ಗದಗ ಆ.೩೧: ಹಳ್ಳಿಗುಡಿ ಹಾಲ್ಟ್ ರೈಲು ನಿಲ್ದಾಣ ಉದ್ಘಾಟನೆ ಹಾಗೂ ರೈಲು ಸಂಖ್ಯೆ ೦೭೩೮೧/೦೭೩೮೨ ಎಸ್.ಎಸ್.ಎಸ್. ಹುಬ್ಬಳ್ಳಿ-ಕಾರಟಗಿ-ಎಸ್.ಎಸ್.ಎಸ್.ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಹಳ್ಳಿಗುಡಿ ಹಾಲ್ಟ್ ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಹಸಿರು ನಿಶಾನೆ ತೋರಿಸುವ ಕಾರ್ಯಕ್ರಮವು ಶುಕ್ರವಾರ ಸೆ.೧ ರಂದು ಹಳ್ಳಿಗುಡಿ ಹಾಲ್ಟ್ ರೈಲು ನಿಲ್ದಾಣದಲ್ಲಿ ಮಧ್ಯಾಹ್ನ ೩.೪೫ ಗಂಟೆಗೆ ಜರುಗಲಿದೆ.
ಸಂಸದರಾದ ಶಿವಕುಮಾರ ಉದಾಸಿ ಹಳ್ಳಿಗುಡಿ ಹಾಲ್ಟ್ ರೈಲು ನಿಲ್ದಾಣ ಉದ್ಘಾಟನೆ ಹಾಗೂ ರೈಲು ಸಂಖ್ಯೆ ೦೭೩೮೧/೦೭೩೮೨ ಎಸ್.ಎಸ್.ಎಸ್. ಹುಬ್ಬಳ್ಳಿ-ಕಾರಟಗಿ-ಎಸ್.ಎಸ್.ಎಸ್.ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಹಳ್ಳಿಗುಡಿ ಹಾಲ್ಟ್ ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಹಸಿರು ನಿಶಾನೆ ತೋರಿಸಿರುವ
ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ, ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸುವರು.
ಸರ್ಕಾರದ ಮುಖ್ಯ ಸಚೇತಕರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹ್ಮದ, ಶಾಸಕರಾದ ಜಿ.ಎಸ್.ಪಾಟೀಲ, ವಿಧಾನ ಪರಿಷತ್ ಸದಸ್ಯರುಗಳಾದ ಎಸ್.ವಿ.ಸಂಕನೂರ, ಪ್ರದೀಪ ಶೆಟ್ಟರ, ಹಳ್ಳಿಕೇರಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಮರಿಯವ್ವ ನಿಂ. ಹಿರೇಮನಿ ಅವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸುವರು.
Gadi Kannadiga > State > ಹಳ್ಳಿಗುಡಿ ಹಾಲ್ಟ್ ರೈಲು ನಿಲ್ದಾಣ ಉದ್ಘಾಟನೆ ಸಮಾರಂಭ
ಹಳ್ಳಿಗುಡಿ ಹಾಲ್ಟ್ ರೈಲು ನಿಲ್ದಾಣ ಉದ್ಘಾಟನೆ ಸಮಾರಂಭ
Suresh31/08/2023
posted on
More important news
ಬೆಳಗಾವಿಯ ಹುಡುಗರ ಸಾಹಸ ” ಪರ್ಯಾಯ”
18/09/2023