This is the title of the web page
This is the title of the web page

Please assign a menu to the primary menu location under menu

State

ಮಾಜಿ ದೇವದಾಸಿ ಮಹಿಳೆಯರಿಗೆ ಆರೋಗ್ಯ ತಪಾಸಣಾ ಕಾರ್ಯಕ್ರಮ


ಗದಗ ಜನೇವರಿ ೦೫ : ಬೆಂಗಳೂರು ದೇವದಾಸಿ ಪುನರ್ವಸತಿ ಯೋಜನೆ ಜಿಲ್ಲಾ ಘಟಕ ಗದಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರದಂದು ಮಾಜಿ ದೇವದಾಸಿ ಮಹಿಳೆಯರಿಗಾಗಿ ತಾಲೂಕ ಮಟ್ಟದ ಆರೋಗ್ಯ ತಪಾಸಣಾ ಕಾರ್ಯಕ್ರಮವು ಶಿರಹಟ್ಟಿ ತಾಲೂಕಿನ ಯಳವತ್ತಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜರುಗಿತು. ಸ್ತ್ರೀರೋಗ ತಜ್ಞರಾದ ಡಾ. ಗೋಪಾಲರಾಜ ಮತ್ತು ಪ್ರೀತಿ ಬಿರಾದರ ಕಾರ್ಯಕ್ರಮ ಉದ್ಘಾಟಿಸಿದರು. ಡಾ. ಪ್ರೀತಿ ಬಿರದಾರ ನೇತ್ರ ತಜ್ಞರು ಮಾತನಾಡಿ ಕಣ್ಣಿನ ಬಗ್ಗೆ ಹೇಗೆ ಕಾಳಜಿವಹಿಸಬೇಕು ಮತ್ತು ಚಿಕ್ಕಮಕ್ಕಳಿಗೆ ಈಗಿನ ಕಾಲದಲ್ಲಿ ಮೊಬೈಲ ಬಳಕೆಯಿಂದ ದೂರವಿಡಲು ಮಹಿಳೆಯರಿಗೆ ತಿಳಿಸಿದರು.
ಸ್ತ್ರೀರೋಗ ತಜ್ಞರಾದ ಡಾ. ಗೋಪಾಲರಾಜ ಕೊವಿಡ್-೧೯ ಬಗ್ಗೆ ಮತ್ತು ಸ್ತ್ರೀ ರೋಗಗಳ ಬಗ್ಗೆ ಮಾಜಿ ದೇವದಾಸಿ ಮಹಿಳೆಯರಿಗೆ ಸಲಹೆ ಮತ್ತು ಸೂಚನೆಯನ್ನು ನೀಡಿದರು. ದೇವದಾಸಿಯರ ಆರೋಗ್ಯ ತಪಾಸಣೆಯನ್ನುಮಾಡಿ ಸೂಕ್ತ ಚಿಕಿತ್ಸೆ ನೀಡಿದರು.
ಸಿದ್ದಾರ್ಥ ಸರ್ವಿ ಸಂಯೋಜಕ ರುರಿಟಸೆಟ್, ಹುಲಕೋಟಿ ಇವರು ಮಹಿಳೆಯರ ಮಕ್ಕಳಿಗೆ ರಿಟಸೆಟ್ ಹುಲಕೋಟಿಯಲ್ಲಿ ಹೈನುಗಾರಿಕೆ, ಕುರಿಸಾಕಾಣಿಕೆ. ಮೋಬೈಲ ರಿಪೇರಿ, ಟೈಲರಿಂಗ ಹಾಗೂ ಇತರೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಕೊಡಲಾಗುವದು. ಮಾಜಿ ದೇವದಾಸಿ ಮಕ್ಕಳನ್ನು ಈ ತರಬೇತಿ ಸದುಪಯೋಗ ಪಡೆಯಲು ಹೇಳಿದರು.
ಕಾರ್ಯಕ್ರಮದ ಸ್ವಾಗತ ಹಾಗೂ ನಿರೂಪಣೆಯನ್ನು ದೇವದಾಸಿ ಪುನರ್ವಸತಿ ಯೋಜನಾ ಅನುಷ್ಠಾನಾಧಿಕಾರಿ ಸಮೀರ ಗಡವಾಲೆ ನಿರ್ವಹಿಸಿದರು. ಇಲಾಖೆಯ ಇತರೆ ಸಿಬ್ಭಿಂದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


Gadi Kannadiga

Leave a Reply