ಸವದತ್ತಿ- ಸ್ನೇಹ-ಕೂಟದಿಂದ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸ.ಹಿ.ಪ್ರಾ ಕನ್ನಡ ಶಾಲೆ ನಂ-೨ ಸವದತ್ತಿಯ ೧೯೯೦-೯೧ ರಿಂದ ೧೯೯೬-೯೭ ನೇ ಸಾಲಿನಲ್ಲಿ ಸವಳಭಾವಿ ಓಣಿಯ ಕಟ್ಟಡದಲ್ಲಿ ಕಲಿತ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಒಟ್ಟಿಗೆ ಸೇರಿಕೊಂಡು ಗುರುವಂದನೆ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿ ಪ್ರತಿನಿಧಿ ಕಿರಣ ರಜಪೂತ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿನಾಂಕ ೧೦.೦೯.೨೦೨೩ ರಂದು ಭಾನುವಾರ ಸವದತ್ತಿ ಪಟ್ಟಣದ ಸವಳಭಾವಿ ಓಣಿಯ ಸಮೂದಾಯ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ನಿವೃತ್ತ ಶಿಕ್ಷಕರಾದ ಜಿ.ಸಿ.ಕುರಡೂರ ಗುರುವಂದನೆಯ ಮುಖ್ಯ ಸನ್ಮಾನಿತರಾಗಿ ಆಗಮಿಸಲಿದ್ದು, ಇವರ ಜೊತೆಗೆ ನಿವೃತ್ತ ಶಿಕ್ಷಕರಾದ ಎಸ್.ಎನ್ ಬೆಳವಡಿ, ಜಿ.ಎಮ್ ಪುರಾಣಿಕಮಠ, ಹಾಗೂ ಜಿ.ಎಸ್ ಸುಣಗಾರ ಇವರನ್ನೂ ಸಹ ಸನ್ಮಾನಿಸಲಾಗುವುದು.
ಪುರಸಭೆಯ ಮಾಜಿ ಅಧ್ಯಕ್ಷರು ಹಾಗೂ ಪ್ರಸ್ತುತ ಸದಸ್ಯರಾದ ಶಿವಾನಂದ ಹೂಗಾರ ಇವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು, ಈರಪ್ಪ ಮುಳ್ಳೂರ ಅದ್ಯಕ್ಷತೆ ವಹಿಸಲಿದ್ದಾರೆ. ಪುರಸಭೆಯ ಸದಸ್ಯರಾದ ಧರೆಪ್ಪ ಮಡ್ಲಿ, ಹಿರಿಯರಾದ ಸೋಮಪ್ಪ ಸೋಗಲದ ಮತ್ತು ಮುಖ್ಯ ಶಿಕ್ಷಕಿಯಾದ ಆರ್.ಎಚ್ ನಾಗನೂರ ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.