ಗುರುಸಿದ್ದ ಸ್ವಾಮೀಜಿ ಅಮೃತ ಮಹೋತ್ಸವ ಆಚರಣೆ

Murugesh Shivapuji
ಗುರುಸಿದ್ದ ಸ್ವಾಮೀಜಿ  ಅಮೃತ ಮಹೋತ್ಸವ ಆಚರಣೆ
WhatsApp Group Join Now

ಗುರುಸಿದ್ದ ಸ್ವಾಮೀಜಿ ಅಮೃತ ಮಹೋತ್ಸವ ಆಚರಣೆ

ಬೆಳಗಾವಿ: ಶಿವಬಸವ ನಗರ ಕಾರಂಜಿ ಮಠದ ರಜತ ಮಹೋತ್ಸವ ಹಾಗೂ ಪೀಠಾಧಿಪತಿ ಶ್ರೀ ಗುರುಸಿದ್ದ ಸ್ವಾಮೀಜಿ ಅವರು ಸಾರ್ಥಕ 75 ವಸಂತಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ವೀರಶೈವ- ಲಿಂಗಾಯತ ಸಮಾಜದಿಂದ ಅಮೃತ ಮಹೋತ್ಸವ ಸಮಾರಂಭವನ್ನು ನ. 11 ರಂದು ಆಯೋಜಿಸಲು ತೀರ್ಮಾನಿಸಲಾಗಿದೆ.

ಇಲ್ಲಿನ ಕನ್ನಡ ಭವನದಲ್ಲಿ ಬುಧವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡ ವಿವಿಧ ಮಠಾಧೀಶರು ಹಾಗೂ ವೀರಶೈವ- ಲಿಂಗಾಯತ ಸಮಾಜದ ಮುಖಂಡರು, ಸಮಾರಂಭವನ್ನು ಅರ್ಥಪೂರ್ಣ ಮತ್ತು ಅಚ್ಚುಕಟ್ಟಾಗಿ ಆಯೋಜಿಸುವುದಕ್ಕಾಗಿ ವಿವಿಧ ಸಮಿತಿಗಳಿಗೆ ಜವಾಬ್ದಾರಿ ಹಂಚಿ, ಸಂಪೂರ್ಣ ರೂಪುರೇಷೆಗಳ ಬಗ್ಗೆ ಚರ್ಚಿಸಿದರು. ಬಳಿಕ ಕೆಎಲ್‌ಇ ಸಂಸ್ಥೆಯ ಜೀರಗೆ ಸಭಾಭವನದಲ್ಲಿ ಸಮಾರಂಭ ಆಯೋಜಿಸಲು ಒಮ್ಮತ ಸೂಚಿಸಿ, ನಿರ್ಧಾರ ಮಾಡಲಾಯಿತು.

ಬೆಳಗಾವಿಯ ಕನ್ನಡಭವನದಲ್ಲಿ ಕಾರಂಜಿಮಠದ ಶ್ರೀಗಳ ಅಮೃತ ಮಹೋತ್ಸವ ಆಚರಣೆ ಪೂರ್ವಭಾವಿ ಸಭೆ ಜರುಗಿತು.

ಸ್ಥಳೀಯ ಕಾರಂಜಿಮಠ, ನಾಗನೂರು ಮಠ ಸೇರಿದಂತೆ ಜಿಲ್ಲೆಯ ಹಾಗೂ ರಾಜ್ಯದಲ್ಲಿನ ಎಲ್ಲ ಮಠಮಾನ್ಯಗಳ ಮಹತ್ವ ಮಠಾಧೀಶರು ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಮಠಾಧೀಶರ ಕುರಿತಾದ ಗ್ರಂಥಗಳ ರಾಜ್ಯಮಟ್ಟದ ಪುಸ್ತಕ ಉತ್ಸವ, ಆರೋಗ್ಯ ಶಿಬಿರ, ರಕ್ತದಾನ ಶಿಬಿರ ನಡೆಸುವುದರ ಕುರಿತು ಚರ್ಚೆ ನಡೆಸಿದರು.

