This is the title of the web page
This is the title of the web page

Please assign a menu to the primary menu location under menu

State

ಹಾಲುಮತ ಸಮಾಜದವರು ಹಾಲಿನಂತ ಮನಸ್ಸುಳ್ಳವರು :ಹನುಮಂತಪ್ಪ ಅಂಡಗಿ


ಕೊಪ್ಪಳ : ಕನಕದಾಸರು ಹರಿದಾಸರಲ್ಲಿಯೇ, ದಾಸ ಪರಂಪರೆಯಲ್ಲಿಯೇ ಶ್ರೇಷ್ಠರು. ಕನಕದಾಸರು ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ. ಅವರು ಸಮಾನತೆಯ ಸಮಾಜ £ರ್ಮಾಣಕ್ಕಾಗಿ ಶ್ರಮಿಸಿದ ಮಹಾತ್ಮರು. ಹಾಲುಮತ ಸಮಾಜದವರು ಮಕ್ಕಳಿಗೆ ಶಿಕ್ಷಣ £Ãಡುವುದರ ಮೂಲಕ ತಮ್ಮ ಮಕ್ಕಳನ್ನು ಉನ್ನತ ಹುದ್ದೆಗೆ ಕಳುಹಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಕನಕದಾಸರ ಕೀರ್ತನೆಗಳನ್ನು, ಅವರ ಸಂದೇಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಹಾಲುಮತ ಸಮುದಾಯ ಬಹಳ ಪವಿತ್ರವಾದದ್ದು. ಹಾಲುಮತ ಸಮಾಜದವರು ಹಾಲಿನಂತ ಮನಸ್ಸುಳ್ಳವರು. ಹೀಗಾಗಿಯೇ ಇಂದಿನ ದಿನಮಾನಗಳಲ್ಲಿಯೂ ಸಹ ಯಾವುದೇ ಅಂಗಡಿಯ ಪ್ರಾರಂಭದಲ್ಲಿ ಹಾಲುಮತ ಸಮುದಾಯದವರಿಂದ ಬೋಣಿಗೆ ಮಾಡಿಸುತ್ತಾರೆ. ಕುರುಬರು ಕಂಬಳಿ ಬೀಸಿದರೆ ಮಳೆ ಬರುತ್ತಿತ್ತು. ಹಾಲುಮತ ಸಮುದಾಯದಲ್ಲಿ ಬಹಳಷ್ಟು ಮಹಾತ್ಮರು ಆಗಿಹೋಗಿದ್ದಾರೆ. ಸಜ್ಜಲಗುಡ್ಡದ ಶರಣಮ್ಮ, ಇಟಗಿ ಭಿಮಾಂಬಿಕೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಅಹಲ್ಯಾಬಾಯಿ ಹೋಳ್ಕರ, ಮಹಾತ್ಮ ಬೊಮ್ಮಗೊಂಡೇಶ್ವರ, ಸಹಕಾರಿ ಪಿತಾಮಹ ಸಿದ್ದನಗೌಡ ಪಾಟೀಲ ಮುಂತಾದ ಮಹ£Ãಯರ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಹೇಳಿದರು.
ಅವರು ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಕನಕಪುರದಲ್ಲಿ ಹಮ್ಮಿಕೊಂಡ ಕನಕದಾಸರ ಜಯಂತಿಯಲ್ಲಿ ಕನಕದಾಸರ ಕುರಿತು ವಿಶೇಷ ಉಪನ್ಯಾಸ £Ãಡಿ ಮಾತನಾಡಿದರು.
ವಕೀಲರ ಸಂಘದ ಮಾಜಿ ಜಿಲ್ಲಾಧ್ಯಕ್ಷರಾದ ಹನುಮೇಶ ಮುರುಡಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಇಂದಿನ ಯುವ ಪೀಳಿಗೆ ಕನಕದಾಸರ ಗ್ರಂಥಗಳನ್ನು ಅಧ್ಯಯನ ಮಾಡುವ ಅವಶ್ಯಕತೆ ಇದೆ. ಯುವಕರು ಹೆಚ್ಚೆಚ್ಚು ಶಿಕ್ಷಣವನ್ನು ಪಡೆಯಬೇಕು. ಅಂದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಸಮಾಜ ಸೇವಕರಾದ ಗಾಯತ್ರಿ ತಿಮ್ಮರೆಡ್ಡಿಗೌಡ ಗಿಲ್ಲೆಸುಗೂರು, ಬಸಾಪಟ್ಟಣದ ಸಿದ್ದಯ್ಯ ಗುರುವಿನ , ಗ್ರಾಮ ಪಂಚಾಯಿತಿ ಸದಸ್ಯರಾದ ಬಾಳನಗೌಡ ಪೊಲೀಸಪಾಟೀಲ, ಕನಕಪ್ಪ ದಂಡಿನ, ಸಣ್ಣ ತೊಂಡೆಪ್ಪ ಬೂದೂರು, ಹಿರಿಯರಾದ ಅಂಬಣ್ಣ ಹಿರಿಯಣ್ಣವರ, ಲಚಮನಗೌಡ ಪೊಲೀಸಪಾಟೀಲ, ಬಸಣ್ಣ ಬುಡ್ಡಣ್ಣನವರ , ಮಾರುತಿ ಪಾಟೀಲ, ಹನುಮಂತಪ್ಪ ಕುರಿ, ಬಸವರಾಜ ಮುರುಡಿ, ತೊಂಡೆಪ್ಪ ಹುಗ್ಗಿ, ಬಸನಗೌಡ ಮಾಲಿಪಾಟೀಲ, ಕನಕರಾಯ ಹೊಸಗುಡ್ಡ, ಶಿವಪ್ಪ ಲಕ್ಕಂಪೂರ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಿವರಾಜ ಮಾಲಿಪಾಟೀಲ £ರೂಪಿಸಿದರು. ರಾಮಣ್ಣ ಹುಲಿಹೈದರ ವಂದಿಸಿದರು.


Gadi Kannadiga

Leave a Reply