ಯಮಕನಮರಡಿ:- ಸಾಹುಕಾರಗಿರಿ ಪದ್ದತಿಯನ್ನು ದೂರಮಾಡಿ ವಿದ್ಯಾವಂತ ಕ್ರೀಯಾಶೀಲ ಪ್ರಾಮಾಣಿಕತೆ ವ್ಯಕ್ತಿತ್ವವುಳ್ಳ ಮಾರುತಿ ಅಷ್ಟಗಿಯವರನ್ನು ಈಬಾರಿ ಚುನಾವಣೆಯಲ್ಲಿ ಗೆಲ್ಲಿಸಿ ಯಮಕನಮರಡಿಯಲ್ಲಿ ಬದಲಾವಣೆ ತರಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಅವರು ಬುಧವಾರ ದಿ. ೦೩ ರಂದು ಯಮಕನಮರಡಿಯಲ್ಲಿ ಜೆಡಿಎಸ್ ಅಭ್ಯರ್ಥಿ ಮಾರುತಿ ಅಷ್ಟಗಿಯವರ ಪರ ಮತಯಾಚಿಸಿ ಮಾತನಾಡಿದರು. ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿರುವ ಹೊಂದಾಣಿಕೆ ರಾಜಕೀಯಕ್ಕೆ ಕಡಿವಾಣ ಹಾಕುವುದು ಮತದಾರರ ಕೈಯಲಿದೆ. ಬೆಳಗಾವಿ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ರಾಜಕೀಯ ಮಾಡಿ ರೈತರ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ. ಕೇಂದ್ರದಲ್ಲಿ ಕಾಂಗ್ರೇಸ್ ಸರ್ಕಾರ ಇದ್ದ ಸಮಯದಲ್ಲಿ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಲು ಅನುಮತಿ ಇರಲಿಲ್ಲ. ಮಣ್ಣಿನ ಮಗ ಎಚ್.ಡಿ.ದೇವೇಗೌಡರು ದೇಶದ ಪ್ರಧಾನಮಂತ್ರಿಯಾದಾಗ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು ೨೮ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಲು ಅನುಮತಿ £Ãಡಲಾಯಿತು. ಇಂದು ಕಬ್ಬು ಬೆಳೆಗಾರರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವರು ಬೆಳದಂತಹ ಕಬ್ಬಿಗೆ ಸರಿಯಾಗಿ ಬೆಲೆ ಸಿಗುತ್ತಿಲ್ಲ. ಮತ್ತು ತೂಕದಲ್ಲಿ ಮೋಸ ಮಾಡಲಾಗುತ್ತಿದೆ ಇದರಿಂದ ಕಬ್ಬು ಬೆಳಗಾರರು ತೀರಾ ಸಂಕಟದಲ್ಲಿದ್ದಾರೆ. ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಕಬ್ಬು ಬೆಳೆಗಾರರ ಪ್ರತಿಯೊಂದು ಸಮಸ್ಯೆಯನ್ನು ಬಗೆಹರಿಸಲಾಗುವುದು. £Ãರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು. ಸ್ತ್ರೀ ಶಕ್ತಿ ಗುಂಪುಗಳ ಸಾಲಗಳನ್ನು ಕೂಡಾ ಮನ್ನಾ ಮಾಡಲಾಗುವುದು. ಬಡವರಿಗೆ ೫ ಲಕ್ಷ ರೂ. ವೆಚ್ಚದಲ್ಲಿ ಮನೆಗಳನ್ನು £ರ್ಮಿಸಿ ಕೊಡಲಾಗುವುದು. ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ದಿಯ ಹಿತದೃಷ್ಠಿಯಿಂದ ನಾನು ಮುಖ್ಯಮಂತ್ರಿಯಾದಾಗ ವಿಧಾನಸಭೆ ಕಲಾಪಗಳನ್ನು ಆರಂಭಿಸುವದಲ್ಲದೇ ಸುವರ್ಣಸೌಧ £ರ್ಮಾಣಕ್ಕೆ ಕೂಡಾ ಚಾಲನೆ £Ãಡಿದ್ದೇನೆ. ಮಾರುತಿ ಅಷ್ಟಗಿಯವರು ಜೆಡಿಎಸ್ ಪಕ್ಷಕ್ಕೆ ಬಂದಿದ್ದರಿಂದ ಒಂದು ಹೊಸ ಶಕ್ತಿ ಬಂದಿದೆ. ಅವರನ್ನು ಗೆಲ್ಲಿಸಬೇಕು ಈ ಸಲದ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ೮ ಸ್ಥಾನಗಳು ದೊರೆಯಲಿವೆ ಎಂದು ಎಚ್.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಪರಿಷತ್ ಮಾಜಿ ಉಪಸಭಾಪತಿ ಸಚ್ಚಿದಾನಂದ ಖೋತ ಮಾತನಾಡಿ ಎಚ್.ಡಿ. ಕುಮಾರಸ್ವಾಮಿಯವರು ಮಾಡಿದಷ್ಟು ಅಭಿವೃದ್ದಿ ಕಾರ್ಯಗಳು ರಾಜ್ಯದಲ್ಲಿ ಯಾವ ಮುಖ್ಯಮಂತ್ರಿಯೂ ಕೂಡಾ ಮಾಡಿಲ್ಲ. ಬೆಳಗಾವಿಯಲ್ಲಿ ವಿಧಾನಸಭಾ ಕಲಾಪಗಳನ್ನು ಆರಂಭಿಸಿ ರೈತರು ಮತ್ತು ಸಾರ್ವಜ£ಕರು ತಮ್ಮ ಬೇಕು ಬೇಡಗಳಿಗೆ ಸರ್ಕಾರದ ಗಮನ ಸೆಳೆಯಲು ಅನುಕೂಲ ಮಾಡಿಕೊಟ್ಟಿದ್ದಾರೆ. ಮಾರುತಿ ಅಷ್ಟಗಿಯವರನ್ನು ಬಿಜೆಪಿ ಪಕ್ಷದಿಂದ ಹೊರಹಾಕಿದರೂ ಕೂಡಾ ಜನಸಾಮಾನ್ಯರ ಹೃದಯದಲ್ಲಿ ಇನ್ನೂ ಇದ್ದಾರೆ. ಅವರು ಜೆಡಿಎಸ್ ಪಕ್ಷಕ್ಕೆ ಬಂದಿದ್ದರಿಂದ ಒಂದು ದೊಡ್ಡ ಬಲ ಬಂದಿದೆ ಮತ್ತು ಪಕ್ಷಕ್ಕೆ ಪುನರಜನ್ಮ ಸಿಕ್ಕಿದೆ ಎಂದು ಹೇಳಿದರು.