ಅಲ್ಲದೆ, ವೀರಶೈವ- ಲಿಂಗಾಯತ ಸಮಾಜದ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆದು, ಎಲ್ಲ ಮಠಾಧೀಶರನ್ನು ಆಹ್ವಾನಿಸಿ ಕೆಎಲ್‌ ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ ಅಧ್ಯಕ್ಷತೆಯಲ್ಲಿ ಸಮಾರಂಭ ಆಯೋಜಿಸುವಂತೆ ನಿರ್ಧರಿಸಲಾಯಿತು.

ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ‘ಸಾಮಾನ್ಯರ ಜತೆ ಸಾಮಾನ್ಯರಾಗಿ ಬೆರೆಯುತ್ತಾ, ಕಷ್ಟದಲ್ಲಿದ್ದವರಿಗೆ ಸಹಾಯ, ಮಾರ್ಗದರ್ಶನ ಮಾಡುತ್ತಿರುವ ಶ್ರೀ ಗುರುಸಿದ್ದ ಸ್ವಾಮೀಜಿ ಅವರು ನಮಗೆಲ್ಲರಿಗೂ ಮಾದರಿ. ಅವರ ಸಮಾಜ ಸೇವೆ ಸ್ಮರಿಸುವ ನಿಟ್ಟಿನಲ್ಲಿ ಅಮೃತ ಮಹೋತ್ಸವವನ್ನು ಇಡೀ ನಾಡು ಕಣ್ತೆರೆದು ನೋಡುವಂತೆ ಆಚರಿಸಬೇಕು ಎಂದು ಆಶಿಸಿದರು. ಸಭೆಯಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ, ಕಾರಂಜಿಮಠದ ಉತ್ತರಾಧಿಕಾರಿ ಶಿವಯೋಗಿದೇವರು.

ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಮಹಾಂತೇಶ ಕವಟಗಿಮಠ ಮಾತನಾಡಿ, ”ಶ್ರೀ ಗುರುಸಿದ್ದ ಸ್ವಾಮೀಜಿ ಅವರು ಕಾರಂಜಿ ಮಠದ 4ನೇ ಪೀಠಾಧಿಪತಿಗಳಾಗಿ ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಸಾಕಷ್ಟು ರಚನಾತ್ಮಕ ಕಾರ್ಯಗಳನ್ನು ಮಾಡಿ ಸಮಾಜಕ್ಕೆ ಮಹತ್ವದ ಸೇವೆ ಸಲ್ಲಿಸಿದ್ದಾರೆ. ಸ್ವಂತ ತಂದೆ-ತಾಯಿ ಸೇರಿದಂತೆ ತಮ್ಮ ಕುಟುಂಬವನ್ನೇ ತೊರೆದು, ಸಮಾಜದಲ್ಲಿನ ಇತರರ ತಾಯಿ- ತಂದೆಯನ್ನೇ ಸ್ವಂತ ಪಾಲಕರೆಂದು ಪರಿಗಣಿಸಿ ಇಡೀ ಜೀವನವನ್ನೇ ಸಮಾಜದ ಉದ್ದಾರಕ್ಕಾಗಿ ಮುಡಿಪಾಗಿಟ್ಟಿರುವ ಸ್ವಾಮೀಜಿಗಳನ್ನು ಅವರ ಸಮಾಜಮುಖಿ ಕಾರ್ಯವನ್ನು ಗೌರವಿಸುವುದು ಜವಾಬ್ದಾರಿ ಎಂದರು.

ಈ ಸಭೆಯಲ್ಲಿ ನ್ಯಾಯವಾದಿ ಎಂ.ಬಿ.ಝಿರಲಿ, ಶಂಕರಗೌಡ ಪಾಟೀಲ, ಅನೀಲ ಬೆನಕೆ, ಮುರುಘಂದ್ರಗೌಡ ಪಾಟೀಲ, ರತ್ನಪ್ರಭಾ ಬೆಲ್ಲದ ಹಾಗೂ ಇತರರಿದ್ದರು.

WhatsApp Group Join Now
Telegram Group Join Now
Share This Article
error: Content is protected !!