ಹುಬ್ಬಳ್ಳಿ, ಮೇ 25, 2023: ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ(ಎನ್ಪಿಎಸ್) ಪರಂಪರೆಯ ಅಡಿಯಲ್ಲಿ ವೇಗವಾಗಿ ಬೆಳೆಯುತ್ತಿರುವ ಪಿಂಚಣಿ ನಿಧಿ ವ್ಯವಸ್ಥಾಪಕ ಸಂಸ್ಥೆ ಎಚ್ಡಿಎಫ್ಸಿ ಪೆನ್ಶನ್ ಮ್ಯಾನೇಜ್ಮೆಂಟ್ ಕಂಪನಿ ಲಿಮಿಟೆಡ್., 2023ರ ಮೇ 15ರ ಪ್ರಕಾರ ಅಸೆಟ್ಸ್ ಅಂಡರ್ ಮ್ಯಾನೇಜ್ಮೆಂಟ್ (ಎಯುಎಂ) 50,000 ಕೋಟಿ ರೂಪಾಯಿಗಳ ಗಡಿ ದಾಟಿತು. 2013 ರಲ್ಲಿ ಪ್ರಾರಂಭವಾದಾಗಿನಿಂದ, ಸಂಸ್ಥೆಯು ಎಚ್ಡಿಎಫ್ಸಿ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ನ ಸಂಪೂರ್ಣ ಸ್ವಾಮ್ಯದ ಸಬ್ಸಿಡರಿ ಆಗಿದ್ದು, ವೇಗದ ದರ (ಕೆಳಗಿನ ಕೋಷ್ಟಕವನ್ನು ನೋಡಿ) ದಲ್ಲಿ ಬೆಳೆದಿದೆ. ಎಯುಎಂ ಗಾತ್ರವು ಮೂವತ್ಮೂರು (33) ತಿಂಗಳ ಅವಧಿಯಲ್ಲಿ 10,000 ಕೋಟಿ ರೂಪಾಯಿಯನ್ನು 2020ರ ಜುಲೈನಲ್ಲಿ ಸಾಧಿಸಲಾಗಿದೆ.
ಎಚ್ಡಿಎಫ್ಸಿ ಪೆನ್ಶನ್ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಪರಂಪರೆಯ ಪೆನ್ಶನ್ ಫಂಡ್ ಮ್ಯಾನೇಜರ್ ಆಗಿದೆ. ರಿಟೇಲ್ ಮತ್ತು ಕಾರ್ಪೊರೇಟ್ ಎನ್ಪಿಎಸ್ ವಿಭಾಗಗಳ ಅಡಿಯಲ್ಲಿ ಅತಿ ಹೆಚ್ಚು ಸಬ್ಸ್ಕ್ರೈಬರ್ಸ್ (2023ರ ಮೇ 1ರ ಪ್ರಕಾರ 15,00,000+) ಹೊಂದಿದೆ.
ಈ ಮೈಲಿಗಲ್ಲಿನ ಕುರಿತು ಮಾತನಾಡಿದ ಎಚ್ಡಿಎಫ್ಸಿ ಪೆನ್ಶನ್ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಶ್ರೀರಾಮ್ ಅಯ್ಯರ್, “ಇದು ನಮಗೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. 50,000 ಕೋಟಿ ರೂಪಾಯಿಯ ಈ ಮೈಲಿಗಲ್ಲನ್ನು ದಾಟಿರುವುದಕ್ಕೆ ನಮಗೆ ಸಂತೋಷವಾಗಿದೆ. ಎಯುಎಂ ಮತ್ತು ಇದು ನಮ್ಮ ಬಲವಾದ ಉಪಸ್ಥಿತಿಯನ್ನು ಮೌಲ್ಯೀಕರಿಸುತ್ತದೆ. ಈ ವರ್ಷ ನಾವು ಹತ್ತು (10) ವರ್ಷಗಳ ವ್ಯವಹಾರವನ್ನು ಪೂರ್ಣಗೊಳಿಸುತ್ತಿರುವ ಕಾರಣ ಈ ಸಾಧನೆಯು