This is the title of the web page
This is the title of the web page

Please assign a menu to the primary menu location under menu

Local News

ಮೂಡಲಗಿಯಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ


ಮೂಡಲಗಿ : ಸ್ವಾತಂತ್ರ‍್ಯದ ೭೫ನೇ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಮೂಡಲಗಿ ಪುರಸಭೆ ಅಧ್ಯಕ್ಷರಾದ ಹನುಮಂತ ಗುಡ್ಲಮನಿ ಹಾಗೂ ಬಿಜೆಪಿ ಅರಭಾವಿ ಮಂಡಲ ಅಧ್ಯಕ್ಷರಾದ ಮಹದೇವ ಶೆಕ್ಕಿಯವರು ಪ್ರತಿ ಮನೆಮನೆಗೆ ಧ್ವಜಗಳನ್ನು ನೀಡುವುದರ ಮೂಲಕ ಹರ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮೂಡಲಗಿ ಪುರಸಭೆ ಸದಸ್ಯರಾದ ಪ್ರಕಾಶ್ ಮಾದರ ಮಾತನಾಡಿ, ಅರಭಾವಿ ವಿಧಾನಸಭಾ ಶಾಸಕರಾದ ಸನ್ಮಾನ್ಯ ಬಾಲಚಂದ್ರ ಜಾರಕಿಹೊಳಿಯವರು ಹರ ಘರ್ ತಿರಂಗಾ ಅಭಿಯಾನ ಯಶಸ್ವಿಯಾಗಲು ಸುಮಾರು ೨೦ ಸಾವಿರ ರಾಷ್ಟ್ರಧ್ವಜಗಳನ್ನು ನೀಡಿ ರಾಷ್ಟ್ರಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತ ದೇಶದ ಪ್ರತಿಯೊಬ್ಬ ಪ್ರಜೆಗಳಲ್ಲಿ ರಾಷ್ಟ್ರಾಬಿ üಮಾನ ಹಾಗೂ ರಾಷ್ಟ್ರಭಕ್ತಿಯನ್ನು ಮೂಡಿಸಲು ೭೫ನೇ ಸ್ವಾತಂತ್ರ‍್ಯ ಅಮೃತ ಮಹೋ ತ್ಸವವನ್ನು ಹಮ್ಮಿಕೊಂ ಡಿದ್ದು ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ ಎಂದರು.ಈ ಸಂದರ್ಭದಲ್ಲಿ ಪುರಸಭೆ ಮಾಜಿ ಉಪಾಧ್ಯಕ್ಷರಾದ ಆರ್.ಪಿ. ಸೋನವಾಲ್ಕರ್, ಪುರಸಭೆ ಸದಸ್ಯರಾದ ರವಿ ಸಣ್ಣಕ್ಕಿ, ಆನಂದ ಟಪಾಲ್ದಾರ್, ಸಿದ್ದಪ್ಪ ಮಗದುಮ್, ಬಿಜೆಪಿ ಮುಖಂಡರಾದ ಹನುಮಂತ ಸತರಡ್ಡಿ, ಜಗದೀಶ್ ತೇಲಿ, ಕೇದಾರಿ ಭಸ್ಮೆ, ಬಿಜೆಪಿ ಕಾರ್ಯಕರ್ತರು ಹಾಗೂ ಅನೇಕ ನಾಗರೀಕರು ಉಪಸ್ಥಿತರಿದ್ದರು.


Gadi Kannadiga

Leave a Reply