This is the title of the web page
This is the title of the web page

Please assign a menu to the primary menu location under menu

Local News

ಕಲ್ಲೋಳಿಯಲ್ಲಿ ೧೯೯೮ರ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ


ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಕಲ್ಲೋಳಿಯ ೧೯೯೮ರ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾಥಿಗಳಿಂದ ಗುರುವಂದನಾ ಕಾರ್ಯಕ್ರಮ ಜರುಗಿತು.
ಸಮಾರಂಭದಲ್ಲಿ ಬಾಳಪ್ಪ ಬೆಳಕೂಡ ಮಾತನಾಡಿ, ಹಿಂದಿನ ಕಾಲದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಂಭಂಧವು ಅನ್ಯೋನ್ಯವಾಗಿತ್ತು ಆದರೆ ಇಂದು ದಮತಕತೆಯಾಗಿದೆ ಎಂದರು. ನಿವೃತ್ತ ಶಿಕ್ಷಕ ಪ್ರಕಸ ಗರಗಟ್ಟಿ ಮಾತನಾಡಿ, ಸನ್ ೨೦೦೦ ದಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಲ್ಲಿ ನೈತಿಕ ಶಿಕ್ಷಣವು ಇಲ್ಲವಾಗಿದೆಇದ್ದರಿಂದ ಸಮಾಜದಲ್ಲಿ ಯುವಕರು ತಪ್ಪು ದಾರಿ ಹಿಡಿಯುತ್ತಿರುವುದು ವಿಷಾದಕರು ಸಂಗತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಸುರೇಶ ಕಬ್ಬೂರ, ಮುಖ್ಯ ಅತಿಥಿ ಸುವರ್ಣತಾಯಿ ಹೊಸಮಠ ಮಾತನಾಡಿದರು. ಈ ಸಂಧರ್ಭದಲ್ಲಿ ವಿದ್ಯೆ ಕಲಿಸಿದ ಗುರುಗಳಾದ ಬಿ.ಎಸ್.ಕೋಟಗಿ, ಸಿ.ಎಮ್.ಕಟಗಿ, ಎಂ.ಬಿ.ಐಹೊಳೆ, ಪ್ರಕಾಶ ಗರಗಟ್ಟಿ, ಬಿ.ಎಸ್.ಗಿರಡ್ಡಿ, ಬಿ.ಎಸ್.ಪಾಟೀಲ ಅವರನ್ನು ವಿದ್ಯಾರ್ಥಿಗಳು ಫಲಪುಷ್ಪದೊಂದಿಗೆ ಸತ್ಕರಿಸಿ ಗೌವರವಿಸಿದರು.
ಕೆಂಪ್ಪಣ್ಣ ಮಕ್ಕಳಗೇರಿ, ವಿಜಯ ಮೇಳವಂಕಿ, ಜ್ಯೋತಿ ಶೆಟ್ಟರ್, ಚಿನ್ನವ ಮುನ್ನೊಳಿಮಠ, ಜ್ಯೋತಿ ಕಪ್ಪಲಗುದ್ದಿ ಉಸ್ತುವಾರಿ ವಹಿಸಿದ್ದರು. ಸಮಾರಂಭದಲ್ಲಿ ್ಲ ೧೯೯೮ರ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾಥಿಗಳು ಮತ್ತಿತರು ಇದ್ದರು. ಬಸವರಾಜ ಹೆಬ್ಬಾಳ ಅವರು ಪರಿಚಯಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಮಂಜುಳಾ ಹಿರೇಮಠ ಸ್ವಾಗತಿಸಿದರು, ರೇಖಾ ಪಾಟೀ¯ ವಂದಿಸಿದರು.


Gadi Kannadiga

Leave a Reply