ಜೆಡಿಎಸ್ ಅಭ್ಯರ್ಥಿ ಮಾರುತಿ ಅಷ್ಟಗಿ ಮಾತನಾಡಿ ಕಳೆದ ೧೫ ವರ್ಷಗಳಿಂದ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳಸಿದ್ದೇನೆ. ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ ೨೮೦೦ ಮತಗಳಿಂದ ಪರಾಭವಗೊಂಡಿದ್ದಕ್ಕೆ ದಿಲ್ಲಿಯ ಹಾಗೂ ರಾಜ್ಯದ ನಾಯಕರ £ರಾಸಕ್ತಿಯೇ ಕಾರಣವಾಗಿದೆ. ಒಂದು ವೇಳೆ ನನಗೆ ಅವರು ಚುನಾವಣೆಯಲ್ಲಿ ತಮ್ಮ ಸ್ವ ಇಚ್ಚೆಯಿಂದ ಸಹಾಯ ಮಾಡಿದ್ದಲ್ಲಿ ೨೮೦೦೦ ಸಾವಿರ ಮತಗಳಿಂದ ಆಯ್ಕೆಯಾಗಿ ಶಾಸಕನಾಗುತ್ತಿದ್ದೆ ನನ್ನ ಆಶೆಗೆ ಬಿಜೆಪಿ ನಾಯಕರು ತಣ್ಣೀರು ಎರಚಿದ್ದಾರೆ. ಈ ಸಲದ ಚುನಾವಣೆಯಲ್ಲಿ ಕೂಡ ಹೊಂದಾಣಿಕೆ ರಾಜಕೀಯ ಮಾಡಿ ಕುತಂತ್ರದಿಂದ ನನಗೆ ಟೀಕೇಟು ತಪ್ಪಿಸಿದ್ದಾರೆ ನನಗೆ ಪ್ರತಿದಿನವು ಒತ್ತಡಗಳು ಬರುತ್ತಿದ್ದು ಜೆಡಿಎಸ್ ಪಕ್ಷ ಬಿಟ್ಟು ಬಂದು ಬಿಜೆಪಿಗೆ ಬೆಂಬಲಿಸಬೇಕೆಂದು ಹೇಳುತ್ತಿದ್ದಾರೆ. ಆದರೆ ನಾನೊಬ್ಬ ಸ್ವಾರ್ಥಿಅಲ್ಲ ಸ್ವಾಭಿಮಾ£ಯಾಗಿದ್ದೇನೆ. ಜೆಡಿಎಸ್ ಪಕ್ಷವು ನನಗೆ ಬಿ ಫಾರ್ಮ £Ãಡಿದ್ದು ಪಕ್ಷಕ್ಕೆ ದ್ರೋಹ ಬಗೆಯದೆ ಧೈರ್ಯದಿಂದ ಚುನಾವಣೆಯಲ್ಲಿ ಎದುರಿಸುತ್ತೇನೆಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಶಂಕರ ಮಾಡಲಗಿ, ಕಲ್ಲಪ್ಪ ಮಗ್ಗೆನ್ನವರ, ಯಮಕನಮರಡಿ ಬ್ಲಾಕ ಜೆಡಿಎಸ್ ಅಧ್ಯಕ್ಷ ಜಾಕೀರ ನಧಾಪ ಬಸವರಾಜ ಪಾಟೀಲ, ಬಾಬಾಗೌಡ ಪಾಟೀಲ, ಪಾರೇಶ ಮಲಾಜಿ, ಸೇರಿದಂತೆ ಸಮಸ್ತ ಜೆಡಿಎಸ್ ನಾಯಕರು ವೇದಿಕೆಯಲ್ಲಿದ್ದರು. ಜಯಶ್ರೀ ಮಡ್ಡಿ ಕಾರ್ಯಕ್ರಮ £ರೂಪಿಸಿದರು.
Gadi Kannadiga > Local News > ಸಾಹುಕಾರಗಿರಿ ಪದ್ದತಿ ದೂರು ಮಾಡಿ ಮಾರುತಿ ಅಷ್ಟಗಿ ಗೆಲ್ಲಿಸಿ : ಎಚ್.ಡಿ. ಕುಮಾಸ್ವಾಮಿ
ಸಾಹುಕಾರಗಿರಿ ಪದ್ದತಿ ದೂರು ಮಾಡಿ ಮಾರುತಿ ಅಷ್ಟಗಿ ಗೆಲ್ಲಿಸಿ : ಎಚ್.ಡಿ. ಕುಮಾಸ್ವಾಮಿ
Suresh03/05/2023
posted on
