This is the title of the web page
This is the title of the web page

Please assign a menu to the primary menu location under menu

Local News

‘ಹಾಸ್ಯ ರಸಾಯನ’ ಕಾರ್ಯಕ್ರಮ


ಬೆಳಗಾವಿ ೬- ನಗರದ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಇದೇ ದಿ. ೯ ಶನಿವಾರದಂದು ಸಾಯಂಕಾಲ ೪-೩೦ ಕ್ಕೆ “ಹಾಸ್ಯ ರಸಾಯನ” ಕಾರ್ಯಕ್ರಮವನ್ನು ಚೆನ್ನಮ್ಮ ವೃತ್ತದ ಬಳಿಯಿರುವ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದಾರೆ.
ಅಧ್ಯಕ್ಷತೆಯನ್ನು ಲೇಖಕ ವಿ. ವಿ. ಹಡಗಿನಹಾಳ ವಹಿಸಿಕೊಳ್ಳಲಿದ್ದಾರೆ. ಅರವಿಂದ ಹುನಗುಂದ ಚಾಲನೆಯನ್ನು ನೀಡಲಿದ್ದು ಪ್ರಾಸ್ತಾವಿಕ ನುಡಿಗಳನ್ನು ಗುಂಡೇನಟ್ಟಿ ಮಧುಕರ ಆಡಲಿದ್ದಾರೆ. ಶ್ರೀಮತಿ ರಾಜೇಶ್ವರಿ ಹಿರೇಮಠ ಅತಿಥಿಗಳಾಗಿ ಆಗಮಿಸಲಿದ್ದು ಪ್ರಾಯೋಜಕತ್ವವನ್ನು ಕೇಂದ್ರ ಉಗ್ರಾಣ ಸಂಸ್ಥೆ ಬೆಳಗಾವಿ ಶಾಖೆ ನಿವೃತ್ತ ವ್ಯವಸ್ಥಾಪಕ ಕಿರ್ತಿನಾಥ ವೆಂ. ಮುಳಗುಂದ ವಹಿಸಿಕೊಂಡಿದ್ದಾರೆ. ಉದಯೋನ್ಮುಖ ಕಲಾವಿದರಾದ ರಾಜು ಹಿರೇಮಠ, ವಿಜಯಕುಮಾರ ಹಣ್ಣಿಕೇರಿ, ಗುರುರಾಜ ಗೋಕಾಕ ತಮ್ಮ ಮಾತುಗಳಿಂದ ರಂಜಿಸಲಿದ್ದಾರೆ. ಕೆ. ತಾನಾಜಿ ನಿರೂಪಿಸಲಿದ್ದಾರೆ.
ಆಸಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸದುಪಯೋಗ ಪಡೆಯುವಂತೆ ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿಯ ಆರ್. ಬಿ. ಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply