ಬೈಲಹೊಂಗಲ: 30 ವರ್ಷಗಳ ಹಿಂದೆ ಕಲಿತ ಶಾಲೆಯಲ್ಲೆ ವಿದ್ಯಾರ್ಥಿಗಳು ಹಾಗೂ ಕಲಿಸಿದ ಗುರುಗಳ ಸಮಾಗಮಕ್ಕೆ ಒಕ್ಕುಂದ ಗ್ರಾಮ ಸಾಕ್ಷಿಯಾಯಿತು. ತಮಗೆ ಅಕ್ಷರ ಜ್ಞಾನ ನೀಡಿ, ಜೀವನ ರೂಪಿಸಿದ ಶಿಕ್ಷಕರನ್ನು ಪ್ರೀತಿಯಿಂದ ಗೌರವಿಸುವ ಮೂಲಕ ಗುರುವಂದನೆ ಕಾರ್ಯಕ್ರಮ ಯಶಸ್ವಿಗೊಂಡಿತು.
1995-96ನೇ ಸಾಲಿನ 7ನೇ ತರಗತಿ ಮತ್ತು 1998-1999ನೇ ಬ್ಯಾಚಿನ 10ನೇ ತರಗತಿ ವಿದ್ಯಾರ್ಥಿಗಳಿಂದ ಗುರುವಂದನೆ ಮತ್ತು ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಗ್ರಾಮದ ಸಂಗಟಿಕೊಪ್ಪ ಬಸವೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಸಂಭ್ರಮದಿಂದ ಜರುಗಿತು. ಕಾರ್ಯಕ್ರಮದ ವೇದಿಕೆಗೆ ಪುಷ್ಪವೃಷ್ಟಿಗೈಯ್ಯುತ್ತಾ ಹಳೆ ವಿದ್ಯಾರ್ಥಿಗಳು ಶಿಕ್ಷಕರನ್ನು ಬರಮಾಡಿಕೊಂಡರು.
ಈ ವೇಳೆ ನಿವೃತ್ತ ಶಿಕ್ಷಕ ಎಂ.ಸಿ.ಹಪ್ಪಳಿ ಕಾರ್ಯಕ್ರಮ ಉದ್ಘಾಟಿಸಿ ಸತ್ಕಾರ ಸ್ವೀಕರಿಸಿದರು. ಅಂಗನವಾಡಿ ಶಿಕ್ಷಕಿಯಾಗಿ ನಿವೃತ್ತಿಯಾದ ಶ್ರೀಮತಿ ಎ.ಎಲ್.ಹರಗೋಲಿ, ನಿವೃತ್ತ ಪ್ರಧಾನ ಗುರುಗಳಾದ ಪಿ.ಎಸ್.ಚಿಕ್ಕೊಪ್ಪ, ವಿ.ಎಂ.ಹಣಬರಟ್ಟಿ, ಎನ್.ಎಫ್.ಹೊಳಿ, ಬಿ.ಆರ್.ನಾಗನೂರ, ಎಫ್.ಸಿ.ಪತ್ತಾರ, ಯು.ವ್ಹಿ.ಹಿರೇಮಠ, ಶ್ರೀಮತಿ ವಿ.ಸಿ.ಮುರಗೋಡ, ಮುಖ್ಯೋಪಾಧ್ಯೆಯರಾದ ಎಂ.ಆರ್.ಹುತಮಲ್ಲನವರ, ಆರ್.ಸಿ.ಚಿನ್ನಯ್ಯನವರ, ಬಸನಗೌಡ ಪೊಲೀಸ್ ಪಾಟೀಲ, ಕೆ.ಬಿ.ಕೋಟಗಿ, ಎ.ಜಿ.ಚಿತ್ರಗಾರ, ಎಂ.ಪಿ.ಚಿಪ್ಪಲಕಟ್ಟಿ, ಶ್ರೀಮತಿ ಆರ್.ಬಿ.ಮಾಲಿಮನಿ, ಎ.ಎಸ್.ನಿಲಗುಂದ, ಎಸ್.ಎಮ್.ಬೆನಕಟ್ಟಿ, ಎಸ್.ಸಿ.ಅರಳಿಕಟ್ಟಿ ಸೇರಿ 50ಕ್ಕೂ ಅಧಿಕ ಶಿಕ್ಷಕರನ್ನು ಸತ್ಕರಿಸಲಾಯಿತು. ಇದೇ ವೇಳೆ ಗ್ರಾಮದ ಶಾಲೆಯಲ್ಲಿ ಕಲಿತು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವರನ್ನು ಸನ್ಮಾನಿಸಲಾಯಿತು.
