This is the title of the web page
This is the title of the web page

Please assign a menu to the primary menu location under menu

Local News

ಶ್ರೀರಾಮ ಸೇನಾ ಸಂಘಟನೆಯಿಂದ ಆರೋಗ್ಯದ ಅರಿವು ಹಾಗೂ ಲಸಿಕಾ ವಿತರಣೆ


ಬೆಳಗಾವಿ: ನಗರದ ವಿವಿಧ ಭಾಗಗಳಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರು ಇಂದು ಜನರಲ್ಲಿ ಆರೋಗ್ಯದ ಜಾಗೃತಿ ಮೂಡಿಸುತ್ತಾ ಲಸಿಕಾ ವಿತರಣೆ ಮಾಡಿ, ಸಾಮಾಜಿಕ ಕಳಕಳಿ ಮೆರೆದರು.

ಶ್ರೀ ರಾಮ ಸೇನಾ ಹಿಂದುಸ್ತಾನ ಸಂಘಟನೆಯ ವತಿಯಿಂದ ಶಾಹಪೂರ್ ಭಾಗದ ವಿವಿಧ ಗಲ್ಲಿಗಳಲ್ಲಿ ಮನೆ ಮನೆಗೆ ಹೋಗಿ ಚಿಕನ್ ಗುನಿಯಾ ಹಾಗೂ ಡೆಂಗ್ಯೂ ಲಸಿಕರಣಕ್ಕೆ ಶ್ರೀ ರಮಾಕಾಂತ ದಾದಾ ಅವರು ಚಾಲನೆಯನ್ನು ನೀಡಿದರು.

ಮಳೆಗಾಲದಲ್ಲಿ ಆಗುವ ಡೆಂಗ್ಯು ಹಾಗೂ ಚಿಕನ್ ಗುನಿಯಾ ರೋಗವನ್ನು ತಡೆಗಟ್ಟುವ ಸಲುವಾಗಿ ಶ್ರೀ ರಾಮ ಸೇನಾ ಹಿಂದುಸ್ತಾನ ಕಾರ್ಯಕರ್ತರು ಇವತ್ತು ಶಾಹಪೂರದಲ್ಲಿನ ಜೆಡ್ ಗಲ್ಲಿ,ಭೋಜ ಗಲ್ಲಿ,ಮೆಲಗೆ ಗಲ್ಲಿ,ಅಳವಾನ್ ಗಲ್ಲಿ,ಬಸವನ ಗಲ್ಲಿ,ಕೋರೆ ಗಲ್ಲಿ,ಸರಾಫ್ ಗಲ್ಲಿ,ಖಡೆಬಜಾರ್ ಶಾಹಪೂರ್, ಆನಂದ ನಗರ ವಡಗಾಂವ, ಅನಗೋಳ ವಿಭಾಗಸಹ ವಿವಿಧ ಭಾಗದಲ್ಲಿ ಮನೆ ಮನೆಗೆ ಹೋಗಿ ಡೆಂಗ್ಯು ಹಾಗೂ ಚಿಕನ್ ಗುನಿಯಾ ಪ್ರತಿಬಂಧಕ ಲಸಿಕರಣವನ್ನು ವಿತರಿಸುವ ಕಾರ್ಯಕ್ರಮವನ್ನು ಚಾಲನೆ ನಿಡಲಾಯಿತು.

ಈ ಸಂಧರ್ಭದಲ್ಲಿ ಶ್ರೀರಾಮ ಸೇನಾ ಹಿಂದೂಸ್ತಾನ ರಾಷ್ಟ್ರೀಯ ಅಧ್ಯಕ್ಷರಾದ ರಮಾಕಾಂತ ಕೊಂಡುಸ್ಕರ, ಸಂತೋಷ್, ಭರತ, ರಾಜು, ಬಾಬು, ಅವಿನಾಶ್, ರಾಹುಲ್, ಅಭಿಜಿತ್, ಆಶಿಶ್ ಮುಂತಾದ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.


Gadi Kannadiga

Leave a Reply