This is the title of the web page
This is the title of the web page

Please assign a menu to the primary menu location under menu

State

ಸ್ನೇಹ ಕೂಟದ ವಿದ್ಯಾರ್ಥಿಗಳಿಂದ ಸೆ.೧೦ರಂದು ಗುರುವಂದನಾ ಕಾರ್ಯಕ್ರಮ :


ಸವದತ್ತಿ : ಇಲ್ಲಿನ ಸವಳಹಭಾವಿ ಓಣಿಯ ಸ.ಹಿ.ಪ್ರಾ ಕನ್ನಡ ಶಾಲೆ ನಂ-೨ ರಲ್ಲಿ೧೯೯೦-೯೧ ರಿಂದ ೧೯೯೬-೯೭ ನೇ ಸಾಲಿನಲ್ಲಿ ಕಲಿತ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಸ್ನೇಹ-ಕೂಟದಿಂದ ಗುರುವಂದನೆ ಹಾಗೂ ಗೆಳೆಯರ ಮಿಲನ,ವಿದ್ಯೆ ಕಲಿಸಿದ ಗುರುಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿದ್ಯಾರ್ಥಿ ಪ್ರತಿ£ಧಿ ಕಿರಣ ರಜಪೂತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ.೧೦ರಂದು ರವಿವಾರ ಪಟ್ಟಣದ ಸವಳಭಾವಿ ಓಣಿಯ ಸಮೂದಾಯ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, £ವೃತ್ತ ಶಿಕ್ಷಕರಾದ ಜಿ.ಸಿ.ಕುರಡೂರ ಗುರುವಂದನೆಯ ಮುಖ್ಯ ಸನ್ಮಾ£ತರಾಗಿ ಆಗಮಿಸಲಿದ್ದು, ಇವರ ಜೊತೆಗೆ £ವೃತ್ತ ಶಿಕ್ಷಕರಾದ ಎಸ್.ಎನ್ ಬೆಳವಡಿ, ಜಿ.ಎಮ್ ಪುರಾಣಿಕಮಠ, ಹಾಗೂ ಜಿ.ಎಸ್ ಸುಣಗಾರ ಇವರನ್ನೂ ಸಹ ಸನ್ಮಾ£ಸಲಾಗುವುದು.
ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಪ್ರಸ್ತುತ ಸದಸ್ಯರಾದ ಶಿವಾನಂದ ಹೂಗಾರ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು, ಈರಪ್ಪ ಮುಳ್ಳೂರ ಅದ್ಯಕ್ಷತೆ ವಹಿಸಲಿದ್ದಾರೆ. ಪುರಸಭೆಯ ಸದಸ್ಯರಾದ ಧರೆಪ್ಪ ಮಡ್ಲಿ, ಹಿರಿಯರಾದ ಸೋಮಪ್ಪ ಸೋಗಲದ ಮತ್ತು ಮುಖ್ಯ ಶಿಕ್ಷಕಿಯಾದ ಆರ್.ಎಚ್ ನಾಗನೂರ ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply