This is the title of the web page
This is the title of the web page

Please assign a menu to the primary menu location under menu

State

ಜು. ೩ ರಂದು ಕಾಗಿನೆಲೆಯಲ್ಲಿ ಗುರು ಪೂರ್ಣೀಮಾ ಮಹೋತ್ಸವ : ಫಕ್ಕೀರಪ್ಪ ಹೆಬಸೂರ


ಗದಗ : ಜಿಲ್ಲೆಯ ಕುರುಬ ಸಮಾಜದ ವತಿಯಿಂದ ಇದೇ ಜುಲೈ ೩ ರಂದು ಕಾಗಿನೆಲೆ ಮಹಾ ಸಂಸ್ಥಾನದ ಕನಕ ಗುರು ಪೀಠದಲ್ಲಿ ಗುರು ಪೂರ್ಣಿಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಪಕೀರಪ್ಪ ಹೆಬಸೂರ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಇದೇ ಜುಲೈ ೩ರಂದು ಬೆಳಿಗ್ಗೆ ೧೧ ಗಂಟೆಗೆ ೮ನೇ ಗುರುಪೂರ್ಣಿಮಾ ಮಹೋತ್ಸವವನ್ನು ಗದಗ ಜಿಲ್ಲೆಯ ಸಮಾಜ ಬಾಂಧವರು ಹಮ್ಮಿಕೊಂಡಿದ್ದು ಜಿಲ್ಲೆಯಾದ್ಯಂತ ಬರಗಾಲ ಆವರಿಸಿದ್ದರು ಯಾವುದೇ ಕಾರಣಕ್ಕೂ ಗುರುಪೂರ್ಣಿಮಾ ಮಹೋತ್ಸವಕ್ಕೆ ಅಡ್ಡಿ ಆತಂಕಗಳು ಆಗಬಾರದು ಎಂದು ನಿಶ್ಚಯಿಸಿ, ಗುರುಗಳಿಗೆ ಅಭಿನಂದನೆ ಸಲ್ಲಿಸಬೇಕು ಎನ್ನುವ ನಿಟ್ಟಿನಲ್ಲಿ ಜಿಲ್ಲೆಯ ಏಳು ತಾಲೂಕಿನ ಪದಾಧಿಕಾರಿಗಳು, ಗುರು-ಹಿರಿಯರು, ಸಮಾಜ ಬಾಂಧವರು ಅದ್ದೂರಿಯಿಂದ ಗುರುಗಳಿಗೆ ಸನ್ಮಾನಿಸಿ ಗುರುಪೂರ್ಣಿಮಾವನ್ನು ಆಚರಿಸಲು ನಿರ್ಧರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ಬ್ರಹ್ಮಲೀನ ಜಗದ್ಗುರು ಬಿರೇಂದ್ರ ಕೇಶವ ತಾರಕಾನಂದ ಪುರಿ ಮಹಾಸ್ವಾಮೀಜಿಯವರ ೧೭ನೇ ವರ್ಷದ ಪುಣ್ಯರಾಧನೆ ಗುರುಪೂರ್ಣಿಮಾ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಕಾಗಿನೆಲೆಯ ಪರಮಪೂಜ್ಯ ಜಗದ್ಗುರು ಪೂಜ್ಯಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಸಾನಿಧ್ಯವಹಿಸುವರು.Ä ಕೆಲ್ಲೋಡು ಕನಕ ಗುರುಪೀಠ ಶಾಖಾ ಮಠದ ಪೂಜ್ಯಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು, ಕೆ. ಆರ್. ನಗರ ಕನಕ ಗುರು ಪೀಠ ಶಾಖಾಮಠದ ಪೂಜ್ಯಶ್ರೀ ಶಿವಾನಂದಪುರಿ ಮಹಾಸ್ವಾಮಿಗಳು, ತಿಂಥಣಿ ಕನಕ ಗುರುಪೀಠ ಶಾಖಾ ಮಠದ ಪೂಜ್ಯಶ್ರೀ ಸಿದ್ದರಾಮನಂದಪುರಿ ಮಹಾಸ್ವಾಮಿಗಳು ಹಾಗೂ ಶಾಸಕರುಗಳು, ಸಚಿವರುಗಳು, ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಹೇಳಿದರು.
ಯುವ ಮುಖಂಡ ರವಿ ದಂಡಿನ ಅವರು ಮಾತನಾಡಿ, ಹಿಂದೂ ಸಂಸ್ಕöÈತಿಯಲ್ಲಿ ಗುರುಪೂರ್ಣಿಮಾಗೆ ಮಹತ್ವದ ಸ್ಥಾನವಿದೆ. ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ಜುಲೈ ೩ ರಂದು ಬೆಳಿಗ್ಗೆ ೧೧ ಗಂಟೆಗೆ ಬೀರೇಂದ್ರ ಕೇಶವ ತಾರಕಾನಂದಪುರಿ ಸ್ವಾಮಿಗಳ ೧೭ನೇ ಪುಣ್ಯರಾಧನೆ ಜರುಗುವುದು. ಈಗಾಗಲೇ ಹಾವೇರಿ, ದಾವಣಗೆರೆ, ಬೆಳಗಾವಿ ಸೇರಿದಂತೆ ಏಳು ಜಿಲ್ಲೆಯ ಸಮಾಜ ಬಾಂಧವರು ಕಾಗಿನೆಲೆಗೆ ಹೋಗಿ ಗುರುಪೂರ್ಣಿಮೆಯನ್ನು ಆಯೋಜಿಸಿ ಯಶಸ್ವಿಯಾಗಿದ್ದು, ಅದೇರೀತಿ ೮ನೇ ಗುರುಪೂರ್ಣಿಮೆಯನ್ನು ಗದಗ ಜಿಲ್ಲೆಯ ಸಮಾಜ ಬಾಂಧವರು ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಈ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಪ್ರದೇಶ ಕುರುಬ ಸಂಘದ ಪದಾಧಿಕಾರಿಗಳಾದ ಶೇಖಪ್ಪ ಕಾಳಿ, ನಾಗಪ್ಪ ಗುಗ್ಗರಿ, ಬಸವರಾಜ ಜಗ್ಗಲ್, ಬನೇಶ ಕೋಟಿ, ಹೊನ್ನೇಶ ರೊಟ್ಟಿ, ನೀಲಪ್ಪ ಗೌಡಪ್ಪನವರ, ಮಂಜು, ಚೆನ್ನಮ್ಮ ಹುಳಕಣ್ಣವರ, ಶರಣಪ್ಪ ಗಡಾದ, ಅರ್ಜುನಪ್ಪ ಈಟಿ, ಜಡದೆಲಿ, ಬಸವರಾಜ ಕುರಗೋಡ, ಶಂಕ್ರಪ್ಪ ಸುಗ್ಗನಹಳ್ಳಿ, ಶರಣಪ್ಪ ಹತ್ತಿಕಟಿಗೆ, ಅಶೋಕ ಕೊಪ್ಪದ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


Leave a Reply