ಇನ್ನಷ್ಟು ಮಹತ್ವದ್ದಾಗಿದೆ. ಈ ಮೈಲಿಗಲ್ಲು ನಮ್ಮ ಗೌರವಾನ್ವಿತ ಚಂದಾದಾರರು ನಮ್ಮ ಸಂಸ್ಥೆಯ ಮೇಲೆ ಇಟ್ಟಿರುವ ನಂಬಿಕೆಯ ಪ್ರತಿಬಿಂಬವಾಗಿದೆ. ನಮ್ಮ ಚಂದಾದಾರರು, ಕಾರ್ಪೊರೇಟ್ ಪಾರ್ಟ್ನರ್ಸ್, ಪಾಯಿಂಟ್ಸ್ ಆಫ್ ಪ್ರೆಸೆನ್ಸ್ (ಪಿಒಪಿಗಳು) ಮತ್ತು ಡಿಸ್ಟ್ರಿಬ್ಯೂಟರ್ಸ್ ನಮ್ಮಲ್ಲಿ ತೋರಿಸಿದ ವಿಶ್ವಾಸ ಮತ್ತು ನಂಬಿಕೆಗಾಗಿ ಮತ್ತು ಸಂಸ್ಥೆಯು ಕಾಲಾನುಕ್ರಮದಲ್ಲಿ ಬೆಳೆಯಲು ಅನುವು ಮಾಡಿಕೊಟ್ಟ ಅವರ ಬೆಂಬಲಕ್ಕಾಗಿ ನಾವು ಧನ್ಯವಾದಗಳನ್ನು ಸಲ್ಲಿಸಲು ಬಯಸುತ್ತೇವೆ” ಎಂದು ಹೇಳಿದರು.
“ಪ್ರತಿಯೊಬ್ಬ ಕೆಲಸ ಮಾಡುವ ವ್ಯಕ್ತಿಗೆ ನಿವೃತ್ತಿಯ ನಂತರ ಅವರ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಒಂದು ಮಾರ್ಗದ ಅಗತ್ಯವಿದೆ. ರಿಟೈರ್ಮೆಂಟ್ ಯೋಜನೆ ಪ್ರಕ್ರಿಯೆಯಲ್ಲಿ ಹಣಕಾಸಿನ ಉತ್ಪನ್ನವಾಗಿ ಎನ್ಪಿಎಸ್ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಉತ್ತಮ ಆದಾಯಗಳು, ಆಕರ್ಷಕ ತೆರಿಗೆ ಪ್ರಯೋಜನಗಳು ಮತ್ತು ಕಡಿಮೆ ಶುಲ್ಕಗಳು ಬಲವಾದ ಗ್ರಾಹಕ ಪ್ರತಿಪಾದನೆಯನ್ನು ಮಾಡುತ್ತವೆ. ನಮ್ಮ ಎಯುಎಂ 50,000 ಕೋಟಿ ರೂಪಾಯಿ ಮಿತಿಯನ್ನು ದಾಟುವುದರೊಂದಿಗೆ ನಮ್ಮ ಚಂದಾದಾರರಿಗೆ ಪರಿಣಾಮಕಾರಿ ಫಂಡ್ ಮ್ಯಾನೇಜ್ಮೆಂಟ್ ಚಾರ್ಜಸ್ ಮತ್ತಷ್ಟು ಕಡಿಮೆಯಾಗುತ್ತವೆ, ಉತ್ಪನ್ನವನ್ನು ಹೆಚ್ಚು ವೆಚ್ಚ ಪರಿಣಾಮದಾಯಕವಾಗಿಸುತ್ತದೆ. ಹೆಚ್ಚು ಹೆಚ್ಚು ಭಾರತೀಯರು ಈ ಉತ್ಪನ್ನವನ್ನು ಆರಿಸಿಕೊಳ್ಳುತ್ತಾರೆ, ಆ ಮೂಲಕ ತಮ್ಮ ಸುವರ್ಣ ವರ್ಷಗಳನ್ನು ಭದ್ರಪಡಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ವಿವರಿಸಿದರು.
ಎಚ್ಡಿಎಫ್ಸಿ ಪೆನ್ಶನ್ 2019 ರಿಂದ 2022 ರವರೆಗೆ ಸತತ 3 ವರ್ಷಗಳವರೆಗೆ ಮನಿ ಟುಡೇಯ ‘ಅತ್ಯುತ್ತಮ ಕಾರ್ಯಕ್ಷಮತೆಯ ಪಿಎಫ್ಎಂ’ ಎಂಬ ಪ್ರಶಸ್ತಿಗೆ ಭಾಜನವಾಗಿದೆ.