ಬೆಳಗಾವಿ: ಬಾಳೇಕುಂದ್ರಿ ಬಿಕೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಹರ್ಷಾ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಗೊಂಡವಾಡ ಗ್ರಾಮದ ಎಸ್ ಬಿ ಎಸ್ ಮಾರ್ಕೆಟಿಂಗ್ ತಂಡ ಜಯಭೇರಿ ಬಾರಿಸುವ ಮೂಲಕ ಪ್ರಶಸ್ತಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ.
ಸುಮಾರು ೪೦ ಗ್ರಾಮೀಣ ಭಾಗದ ಕ್ರಿಕೆಟ್ ತಂಡಗಳು ಪ್ರಶಸ್ತಿಗಳನ್ನು ಗೆಲ್ಲಲು ಸೆಣಸಾಟ ನಡೆಸಿದ್ದವು. ಕ್ವಾರ್ಟರ್ ಫೈನಲ್, ಸೆಮಿ ಫೈನಲ್ ಪಂದ್ಯಾವಳಿಗಳು ನಡೆದು, ಫೈನಲ್ ಪಂದ್ಯದಲ್ಲಿ ೧sಣ ರನ್ನರ್ ಅಪ್ ಆಗಿ ಯಳ್ಳೂರ ಗ್ರಾಮದ ಚಾಂಗಳೇಶ್ವರ ತಂಡ ಹಾಗೂ ೨ಟಿಜ ರನ್ನರ್ ಅಪ್ ಆಗಿ ಹಿಂಡಲಗಾ ಗ್ರಾಮದ ನೀಲ್ ಇಂಡಿಯನ್ ಬಾಯ್ಸ್ ತಂಡಗಳು ಪ್ರಶಸ್ತಿ ಪಡೆದವು.
ಹರ್ಷಾ ಟ್ರೋಫಿ ಗ್ರಾಮೀಣ ಭಾಗದ ತಂಡಗಳಿಗೆ ಒತ್ತು ನೀಡುವ ಮುಖೇನ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಲು ಉತ್ತಮ ವೇದಿಕೆಯಾಗಿ ಹೊರಹೊಮ್ಮಿದ್ದು, ಮುಂಬರುವ ದಿನಗಳಲ್ಲಿ ಎಲ್ಲ ತರಹದ ಕ್ರೀಡೆಗಳಿಗೂ ಸಹ ಪ್ರಾಮುಖ್ಯತೆಯನ್ನು ನೀಡಿ ಪಂದ್ಯಾವಳಿಗಳನ್ನು ಆಯೋಜಿಸಲಾಗುವುದು ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷಿ÷್ಮÃ ಹೆಬ್ಬಾಳಕರ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ತಿಳಿಸಿದ್ದಾರೆ.
ವಿಜೇತ ತಂಡಗಳಿಗೆ ಚನ್ನರಾಜ ಹಟ್ಟಿಹೊಳಿ ಟ್ರೋಫಿ ಹಾಗೂ ಬಹುಮಾನಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಬಸವರಾಜ ಕಲ್ಲೂರ, ಅಬ್ದುಲ್ ಬಾಗವಾನ್, ಶಿವರಾಜ ಜಾಧವ್, ಫಯಿಮ್ ಯಾದವಾಡ, ಪ್ರವೀಣ ಕೊಪ್ಪದ, ಅಪ್ಸರ್ ಜಮಾದಾರ, ಅಯ್ಜಾಜ್ ಪಠಾಣ, ಜಮೀಲ್ ಖಾಜಿ, ಪ್ರೇಮ್ ಕೋಲಕಾರ, ಕ್ರಿಕೆಟ್ ತಂಡಗಳು, ಕ್ರಿಕೆಟ್ ಮ್ಯಾನೇಜ್‌ಮೆಂಟ್ ನ ಎಲ್ಲ ಪದಾಧಿಕಾರಿಗಳು ಹಾಗೂ ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದರು.