ಬೆಳಗಾವಿಯಲ್ಲಿ ವಿವಿದೆಡೆ ಹನುಮಾನ್ ಜಯಂತಿಯನ್ನು ಶೃದ್ಧಾ ಹಾಗೂ ಭಕ್ತಿ ಪೂರ್ವಕವಾಗಿ ಆಚರಣೆ ಆಡಲಾಯಿತು
ನಗರದ ಕ್ಯಾಂಪ್ ಪೊಲೀಸ್ ಠಾಣೆಯ ಕ್ವಾಟರ್ಸ್ ನ ಎಲ್ಲಾ ಭಕ್ತರು ಸೇರಿ ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಹನುಮ ಜಯಂತಿಯನ್ನು ಆಚರಿಸಿದರು.
ಬೆಳಿಗ್ಗೆಯಿಂದ ಪೂಜೆ, ಅಭಿಷೇಕ, ಹೋಮ ಹವನ ಇತ್ಯಾದಿ ಕೈಂಕರ್ಯಗಳು ನಡೆಯುತ್ತಿದ್ದು, ಸಾವಿರಾರು ಭಕ್ತರು ಬಂದು ಪೂಜಿಸಿ, ಹನುಮಣ ಕೃಪೆಗೆ ಪಾತ್ರರಾದರು. ದರ್ಶನಕ್ಕೆಂದು ಬರುವ ಭಕ್ತರಿಗೆ ಸಿಹಿ ಪ್ರಸಾದ್, ತಂಪಾದ ಅಂಬಲಿಯನ್ನು ಬೆಳಿಗ್ಗೆಯಿಂದ ವಿತರಿಸಿ, ಮದ್ಯಾಹ್ನ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು,
ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಸುಮಾರು 4 ರಿಂದ 5 ಸಾವಿರ ಭಕ್ತರು ಮಹಾಪ್ರಸಾದ್ ಪಡೆದರು.. ಇಲ್ಲಿ ಯಾವುದೇ ಕಮಿಟಿ ಮತ್ತು ಪದಾಧಿಕಾರಿಗಳು ಇರದೆ. ಎಲ್ಲಾ ಕ್ಯಾಂಪ್ ಪೊಲೀಸ್ ಕ್ವಾಟ್ರಸ್ನ ಸಿಬ್ಬಂದಿಗಳು ಸೇರಿ ಆಯೋಜನೆ ಮಾಡಿರುತ್ತಾರೆ. ಸುಮಾರು 30 — 40 ವರ್ಷಗಳಿಂದ ಈ ಹನುಮ ಜಯಂತಿ ಹಾಗೂ ಮಹಾಪ್ರಸಾದ ಸೇವೆ ನಡೆದುಕೊಂಡು ಬಂದಿದೆ ಎಂದು ಅಲ್ಲಿನ ಭಕ್ತರ ಅಭಿಪ್ರಾಯವಾಗಿತ್ತು.