This is the title of the web page
This is the title of the web page

Please assign a menu to the primary menu location under menu

Local News

ಶಹಾಬಂದರದಲ್ಲಿ ಹರ ಘರ ಅಭಿಯಾನ


ಯಮಕನಮರಡಿ: ಸಮೀಪದ ಶಹಾಬಂದರ ಗ್ರಾಮ ಪಂಚಾಯತಿ ವತಿಯಿಂದ ಹರ ಘರ ತಿರಂಗ ಅಭಿಯಾನ ಕಾರ್ಯಕ್ರಮ ನಡೆಯಿತು. ಶಹಾಬಂದರ ಗ್ರಾ.ಪಂ. ಪಿಡಿಓ ರಮೇಶ ತೇಲಿ ಮಾತನಾಡಿ ಈ ವರ್ಷದ ಸ್ವಾತಂತ್ರ ದಿನಾಚರಣೆಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹರ್ ಘರ್ ತಿರಂಗಾ ಅಭಿಯಾನದಡಿ ಆಗಸ್ಟ್ ೧೩ ರಿಂದ ೧೫ ರವರೆಗೆ ಗ್ರಾಮಗಳ ಮನೆ ಮನೆಗಳ ಮೇಲೆ ರಾಷ್ಟ್ರದ ತ್ರಿವರ್ಣ ದ್ವಜ ಹಾರಿಸುವ ಮೂಲಕ ವಿಜೃಂಭಣೆಯಿಂದ ಆಚರಿಸಲು ಕ್ರಮ ವಹಿಸಬೇಕಾಗಿದೆ ಮತ್ತು ಸ್ವ-ಸಹಾಯ ಗುಂಪುಗಳಿಂದ ೪೫೦ ತ್ರೀವರ್ಣ ಧ್ವಜ ಖರೀದಿಸಲಗುತ್ತಿದೆ ಎಂದು ಹೇಳಿದರು.
ಈ ಪೂರ್ವಭಾವಿ ಸಭೆಯಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಶಂಕರ ಡೊಂಬಾರ, ಸರ್ವ ಸದಸ್ಯರು, ಮಕ್ತುಮಸಾಹೇಬ ಅಪ್ಪುಬಾಯಿ, ಮಜಹರ ಖತೀಬ, ಮಾಜಿ ಜಿ.ಪಂ. ಸದಸ್ಯ ಯಲ್ಲಪ್ಪ ಹಂಚಿನಮ£, ಪ್ರಕಾಶ ಮಠದವರ, ಗ್ರಾ.ಪಂ. ಸಿಬ್ಬಂದಿ ಲಗಮಣ್ಣಾ ದಾಸ ಮತ್ತು ಎಲ್ಲಾ ಶಾಲೆಗಳ ಪ್ರಧಾನ ಗುರುಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಹಾಗೂ ಗ್ರಾಮದ ಹಿರಿಯರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಬಳಿಕ ಸ್ವಾತಂತ್ರದ ಅಮೃತ ಮಹೋತ್ಸವದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಗ್ರಾಮ ಪಂಚಾಯತ ವಾಹನದ ಸ್ಪೀಕರ್ ಮೂಲಕ ವಿಶೇಷವಾಗಿ ತಯಾರಿಸಿದ ಆಡಿಯೋ ಬಿಡುಗಡೆ ಮಾಡಿ ಎಲ್ಲಾ ಗ್ರಾಮಗಳಲ್ಲಿ ಪ್ರಚಾರಕ್ಕಾಗಿ ಚಾಲನೆ £Ãಡಲಾಯಿತು.


Gadi Kannadiga

Leave a Reply