This is the title of the web page
This is the title of the web page

Please assign a menu to the primary menu location under menu

Local News

ದೇವಸ್ಥಾನ ಜಮೀನು ದೇವಸ್ಥಾಣಕ್ಕೆ ಮರಳಿಸಬೇಕೆಂದು ಆಗ್ರಹಿಸಿ ಹನ್ಯಾಳ ಗ್ರಾಮಸ್ಥರ ಪ್ರತಿಭಟನೆ


ಬೆಳಗಾವಿ: ಹನ್ಯಾಳ ಗ್ರಾಮದ ಲಕ್ಷ್ಮೀ ದೇವಸ್ಥಾನದ ವಹಿವಾಟು ಜಮೀನನ್ನು ಅನಧಿಕೃತವಾಗಿ ಬೇರೆಯವರಿಗೆ ಮಾರಾಟ ಮಾಡಲಾಗಿದ್ದು ಅದನ್ನು ವಾಪಸ್ ದೇವಸ್ಥಾನಕ್ಕೆ ನೀಡಬೇಕು ಮತ್ತು ಆ ಜಮೀನಿನಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದೆಂದು ಆಗ್ರಹಿಸಿ ಹನ್ಯಾಳ ಗ್ರಾಮಸ್ಥರು ಗ್ರಾಮೀಣ ಎಸಿಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಗುರುವಾರ ಗ್ರಾಮೀಣ ಎಸಿಪಿ ಕಚೇರಿ ಎದುರು ಜಮಾವಣೆ ಗೊಂಡ ಗ್ರಾಮಸ್ಥರು ಹನ್ಯಾಳ ಗ್ರಾಮ ದೇವತೆ ಮಹಾಲಕ್ಷ್ಮೀ ದೇವಸ್ಥಾನದ ೪ ಏಕರೆ ೨೮ ಗುಂಟೆಯ ಜಮೀನನ್ನು ವಹಿವಾಟು ಜಮೀನನ್ನಾಗಿ ಬಳಕೆ ಮಾಡಲಾಗುತ್ತಿತ್ತು ಆದರೆ ಹತ್ತು ವರ್ಷಗಳ ಹಿಂದೆ ಪೂಜೇರಿ ಮತ್ತು ಹಲವರು ಸೇರಿ ಆ ಜಾಗವನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಈಗಾಗಲೇ ಮುಖಂಡರು ಪೂಜೇರಿಯನ್ನು ಕರೆಯಿಸಿ ದೇವಸ್ಥಾನ ಜಾಗೆಯನ್ನು ಪುನಃ ದೇವಸ್ಥಾನಕಗಕೆ ಬಿಡುವಂತೆ ಹೇಳಿದ್ದರು ಆದರೆ ಆತ ಅಲ್ಲಿಂದ ಕಾಣೆಯಾಗಿದ್ದು ಈಗ ಆ ಜಮೀನನ್ನು ಬೇರೆ ಬೇರೆ ಜನರು ಖರೀದಿ ಮಾಡಿದ್ದು ಅದರಲ್ಲಿರುವ ಗದ್ದುಗೆಯನ್ನು ನಾಶಗೊಳಿಸಿದ್ದರು. ಗ್ರಾಮಸ್ಥರೆಲ್ಲರು ಸೇರು ಪುನಃ ಗದ್ದುಗೆಯನ್ನು ಸ್ಥಾಪಿಸಿ ಪಿಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಆದರೆ ಜಮೀನು ಖರಿದಿಸಿದ ಮಾಲಿಕರು ಗಲಾಟೆ ಮಾಡಿ ಗ್ರಾಮಸ್ಥರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಎಲ್ಲ ದಾಖಲೆಗಳಲ್ಲಿ ಲಕ್ಷ್ಮೀ ದೇವಸ್ಥಾನದ ವಹಿವಾಟಜಾಗೆ ಎಂದು ಉಲ್ಲೇಖವಿದ್ದು ಪ್ರಖರಣವು ನ್ಯಾಯಾಲಯದಲ್ಲಿ ವಿಚಾರಣರ ನಡೆಯುತ್ತಿರುವುದರಿಂದ ತೀರ್ಪು ಪ್ರಕಟವಾಗುವರೆಗೂ ಆ ಜಮೀನಿನಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದೆಂದು ಆಗ್ರಹಿಸಿದರು.


Gadi Kannadiga

Leave a Reply