ನಿವೃತ್ತ ಪ್ರಧಾನ ಗುರುಗಳಾದ
ಪಿ.ಎಸ್.ಚಿಕ್ಕೊಪ್ಪ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಒಕ್ಕುಂದ ಗ್ರಾಮವು ಇತಿಹಾಸ, ಪರಂಪರೆ, ಸಂಸ್ಕೃತಿಗೆ ಹೆಸರುವಾಸಿ. ಇಲ್ಲಿನ ವಿದ್ಯಾರ್ಥಿಗಳು ನಯ, ವಿನಯ, ಶಿಸ್ತು, ಸಂಸ್ಕಾರ ರೂಢಿಸಿಕೊಂಡಿದ್ದರು. ಇದು ನಮ್ಮ ಜೀವನದ ಮೊದಲ ಗುರುವಂದನೆ. ವಿದ್ಯಾರ್ಥಿಗಳ ಪ್ರೀತಿ, ವಾತ್ಸಲ್ಯ ಕಂಡು ಮಾತುಗಳೇ ಬರುತ್ತಿಲ್ಲ ಎಂದು ಭಾವುಕರಾದರು.
ಮೂಡಲಗಿ ತಾಲ್ಲೂಕಿನ ತಳಕಟ್ನಾಳ ಮುಖ್ಯೋಪಾಧ್ಯಾಯರಾಗಿರುವ ಎಂ.ಆರ್.ಹುತಮಲ್ಲನವರ ಮಾತನಾಡಿ, ನಾನು ಕೂಡ ಮೊದಲ ಸೇವೆಗೆ ನೇಮಕಾತಿ ಪಡೆದಿದ್ದೆ ಒಕ್ಕುಂದ ಪ್ರೌಢಶಾಲೆಗೆ. ಇಲ್ಲಿನ ಬಹಳಷ್ಟು ವಿದ್ಯಾರ್ಥಿಗಳಿಗೆ ನಾನು ದಂಡಿಸಿದರೂ, ಯಾವೊಬ್ಬ ವಿದ್ಯಾರ್ಥಿಯೂ ಅದನ್ನು ಸಿಟ್ಟಾಗಿ ತಿಳಿದುಕೊಳ್ಳಲಿಲ್ಲ. ನೀವು ದಂಡಿಸಿದ್ದಕ್ಕೆ ನಾವು ಈಗ ನಮ್ಮ ಜೀವನ ರೂಪಿಸಿಕೊಂಡಿದ್ದೇವೆ ಎಂದು ವಿದ್ಯಾರ್ಥಿಗಳು ಹೆಮ್ಮೆ ಪಡುತ್ತಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮ ಯಶಸ್ಸಿಗೆ ಹಳೆ ವಿದ್ಯಾರ್ಥಿಗಳಾದ ಸುರೇಶ ವಕ್ಕುಂದ, ಉಳವಪ್ಪ ಹೊಂಗಲ, ರೂಪಾ ಕಮ್ಮಾರ, ಮಲ್ಲವ್ವ ತಡಸಲ, ಈರವ್ವ ಶರಣ್ಣವರ, ಶಾಂತವ್ವ ಬೆಣ್ಣಿ, ಮಲ್ಲಪ್ಪ ಭದ್ರಶೆಟ್ಟಿ, ಚನ್ನಮಲ್ಲಯ್ಯ ಪೂಜೇರ, ಮಹಾಂತೇಶ ಗಾಣಿಗೇರ, ರವಿ ಪತ್ತಾರ, ಮಲ್ಲನಗೌಡ ಹುಲೇಪ್ಪನವರ, ರವಿ ಹುಣಸಿಗಿಡದ, ಶಿವಪ್ಪ ಪಟಾತ, ಮಲ್ಲಪ್ಪ ಕಾಂಬಳೆ, ಸಂತೋಷ ಶಿಂಧೆ, ಮಂಜುನಾಥ ಶಿಂಧೆ, ಮಹಾಂತೇಶ ಕೋಲಕಾರ, ಸೋಮನಗೌಡ ಗಿಡಬಸಪ್ಪನವರ, ಮಂಜುನಾಥ ಇಳಿಗೇರ, ಕಾಶಪ್ಪ ದರಖಾಶಿ, ದಿಲಾವರ್ ಬಡೇಖಾನ್ ಸೇರಿದಂತೆ ಮತ್ತಿತರರು ಶ್ರಮಿಸಿದರು.
ಪ್ರೊ.ಎನ್.ಡಿ.ಚಿನ್ನಪ್ಪಗೌಡರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ.ಪಿ.ಎಸ್.ಅಂಗಡಿ ನಿರೂಪಿಸಿದರು. ಪ್ರೊ.ಡಿ.ಎಂ.ಏಣಗಿ ಸ್ವಾಗತಿಸಿದರು. ಎನ್.ಎನ್.ಹಾದಿಮನಿ ವಂದಿಸಿದರು.