ಯಮಕನಮರಡಿ: ಚಿಕ್ಕೋಡಿ ಜಿಲ್ಲಾ ಬಿಜೆಪಿ ಎಸ್.ಟಿ. ಮೊರ್ಚಾ ಅಧ್ಯಕ್ಷ ಬಸವರಾಜ ಹುಂದ್ರಿಯವರು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಕಳೆದ ೧೫ ವರ್ಷಗಳಿಂದ ಯಮಕನಮರಡಿ ಮತಕ್ಷೇತ್ರದಲ್ಲಿ ಬಿಜೆಪ ಪಕ್ಷವನ್ನು ಕೆಳಮಟ್ಟದಿಂದ ಸಂಘಟಿಸಿದ್ದಕ್ಕಾಗಿ ಅವರಿಗೆ ಬಿಜೆಪಿ ವರಿಷ್ಠರು ಸಮೀಕ್ಷೆ ನಡೆಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೇಟು £Ãಡಿದ್ದಾರೆ ಎಂದು ಹುಕ್ಕೇರಿ ಗ್ರಾಮೀಣ ವಿದ್ಯುತ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ ಹೇಳಿದರು.
ಅವರು ಬುಧವಾರ ದಿ. ೧೨ ರಂದು ಯಮಕನಮರಡಿಯಲ್ಲಿ ಬಿಜೆಪಿ ವರಿಷ್ಠರಿಗೆ ಅಭಿನಂದಿಸಿ ಮಾದ್ಯಮದವರೊಂದಿಗೆ ಮಾತನಾಡಿ ದಿವಂಗತ ಉಮೇಶ ಕತ್ತಿಯವರು ಇದ್ದಾಗ ಒಡಂಬಡಿಕೆ ಪ್ರಕಾರ ಮಾರುತಿ ಅಷ್ಟಗಿಯವರಿಗೆ £ಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಡುವುದು ಮತ್ತು ಬಸವರಾಜ ಹುಂದ್ರಿಯವರಿಗೆ ಯಮಕನಮರಡಿ ಮತಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೇಟ £Ãಡುವುದು ಒಪ್ಪಂದವಾಗಿತ್ತು. ಅದೇ ಒಪ್ಪಂದದ ಪ್ರಕಾರ ಬಿಜೆಪಿ ವರಿಷ್ಠರು ಬಸವರಾಜ ಹುಂದ್ರಿಯವರಿಗೆ ಟೀಕೆಟ £Ãಡಿದ್ದಾರೆ. ಯಮಕನಮರಡಿ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನವಿಲ್ಲ ಒಂದು ವೇಳೆ ಅಸಮಾಧಾನ ಕಂಡುಬಂದರ ಅವರ ಮನವೋಲಿಸಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ದುಡಿಯಲಾಗುವುದು. ಈ ಹಿಂದೆ ಕೂಡಾ ಮಾರುತಿ ಅಷ್ಟಗಿ ಮತ್ತು ಹುಂದ್ರಿಯವರು ಟಿಕೇಟ ಯಾರಿಗೆ £Ãಡಿದರೂ ಕೂಡಾ ಬಿಜೆಪಿ ಪಕ್ಷದ ಪರವಾಗಿ ದುಡಿಯುವದಾಗಿ ಹೇಳಿಕೆ £Ãಡಿದ್ದಾರೆ. ಕ್ಷೇತ್ರದ ಎಲ್ಲ ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಾಗಿ ದುಡಿದು ಯಮಕನಮರಡಿ ಮತಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಬಾವುಟವನ್ನು ಹಾರಿಸಲಾಗುವುದು. ಈ ಹೊಂದಾಣಿಕೆ ರಾಜಕಾರಣ ಎನ್ನುವ ಆರೋಪಕ್ಕೆ ಹುರುಳಿಲ್ಲ ಎಂದು ಕಲಗೌಡ ಪಾಟೀಲ ಹೇಳಿದರು.
ಯಮಕನಮರಡಿ ಬಿಜೆಪಿ ರೈತಮೊರ್ಚಾ ಅಧ್ಯಕ್ಷ ಸಿದ್ದಲಿಂಗ ಸಿದ್ದಗೌಡರ ಮಾತನಾಡಿ ಗುಟಗುದ್ದಿಯಂತಹ ಒಂದು ಸಣ್ಣ ಹಳ್ಳಿಯ ಒಬ್ಬ ಸಾಮಾನ್ಯ ಬಿಜೆಪಿ ಕಾರ್ಯಕರ್ತರಿಗೆ ಟಿಕೇಟ £Ãಡಿದ್ದು ಎಲ್ಲ ಜನರಲ್ಲಿ ಸಂತೋಷ ಮೂಡಿಸಿದೆ. ಎಲ್ಲ ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಿ£ಂದ ದುಡಿದು ಬಸವರಾಜ ಹುಂದ್ರಿಯವರನ್ನು ಆರಿಸಿ ತರಲಾಗುವುದು ಎಂದು ಹೇಳಿದರು.
ಯಮಕನಮರಡಿ ಉತ್ತರ ಮಂಡಳ ಅಧ್ಯಕ್ಷ ಶ್ರೀಶೈಲ ಯಮಕನಮರಡಿ, ಬಿಜೆಪಿ ಮುಖಂಡ ರವಿ ಹಂಜಿ ಮಾತನಾಡಿದರು. ಈ ವೇಳೆಯಲ್ಲಿ ಹುಕ್ಕೇರಿ ತಾ.ಪಂ. ಮಾಜಿ ಅಧ್ಯಕ್ಷ ಅಡಿವೆಪ್ಪ ಜಿಂಡ್ರಾಳಿ, ಬಸವರಾಜ ನಾಯಿಕ, ಅಪ್ಪಯ್ಯ ಜಾಜರಿ, ಸಿದ್ದಗೌಡ ಮೋದಗಿ, ಬಸವರಾಜ ಪೂಜೇರಿ, ಬಸವರಾಜ ಬರಗಾಲಿ, ಈರಣ್ಣಾ ಗೊರವ, ರಾಜು ಮಠಪತಿ, ಶಿವಪ್ಪ ಡೊನ್ನಪಾಟೀಲ, ಯಲ್ಲಪ್ಪಾ ಗಡಕರಿ, ಅಯೂಬಖಾನ ಒಂಟಿಗಾರ, ಮತ್ತು ಸಮಸ್ತ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
Gadi Kannadiga > Local News > ಸಾಮಾನ್ಯ ಕಾರ್ಯಕರ್ತನಿಗೆ ಬಿಜೆಪಿ ಟಿಕೇಟು ಹರ್ಷ : ಕಲಗೌಡ ಪಾಟೀಲ
ಸಾಮಾನ್ಯ ಕಾರ್ಯಕರ್ತನಿಗೆ ಬಿಜೆಪಿ ಟಿಕೇಟು ಹರ್ಷ : ಕಲಗೌಡ ಪಾಟೀಲ
Suresh12/04/2023
posted on
