ಇಂಗಳಗಿ ಗುರು ಶಿಷ್ಯ ಪರಂಪರೆ, ಗುರುವಿನ ಮಹತ್ವ, ಗುರುವಿನ ಸ್ಥಾನ ಕುರಿತು ಮಾತನಾಡಿದರು. ಪ್ರಥಮ ದರ್ಜೆ ಗುತ್ತಿಗೆದಾರರಾದ ಮಹಾಂತೇಶ ಮೂಗಿ ಮಾತನಾಡಿ ಗುರುಗಳ ಕೃಪೆಯಿಂದ ನಾವೆಲ್ಲ ಜೀವನದಲ್ಲಿ ಒಂದು ಉತ್ತಮ ಸ್ಥಾನ ಪಡೆದಿದ್ದೇವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ರುದ್ರಪ್ಪ ತುರಮರಿ, ಶ್ರೀಶೈಲ ಗೊರವರ, ಚನ್ನಪ್ಪ ಹೊಸೂರು, ಚನ್ನಪ್ಪ ಗೊರವರ, ರಾಜಶೇಖರ ಹೆಬ್ಬಳ್ಳಿ, ಕುಮಾರ ಪಟ್ಟಣಶೆಟ್ಟಿ, ಮಹಾಂತೇಶ ಆಲದಕಟ್ಟಿ, ಶ್ರೀಕಾಂತ ಈಟಿ, ಬಸವರಾಜ ಕುಬಸದ ಹಾಗೂ ಹರೇಕೃಷ್ಣ ಫೌಂಡೇಶನ್ ಸದಸ್ಯರು, ಶಿಷ್ಯವೃಂದ ಮತ್ತು ಸದ್ಭಕ್ತರು ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಸಾಲಿಮಠ ಸ್ವಾಗತಿಸಿದರು. ಬಸವರಾಜ ಬಡಿಗೇರ ನಿರೂಪಿಸಿದರು. ಶ್ರೀಶೈಲ ಯಡಳ್ಳಿ ವಂದಿಸಿದರು.


Gadi Kannadiga

Leave a Reply